ಬಿಹಾರದ ಗಯಾ ಜಿಲ್ಲೆಯಲ್ಲಿ ಟ್ರಕ್ ಚಾಲಕನನ್ನೊಬ್ಬನ್ನು ಕೊಂದಿರುವ ಶಂಕಿತ ನಕ್ಸಲರು ಹನ್ನೊಂದು ಟ್ರಕ್‌ಗಳಿಗೆ ಬೆಂಕಿ ಹಾಕಿದ್ದು, ಔರಂಗಾಬಾದ್ ಜಿಲ್ಲೆಯ ಕ್ಷೇತ್ರಾಭಿವೃದ್ಧಿ ಕಚೇರಿಯೊಂದಕ್ಕೆ ಬೆಂಕಿ ಹಾಕಿರುವ ಘಟನೆ ಬುಧವಾರ ನಸುಕಿನಲ್ಲಿ ನಡೆದಿದೆ.
ಸುಮಾರು 100ಕ್ಕಿಂತಲೂ ಅಧಿಕ ನಕ್ಸಲರು ಇಲ್ಲಿಂದ ಸುಮಾರು 100 ಕಿಲೋಮೀಟರ್ ದೂರದಲ್ಲಿರುವ ಗಯಾದ ಬಾರಚಟ್ಟಿ ಎಂಬಲ್ಲಿ ವಾನದಟ್ಟಣೆಯ ಗ್ರಾಂಡ್ ಟ್ರಂಕ್ ರಸ್ತೆಯಲ್ಲಿ ಬಂದೂಕಿನ ಮೊನೆಯೊಂದಿಗೆ ಬೆದರಿಸಿ ಟ್ರಕ್‌ಗಳನ್ನು ಬಲವಂತವಾಗಿ ತಡೆದು 11 ಟ್ರಕ್‌ಗಳಿಗೆ ಬೆಂಕಿ ಹಚ್ಚಿದ್ದಾರೆ. ನಕ್ಸಲರು ಮಧ್ಯರಾತ್ರಿ 12.30ರ ವೇಳೆಗೆ ಈ ಹಿಂಸಾಚಾರ ನಡೆಸಲಾಗಿದೆ.
ಔರಂಗಾಬಾದ್ ಜಿಲ್ಲೆಯ ದೇವ್ ಕ್ಷೇತ್ರಾಭಿವೃದ್ಧಿ ಕಚೇರಿಯನ್ನು ನಕ್ಸಲರು ಸ್ಫೋಟಿಸಿದ್ದಾರೆ ಎಂದು ಗಯಾ ಎಸ್ಪಿ ಎಂ.ಆರ್. ನಾಯಕ್ ಹೇಳಿದ್ದಾರೆ.
ಬಿಹಾರದ 40 ಲೋಕಸಭಾ ಸ್ಥಾನಗಳಲ್ಲಿ ಗುರುವಾರ 13 ಸ್ಥಾನಗಳಿಗೆ ಮತದಾನ ನಡೆಯಲಿದೆ. ಎಪ್ರಿಲ್ 16ರ ಮೊದಲ ಹಂತದಲ್ಲಿ 13 ಕ್ಷೇತ್ರದಲ್ಲಿ ಮತದಾನ ನಡೆದಿದ್ದರೆ, ಎಪ್ರಿಲ್ 30 ಹಾಗೂ ಮೇ 7ರ ಮುಂದಿನ ಸುತ್ತುಗಳಲ್ಲಿ ಉಳಿದ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. |