ಚುನಾವಣಾ ಕಣ ರಂಗೇರುತ್ತಿದ್ದಂತೆ ಇದೀಗ ಮಹಾರಾಷ್ಟ್ರ ರಾಜರಕೀಯ ರಂಗದಲ್ಲೊಂದು ಹೊಸ ಸುದ್ದಿ ತೇಲಿ ಬಂದಿದೆ. ಮಹಾರಾಷ್ಟ್ರದ ಸಚಿವರೊಬ್ಬರು ತಮ್ಮ ಪತ್ನಿಯಿಂದ ಚೆನ್ನಾಗಿ ಹೊಡೆತ ತಿಂದ ಸುದ್ದಿಯೀಗ ಮಹಾರಾಷ್ಟ್ರ ರಾಜಕೀಯದಲ್ಲಿ ರಂಗೇರುತ್ತಿದೆ. ಪತ್ನಿ ಹೊಡೆಯಲು ಪ್ರಮುಖ ಕಾರಣ ಮತ್ತೊಬ್ಬ ಮಹಿಳೆಯೊಂದಿಗೆ ಸಚಿವರು ಸಂಬಂಧ ಇರಿಸಿಕೊಂಡಿರುವುದು.
ದಕ್ಷಿಣ ಮುಂಬೈಯ ಮನೋರಾ ಶಾಸಕರ ಭವನದಲ್ಲಿ ಈ ಘಟನೆ ನಡೆದಿದೆ. ಸಚಿವರು ಇನ್ನೊಬ್ಬ ಮಹಿಳೆಯೊಂದಿಗೆ ಶಾಸಕರ ಭವನದ ಮೊದಲ ಮಹಡಿಯಲ್ಲಿ ಇದ್ದರು. ಇದ್ದಕ್ಕಿದ್ದಂತೆ ಅಲ್ಲಿಗೆ ಬಂದ ಶಾಸಕರ ಪತ್ನಿ ಒಳಗೆ ಬಂದಾಗ ತನ್ನ ಗಂಡ ಇನ್ನೊಬ್ಬ ಮಹಿಳೆಯೊಂದಿಗೆ ಇರುವುದು ಕಂಡಿತು. ಸಿಟ್ಟು ನೆತ್ತಿಗೇರಿದ ಪತ್ನಿ ಗಂಡನಿಗೂ, ಆತನ ಜತೆಗೆ ಇದ್ದ ಮಹಿಳೆಗೂ ಚೆನ್ನಾಗಿ ಬಾರಿಸಿದ್ದಾಳೆ. ಜತೆಗೆ ಇನ್ನೊಮ್ಮೆ ತನ್ನ ಗಂಡನ ಹತ್ತಿರ ತಿರುಗಿಯೂ ನೋಡಬಾರದೆಂದು ಎಚ್ಚರಿಕೆ ನೀಡಿದ್ದಾಳೆ.
ಹೆಂಡತಿ ಪೆಟ್ಟು ಕೊಟ್ಟರೂ ಯಾವುದೇ ಅಧಿಕೃತ ದೂರು ದಾಖಲಾಗಿಲ್ಲ. ಸಚಿವರು ವಿದರ್ಭ ಕ್ಷೇತ್ರದಿಂದ ಹೊಸದಾಗಿ ಶಾಸಕರಾಗಿ ಆಯ್ಕೆಯಾಗಿದ್ದು, ಎನ್‌ಸಿಪಿಯಿಂದ ಸ್ಪರ್ಧಿಸಿದ್ದರು ಎಂದು ಮೂಲಗಳು ತಿಳಿಸಿವೆ.
ಮೂಲಗಳ ಪ್ರಕಾರ, ಸಚಿವರ ಹೆಂಡತಿ ನಾಗಪುರದ ಮನೆಯಲ್ಲಿ ವಾಸಿಸುತ್ತಿದ್ದಳು. ಸಚಿವರಿಗೆ ತಿಳಿದ ಪ್ರಕಾರ, ಪತ್ನಿ ಮಾರನೇ ದಿನ ಮುಂಬೈಗೆ ವಿಮಾನದಲ್ಲಿ ಬರುವವಳಿದ್ದಳು. ಆದರೆ, ಒಂದು ದಿನ ಮೊದಲೇ ಗಂಡನನ್ನು ನೋಡಲು ಓಡಿ ಬಂದ ವಿಷಯ ಸ್ವತಃ ಸಚಿವನಾದ ಗಂಡನಿಗೇ ಗೊತ್ತಿರಲಿಲ್ಲ. ಹಾಗಾಗಿ ಹಂಡತಿಯ ಎದುರು ಸಿಕ್ಕಿಬಿದ್ದಿದ್ದಾರೆ ಎಂದು ಮೂಲಗಳು ತಿಳಿಸಿವೆ. |