ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ನೇತೃತ್ವದ ಮಿತ್ರಪಕ್ಷವು ಪೂರ್ಣಪ್ರಮಾಣದ ಬಹುಮತ ಗಳಿಸಲಿದೆಯಲ್ಲದೆ ಬಿಜೆಪಿ ಎಕೈಕ ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆಯೆಂಬ ವಿಶ್ವಾಸವನ್ನು ಬಿಜೆಪಿಯ ಹಿರಿಯ ನಾಯಕಿ ಹಾಗೂ ಪಕ್ಷದ ಛತ್ತೀಸ್‌ಗಢ್, ಮಧ್ಯಪ್ರದೇಶ ಮತ್ತು ಝಾರ್ಖಂಡ್ ರಾಜ್ಯದ ಉಸ್ತುವಾರಿ ಹೊಣೆ ಹೊತ್ತಿರುವ ಸುಷ್ಮಾ ಸ್ವರಾಜ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. |