ಪಕ್ಷದ ವರಿಷ್ಠ ಲಾಲ್ ಕೃಷ್ಣ ಆಡ್ವಾಣಿಯವರ ವಿರುದ್ಧ ವೈಯಕ್ತಿಕ ಟೀಕೆ ಮಾಡುತ್ತಿರುವ ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ವಿರುದ್ಧ ಬಿಜೆಪಿ ಅಧ್ಯಕ್ಷ ರಾಜ್‌ನಾಥ್ ಸಿಂಗ್ ವಾಗ್ದಾಳಿ ನಡೆಸಿದ್ದಾರೆ." ನಮ್ಮ ನಾಯಕರು ಪ್ರಧಾನವಾಗಿ ಹೇಳಿದ್ದೇನೆಂದರೆ ಯುಪಿಎ ಸರ್ಕಾರ ದುರ್ಬಲವಾಗಿದೆ ಎಂಬುದಾಗಿ. ಯುಪಿಎ ಸರ್ಕಾರದ ವಿರುದ್ಧದ ಹೇಳಿಕೆಯನ್ನು ಮನಮೋಹನ್ ಸಿಂಗ್ ಅವರು ವೈಯಕ್ತಿವಾಗಿ ಪರಿಗಣಿಸಬಾರದು" ಎಂಬುದಾಗಿ ರಾಜ್‌ನಾಥ್ ಸಿಂಗ್ ಹೇಳಿದ್ದಾರೆ." ನಾವು ಪ್ರಧಾನ ವಿರೋಧ ಪಕ್ಷವಾಗಿರುವಾಗ ನಮ್ಮ ಹೇಳಿಕೆಗಳನ್ನು ಪ್ರಧಾನಿಯವರು ರಚನಾತ್ಮಕವಾಗಿ ಪರಿಗಣಿಸಬೇಕು. ಪ್ರಧಾನಿಯವರು ತಾವು ಹೊಂದಿರುವ ಸ್ಥಾನದ ಘನತೆಗೆ ತಕ್ಕಂತೆ ವರ್ತಿಸಬೇಕೇ ಹೊರತು ವೈಯಕ್ತಿಕ ನಿಂದನೆಗಿಳಿಯಬಾರದು ಎಂಬುದಾಗಿ ರಾಜ್‌ನಾಥ್ ಸಿಂಗ್ ಹೇಳಿದ್ದಾರೆ." ಅಗತ್ಯವೇ ಇಲ್ಲದ ಕೆಸರೆರೆಚಾಟವನ್ನು ಆರಂಭಿಸಿದ್ದೇ ಕಾಂಗ್ರೆಸ್. ಅವರು ಬಿಜೆಪಿ ನಾಯಕರ ವಿರುದ್ಧ ವೈಯಕ್ತಿಕ ಟೀಕೆಗಳನ್ನು ಮಾಡಲು ಆರಂಭಿಸಿದರು. ಸೋನಿಯಾ ಗಾಂಧಿ ಅವರಂತೂ ಆಡ್ವಾಣಿ ಅವರು ಆರೆಸ್ಸೆಸ್ ಗುಲಾಮ ಎಂಬಲ್ಲಿಯವರೆಗೆ ಹೋದರು" ಎಂಬುದಾಗಿ ಅವರು ಆಪಾದಿಸಿದರು.ಕುಬುಂಬವೊಂದರ ಗುಲಾಮವಲ್ಲ ಬಿಜೆಪಿಯು ತತ್ವ ಸಿದ್ಧಾಂತಕ್ಕೆ ಬದ್ಧವಾದ ಪಕ್ಷವಾಗಿದ್ದು, ಇಲ್ಲಿ ಅನುಯಾಯಿಗಳು ಅಥವಾ ಗುಲಾಮರಿಲ್ಲ. ಅದರಲ್ಲೂ, ನಮ್ಮ ಪಕ್ಷವಂತೂ ಕುಟುಂಬ ಒಂದರ ಗುಲಾಮವಂತೂ ಅಲ್ಲವೇ ಅಲ್ಲ ಎಂದು ಅವರ ನುಡಿದರು. |