ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಕಸಬ್ ಕೇಸಿನಿಂದ ಹಿಂತೆಗೆಯಲು ಅಬ್ಬಾಸ್‌‌ಗೆ ಮುಸ್ಲಿಮರ ಒತ್ತಾಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಸಬ್ ಕೇಸಿನಿಂದ ಹಿಂತೆಗೆಯಲು ಅಬ್ಬಾಸ್‌‌ಗೆ ಮುಸ್ಲಿಮರ ಒತ್ತಾಯ
ಮುಂಬೈದಾಳಿಕೋರರಲ್ಲಿ ಜೀವಂತ ಸೆರೆಸಿಕ್ಕಿರುವ ಏಕೈಕ ಉಗ್ರ ಅಜ್ಮಲ್ ಅಮೀರ್ ಕಸಬ್ ಪರ ವಕೀಲಿಕೆಯಿಂದ ಹಿಂತೆಗೆಯುವಂತೆ ಕೆಲವು ಮುಸ್ಲಿಂ ಸಂಘಟನೆಗಳು ಒತ್ತಾಯಿಸಿವೆ ಎಂದು ನ್ಯಾಯವಾದಿ ಎಸ್.ಜಿ. ಅಬ್ಬಾಸ್ ಕಾಜ್ಮಿ ಹೇಳಿದ್ದಾರೆ. ಆದರೆ ತಾನು ಪ್ರಕರಣದಿಂದ ಹಿಂದೆ ಸರಿಯುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

"ನಾನೊಬ್ಬ ವೃತ್ತಿಪರ ವಕೀಲನಾಗಿದ್ದು, ಕಸಬ್‌ನನ್ನು ಪ್ರತಿನಿಧಿಸಲು ನ್ಯಾಯಾಲಯದ ನಿರ್ದೇಶನಗಳಿಗೆ ಅನುಸಾರವಾಗಿ ಮುಂದಾಗಿದ್ದೇನೆ" ಎಂಬುದಾಗಿ ಪಿಟಿಐ ಸುದ್ದಿಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.

"ಈ ನಿರ್ಧಾರಕ್ಕೆ ನನ್ನ ಕುಟುಂಬ ಮತ್ತು ಸ್ನೇಹಿತರು ಬೆಂಬಲ ವ್ಯಕ್ತಪಡಿಸಿದ್ದಾರೆ. ಆದರೆ ನನ್ನ ಸುಮುದಾಯದ ಕೆಲವು ಸದಸ್ಯರು ಇದನ್ನು ಸೂಕ್ತ ಸ್ಫೂರ್ತಿಯಿಂದ ಪರಿಗಣಿಸಲಿಲ್ಲ ಮತ್ತು ಪ್ರಕರಣದಿಂದ ಹಿಂತೆಗೆಯೆಬೇಕು ಎಂಬ ಸೂಚನೆಗಳನ್ನು ಕಳುಹಿಸಿದ್ದಾರೆ. ಇವರಿಗೆ ನನ್ನ ಉತ್ತರವೆಂದರೆ, ನ್ಯಾಯಾಲಯವು ನನ್ನನ್ನು ನೇಮಿಸಿದೆ, ಹಾಗೂ ಕಸಬ್‌ನ ಪರವಾದಿಸಲು ತನಗೆ ಯಾವುದೇ ವೈಯಕ್ತಿಕ ಹಿತಾಸಕ್ತಿಯಿಲ್ಲ ಎಂಬುದಾಗಿದೆ" ಎಂದವರು ಕಸಬ್ ಪ್ರಕರಣವನ್ನು ವಹಿಸಿಕೊಂಡಿರುವುದಕ್ಕೆ ಸಾರ್ವಜನಿಕ ಪ್ರತಿಕ್ರಿಯೆ ಹೇಗಿತ್ತು ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸುತ್ತಾ ನುಡಿದರು.

ಕಸಬ್ ಪರ ವಾದಿಸುವುದರಲ್ಲಿ ತಪ್ಪೇನಿಲ್ಲ. ಆತನ ಪರವಾಗಿ ಪ್ರತಿನಿಧಿಸಲಾಗಿದೆ ಎಂಬ ಸಂದೇಶ ಎಲ್ಲರಿಗೂ ರವಾನೆಯಾಗಬೇಕಿದೆ, ಇಲ್ಲವಾದರೆ, ಆತನಿಗೆ ತನ್ನ ಸಮರ್ಥನೆಗೆ ಅವಕಾಶ ಲಭಿಸಿಲ್ಲ ಎಂಬ ಹಿನ್ನೆಲೆಯಲ್ಲಿ ನ್ಯಾಯದಾನದ ವೇಳೆ ಶಿಕ್ಷೆಯಿಂದ ತಪ್ಪಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

ಕಸಬ್ ಪರ ವಾದಿಸಲು ಯಾರೂ ಮುಂದಾಗದಿರುವ ಕಾರಣ, ರಾಷ್ಟ್ರದ ಮತ್ತು ನ್ಯಾಯದ ಹಿತದೃಷ್ಟಿಯಿಂದ ಪ್ರಕರಣವನ್ನು ವಹಿಸಿಕೊಳ್ಳುವುದು ಸೂಕ್ತ ಎಂದು ತನಗನಿಸಿತ್ತು ಎಂಬುದಾಗಿ ಕಾಜ್ಮಿ ಹೇಳಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಎಲ್ಟಿಟಿಇ ಉಗ್ರಗಾಮಿ ಸಂಘಟನೆಯಲ್ಲವೆಂದು ಹೇಳಿಲ್ಲ: ಕರುಣಾ
ಅಸ್ಸಾಂ: 5 ಉಗ್ರರು ಸೇನಾಪಡೆ ಗುಂಡಿಗೆ ಬಲಿ
ಬೇಹುಗಾರಿಕಾ ಉಪಗ್ರಹ ರಿಸಾಟ್-2 ಯಶಸ್ವೀ ಉಡಾವಣೆ
ಮುಂಬೈ: ಏರ್‌ ಇಂಡಿಯಾ ಕಚೇರಿಯಲ್ಲಿ ಆಕಸ್ಮಾತ್ ಬೆಂಕಿ
ಒರಿಸ್ಸಾ: ಬಿರುಬಿಸಿಲಿಗೆ 23 ಮಂದಿ ಬಲಿ
ಬಾಬ್ರಿ ಧ್ವಂಸಕ್ಕೆ ಕಾಂಗ್ರೆಸ್ ಹೊಣೆಯಲ್ಲ: ಪ್ರಧಾನಿ ಸಿಂಗ್