ನಕ್ಸಲ್ ದಾಳಿ ಭೀತಿಯ ಹಿನ್ನಲೆಯಲ್ಲಿ ಎರಡನೇ ಹಂತದ ಲೋಕಸಭಾ ಚುನಾವಣೆ ನಡೆಯುತ್ತಿರುವ ಬಿಹಾರದಲ್ಲಿ ಕೇಂದ್ರ ಸರಕಾರ ಹೆಚ್ಚುವರಿ ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಿದೆ. ಆಂಧ್ರಪ್ರದೇಶ, ಜಾರ್ಖಂಡ್, ಒರಿಸ್ಸಾ, ಉತ್ತರ ಪ್ರದೇಶ ರಾಜ್ಯಗಳಲ್ಲೂ ಕಟ್ಟೆಚ್ಚರ ವಹಿಸಬೇಕು ಎಂದು ಗೃಹ ಸಚಿವಾಲಯ ರಕ್ಷಣಾ ಇಲಾಖೆಯನ್ನು ಸೂಚಿಸಿದೆ. |