ತಮಿಳು ಹುಲಿಗಳ ಪರವಾಗಿ ತಮಿಳುನಾಡು ಮುಖ್ಯಮಂತ್ರಿ ಕರೆನೀಡಿದ ಬಂದ್‌ಗೆ ಎಐಎಡಿಎಂಕೆ ಬೆಂಬಲ ನೀಡದಿದ್ದುದಕ್ಕೆ ಕರುಣಾನಿಧಿ ತಮ್ಮ ತಮಿಳು ಪರ ಹೋರಾಟ ಕೆಲವು ವಿಶ್ವಾಸಘಾತುಕರಿಂದ ನಮ್ಮ ಹೋರಾಟಕ್ಕೆ ಎಂದೂ ಧಕ್ಕೆ ಬರಬಾರದು ಎಂದು ಜಯಲಲತಾ ವಿರುದ್ಧ ಮಾತಿನ ಚಾಟಿ ಬೀಸಿದ್ದಾರೆ.ಕೆಲವು ವಿಶ್ವಾಸಗಾತುಕರ ಟೀಕಗಳಿಂದ, ತಮಿಳು ಪರ ಕಾಳಜಿಗೆ ಎಂದೂ ಧಕ್ಕೆಯಾಗಬಾರದು ಎಂದು ಹೇಳಿರುವ ಕರುಣಾನಿಧಿ, ಈ ಮುಷ್ಕರವನ್ನು ಒಂದು ನಾಟಕ ಎಂದು ಜರಿಯುವ ಮಂದಿಯ ಬಗ್ಗೆ ತಲೆಕೆಡಿಸಬೇಕಾಗಿಲ್ಲ ಎಂದಿದ್ದಾರೆ. ಆದರೆ, ಎಲ್ಲ ತಮಿಳರೂ ಒಟ್ಟಾಗಿ ನಿಂತರೆ ಮಾತ್ರ ನಮ್ಮ ಗುರಿಯನ್ನು ತಲುಪಿ ವಿಜಯ ಸಾಧಿಸಬಹುದು ಎಂದೂ ಇದೇ ಸಂದರ್ಭ ಅವರು ಹೇಳಿದರು.ಗುರುವಾರ ಆಡಳಿತ ಪಕ್ಷ ಕರೆ ನೀಡಿದ್ದ ಬಂದ್‌ಗೆ ವಿರೋಧಪಕ್ಷವಾದ ಎಐಎಡಿಎಂಕೆ ಸಹಕಾರ ನೀಡಿರಲಿಲ್ಲ. ಹಾಗೂ ಈ ಬಂದ್‌ನ್ನು ಕೇವಲ ನಾಟಕ ಎಂದು ಟೀಕೆ ಮಾಡಿತ್ತು. ಪಕ್ಷಬೇಧವೆನ್ನದೆ ತಮಿಳು ಪರ ಹೋರಾಟಕ್ಕೆ ಕೈಜೋಡಿಸಬೇಕು ಎಂದು ಬಂದ್‌ಗೆ ಕರೆನೀಡಿದ್ದ ಸಂದರ್ಭ ಮುಖ್ಯಮಂತ್ರಿ ಕರುಣಾನಿಧಿ ಹೇಳಿದ್ದರು.ಶ್ರೀಲಂಕಾ ಸರ್ಕಾರದ ಒಡೆದು ಆಳುವ ನೀತಿಯ ಬಿಸಿ ತಮಿಳುನಾಡಿಗೂ ತಟ್ಟಿದೆ ಎಂದ ಕರುಣಾನಿಧಿ, ತಮಿಳುನಾಡಿನಲ್ಲೂ ಈಗ ಬಿರುಕು ಆರಂಭವಾಗಿದೆ ಎಂದು ಖೇದ ವ್ಯಕ್ತಪಡಿಸಿದರು.ಈ ಬಂದ್ ಮೂಲಕ ಕೇಂದ್ರಕ್ಕೆ ಬಿಸಿ ಮುಟ್ಟಿಸುವುದು ತಮಿಳಿಗರ ಗುರಿ. ಇದು ಕೇಂದ್ರಕ್ಕೆ ತಲುಪಿದೆ. ರಾಜ್ಯದಲ್ಲೇ ಹಲವೆಡೆ ಅಡೆತಡೆಗಳು ಎದುರಾದರೂ, ಬಂದ್ ಮೂಲಕ ತಮಿಳರು ಒಕ್ಕೊರಲಿನಿಂದ ಕೇಂದ್ರಕ್ಕೆ ನಮ್ಮ ಸಂದೇಶವನ್ನು ರವಾನಿಸಿದ್ದೇವೆ ಎಂದು ಕರುಣಾನಿಧಿ ಹೇಳಿದರು. |