ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > 17 ರಾಜ್ಯಗಳಲ್ಲಿ 2ನೆ ಹಂತದ ಮತದಾನ ಆರಂಭ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
17 ರಾಜ್ಯಗಳಲ್ಲಿ 2ನೆ ಹಂತದ ಮತದಾನ ಆರಂಭ
PTI
ಹದಿನೈದನೆ ಲೋಕಸಭಾ ಮಹಾಚುನಾವಣೆಯ ಅಂಗವಾಗಿ ಕರ್ನಾಟಕ ಸೇರಿದಂತೆ 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಗುರುವಾರ ಎಡನೇ ಹಂತದ ಮತದಾನ ಆರಂಭವಾಗಿದೆ. ರಾಷ್ಟ್ರಾದ್ಯಂತ 140 ಸ್ಥಾನಗಳಿಗೆ ನಡೆಯುವ ಚುನಾವಣೆಗಾಗಿ ಮುಂಜಾನೆ ಏಳು ಗಂಟೆಗೆ ಮತದಾನ ಆರಂಭವಾಗಿದೆ. 2,22,350 ಮತಗಟ್ಟೆಗಳಲ್ಲಿ ಮತದಾನ ನಡೆಯುತ್ತಿದ್ದು, ಇಂದಿನ ಚುನಾವಣೆಯಲ್ಲಿ 194 ದಶಲಕ್ಷ ಮಂದಿ ಮತದಾನಕ್ಕೆ ಅರ್ಹರಾಗಿದ್ದಾರೆ.

ಎರಡನೆಯ ಹಂತದಲ್ಲಿ 121 ಮಹಿಳೆಯರು ಸೇರಿದಂತೆ 2,041 ಅಭ್ಯರ್ಥಿಗಳು ತಮ್ಮ ಅದೃಷ್ಟವನ್ನು ಪರೀಕ್ಷೆಗೊಡ್ಡಿಕೊಂಡಿದ್ದಾರೆ. ಆಂಧ್ರಪ್ರದೇಶದ 20, ಅಸ್ಸಾಮಿನ 11, ಬಿಹಾರದ 12, ಗೋವಾದ ಎರಡು, ಜಮ್ಮು ಕಾಶ್ಮೀರದ ಒಂದು, ಕರ್ನಾಟಕದ 17, ಮಧ್ಯಪ್ರದೇಶದ 13, ಮಹಾರಾಷ್ಟ್ರದ 25, ಒರಿಸ್ಸಾದ 11, ತ್ರಿಪುರಾದ ಎರಡು, ಉತ್ತರಪ್ರದೇಶದ 17 ಮತ್ತು ಜಾರ್ಖಂಡ್‌ನ ಎಂಟು ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ.

ಇದೇವೇಳೆ ಆಂಧ್ರಪ್ರದೇಶ ಹಾಗೂ ಒರಿಸ್ಸಾದಲ್ಲಿ ದ್ವಿತೀಯ ಹಾಗೂ ಅಂತಿಮ ಹಂತದ ವಿಧಾನಸಭಾ ಚುನಾವಣೆಯೂ ನಡೆಯುತ್ತಿದೆ. ಆಂಧ್ರಪ್ರದೇಶದಲ್ಲಿ 140 ಹಾಗೂ ಒರಿಸ್ಸಾದಲ್ಲಿ 77 ವಿಧಾನಸಭಾ ಸ್ಥಾನಗಳಿಗೆ ಮತದಾನ ನಡೆಯುತ್ತಿದೆ.

ಉತ್ತರ ಪ್ರದೇಶದ ಅಮೇಠಿಯಿಂದ ನೆಹರೂ ಕುಟುಂಬದ ಕುಡಿ ರಾಹುಲ್ ಗಾಂಧಿ ಆಯ್ಕೆ ಬಯಸಿದ್ದಾರೆ. ಮಹಾರಾಷ್ಟ್ರದ ಮಾಧಾದಿಂದ ಪವಾರ್, ಮಧ್ಯಪ್ರದೇಶದ ವಿದಿಶಾದಿಂದ ಸುಷ್ಮಾ ಸ್ವರಾಜ್ ಹಾಗೂ ಬಿಹಾರದ ಹಾಜಿಪುರದಿಂದ ಪಾಸ್ವಾನ್ ಕಣಕ್ಕಿಳಿದಿದ್ದಾರೆ.

ಕರ್ನಾಟಕದಲ್ಲಿ
ಮಾಜಿ ಮುಖ್ಯಮಂತ್ರಿಗಳಾದ ಎಂ.ವೀರಪ್ಪ ಮೊಯ್ಲಿ, ಧರಂಸಿಂಗ್, ಎಚ್.ಡಿ.ಕುಮಾರಸ್ವಾಮಿ, ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ, ಮಾಜಿ ಸಚಿವರಾದ ಅನಂತ್ ಕುಮಾರ್, ಜಾಫರ್ ಷರೀಫ್, ಮಾರ್ಗರೇಟ್ ಆಳ್ವ, ಸಚಿವ ರೇವೂನಾಯಕ ಬೆಳಮಗಿ, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ 17ಕ್ಷೇತ್ರಗಳಲ್ಲಿ 273ಮಂದಿ ಅಭ್ಯರ್ಥಿಗಳ ಹಣಾಹಣಿ ನಡೆಯುತ್ತಿದೆ.

ರಾಜ್ಯದ ಚಿಕ್ಕೋಡಿ, ಬೆಳಗಾವಿ, ಬಿಜಾಪುರ, ಗುಲ್ಬರ್ಗಾ, ರಾಯಚೂರು, ಬೀದರ್, ಕೊಪ್ಪಳ, ಬಳ್ಳಾರಿ, ಉತ್ತರ ಕನ್ನಡ, ಚಿತ್ರದುರ್ಗ, ತುಮಕೂರು, ಬೆಂಗಳೂರು ಗ್ರಾಮಾಂತರ, ಬೆಂಗಳೂರು ಸೆಂಟ್ರಲ್, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಕ್ಷೇತ್ರಗಳಲ್ಲಿ ಮತದಾನ ಆರಂಭಗೊಂಡಿದೆ.

ಗುರುವಾರ ಬೆಳಿಗ್ಗೆ 7ರಿಂದ ಸಂಜೆ ಐದರವರೆಗೆ ಮತದಾನ ನಡೆಯಲಿದ್ದು, ಎಲ್ಲೆಡೆ ಪೊಲೀಸ್ ಸರ್ಪಗಾವಲು ನಿಯೋಜಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿಗಳು ತಿಳಿಸಿದ್ದಾರೆ. 17ಕ್ಷೇತ್ರಗಳ ಪೈಕಿ ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಗರಿಷ್ಠ 37ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದರೆ, ಚಿಕ್ಕೋಡಿ ಹಾಗೂ ಬಳ್ಳಾರಿಯಲ್ಲಿ ಏಳು ಮಂದಿ ಅಖಾಡದಲ್ಲಿದ್ದಾರೆ.

ಮೊದಲ ಹಂತದಲ್ಲಿ 2,57,85,835 ಮಂದಿ ಮತದಾರರು ಮತ ಚಲಾಯಿಸುವ ಹಕ್ಕು ಪಡೆದಿದ್ದಾರೆ. 1.62ಲಕ್ಷ ಸಿಬ್ಬಂದಿಯನ್ನು ನೇಮಿಸಲಾಗಿದೆ. ಪ್ರಥಮ ಹಂತದಲ್ಲಿ 29,126ಮತಗಟ್ಟೆಗಳಿದ್ದು, 6557 ಸೂಕ್ಷ್ಮ ಹಾಗೂ 3,522 ಅತಿಸೂಕ್ಷ್ಮ ಮತಗಟ್ಟೆಗಳಿವೆ. ಅತಿಸೂಕ್ಷ್ಮ ಮತಗಟ್ಟೆಗಳಲ್ಲಿ ಕ್ಯಾಮೆರಾ ಕೂಡ ಅಳವಡಿಸಲಾಗಿದೆ. 45ಸಾವಿರ ವಿದ್ಯುನ್ಮಾನ ಮತಯಂತ್ರ ಬಳಸಲಾಗುತ್ತಿದೆ.

17ಲೋಕಸಭಾ ಕ್ಷೇತ್ರಗಳ ಜೊತೆ ಬೀದರ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸಹ ಮತದಾನ ನಡೆಯಲಿದ್ದು, ಇಲ್ಲಿ ಮಾಜಿ ಸಚಿವ ಗುರುಪಾದಪ್ಪ ಅವರ ಪುತ್ರ ಸೂರ್ಯಕಾಂತ, ಜೆಡಿಎಸ್‌ನಿಂದ ಮಾರುತಿ ಕಾಶೆಂಪೂರ್ ಸೇರಿದಂತೆ 18ಮಂದಿ ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಆರೋಪಪಟ್ಟಿಯ ಉರ್ದು ತರ್ಜಮೆ: ಕಸಬ್ ವಿನಂತಿಗೆ ನಕಾರ
ಪಿಲಿಭಿತ್‌ನಿಂದ ನಾಮಪತ್ರ ಸಲ್ಲಿಸಿದ ವರುಣ್ ಗಾಂಧಿ
ದ್ವಿತೀಯ ಹಂತದ ಚುನಾವಣೆಗೆ ರಣಾಂಗಣ ಸಜ್ಜು
ಅಬ್ಬಬ್ಬಾ... ಎಂಥಾ ಬಿಸ್ಲು, ಎಂಥಾ ಬಿಸ್ಲು!
ಮಾಯಾಗೆ ಬೆದರಿಕೆ: ದಿಗ್ವಿಜಯ್ ಮೇಲೆ ಕೇಸು
ಬಿಹಾರ: ನಕ್ಸಲರಿಂದ ಕಚೇರಿಗೆ ಬಾಂಬ್, ಟ್ರಕ್‌ಗಳಿಗೆ ಬೆಂಕಿ