ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟಗೊಂಡ ಬಳಿಕವಷ್ಟೇ ಮುಂದಿನ ಸರಕಾರ ರಚನೆಯಲ್ಲಿ ಎಡಪಕ್ಷಗಳ ಬೆಂಬಲ ಪಡೆಯುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವು ಎಂದು ಕಾಂಗ್ರೆಸ್ ಪಕ್ಷದ ವಕ್ತಾರ ಅಭಿಷೇಕ್ ಸಿಂಘ್ವಿ ಹೇಳಿದ್ದಾರೆ. ಎಡಪಕ್ಷಗಳ ಬೆಂಬಲ ಪಡೆಯುವ ಬಗ್ಗೆ ಯುಪಿಎ ಮಿತ್ರಪಕ್ಷಗಳು ಬಹಿರಂಗ ಅಭಿಪ್ರಾಯ ವ್ಯಕ್ತಪಡಿಸಿ ಹಿನ್ನಲೆಯಲ್ಲಿ ಕಾಂಗ್ರೆಸ್ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ. |