ತಕ್ಷಣದ ಹಾಗೂ ಶಾಶ್ವತ ಕದನವಿರಾಮ ಘೋಷಿಸುವಂತೆ ಶ್ರೀಲಂಕಾಗೆ ಗಡು ವಿಧಿಸಬೇಕು ಎಂದು ತಮಿಳ್ನಾಡು ಮುಖ್ಯಮಂತ್ರಿ ಕರುಣಾನಿಧಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.ಪ್ರಧಾನಿ ಮನಮೋಹನ್ ಸಿಂಗ್, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿ ಅವರಿಗೆ ಟೆಲಿಗ್ರಾಮ್ ಕಳುಹಿಸಿರುವ ಕರುಣಾನಿಧಿ, ಶ್ರೀಲಂಕಾದಲ್ಲಿ ಯುದ್ಧಭೀತಿಯು ಉದ್ಭವಿಸಿದ್ದು, ತಮಿಳರ ಪರಿಸ್ಥಿತಿ ಇನ್ನಷ್ಟು ಚಿಂತಾಜನಕವಾಗಿದೆ ಎಂದು ಹೇಳಿದ್ದಾರೆ." ವಿಶ್ವ ಸಂಸ್ಥೆ ಸೇರಿದಂತೆ ಎಲ್ಲಾ ದೇಶಗಳು ಕದನವಿರಾಮ ಘೋಷಿಸುವಂತೆ ಶ್ರೀಲಂಕಾದ ಮೇಲೆ ಒತ್ತಡ ಹೇರಿದ್ದಾರೆ. ತಕ್ಷಣದ ಹಾಗೂ ಶಾಶ್ವತ ಕದನವಿರಾಮ ಘೋಷಿಸುವ ಮೂಲಕ ಅಲ್ಲಿರುವ ಲಕ್ಷಗಟ್ಟಲೆ ತಮಿಳರನ್ನು ರಕ್ಷಿಸಬೇಕು" ಎಂಬುದಾಗಿ ಅವರು ಟೆಲಿಗ್ರಾಂನಲ್ಲಿ ಒತ್ತಾಯಿಸಿದ್ದಾರೆ.ಶ್ರೀಲಂಕಾದೊಂದಿಗಿನ ಎಲ್ಲಾ ರಾಜತಾಂತ್ರಿಕ ಸಂಬಂಧಗಳನ್ನು ಕಡಿದುಕೊಳ್ಳಬೇಕು ಎಂಬುದಾಗಿ ಒತ್ತಾಯಿಸಿ ಕಳೆದ ವಾರ ಕರುಣಾನಿಧಿಯವರು ಈ ಮೂರು ನಾಯಕರಿಗೆ ತಂತಿ ಸಂದೇಶ ನೀಡಿದ್ದರು.ಎಲ್ಟಿಟಿಇ ಮುಖ್ಯಸ್ಥ ಪ್ರಭಾಕರನ್ ಉಗ್ರನೆಂದು ತನಗನಿಸುವುದಿಲ್ಲ, ಹಾಗೂ ಆತ ತನ್ನ ಉತ್ತಮ ಸ್ನೇಹಿತ ಎಂದು ಹೇಳವ ಮೂಲಕ ಕರುಣಾನಿಧಿ ಎರಡು ದಿನಗಳ ಹಿಂದೆ ತನ್ನನ್ನು ತಾನು ವಿವಾದಕ್ಕೊಡ್ಡಿಕೊಂಡಿದ್ದರು. |