ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಲೋಕಸಭೆಯ 107 ಸ್ಥಾನಗಳಿಗೆ ಪ್ರಚಾರ ಅಂತ್ಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಲೋಕಸಭೆಯ 107 ಸ್ಥಾನಗಳಿಗೆ ಪ್ರಚಾರ ಅಂತ್ಯ
ಮಹಾಸಮರದ ತೃತೀಯ ಹಂತದ ಮತದಾನಕ್ಕೆ ಆಖಾಡ ಸಿದ್ಧವಾಗಿದ್ದು, 107 ಕ್ಷೇತ್ರಗಳ ಅಭ್ಯರ್ಥಿಗಳು ತಮ್ಮ ಕೊನೇ ಕ್ಷಣದ ಬಹಿರಂಗ ಪ್ರಚಾರವನ್ನು ಅಂತ್ಯಗೊಳಿಸಿದ್ದಾರೆ. ಈ ಹಂತದ ಚುನಾವಣೆಯಲ್ಲಿ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ಎಲ್.ಕೆ. ಆಡ್ವಾಣಿ, ಕಾಂಗ್ರೆಸ್‌ನ ಅಧಿನಾಯಕಿ ಸೋನಿಯಾಗಾಂಧಿ, ಮಾಜಿ ಪ್ರಧಾನಿ ದೇವೇಗೌಡ, ರಾಜ್ಯದ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಸೇರಿದಂತೆ ಹಲವು ಘಟಾನುಘಟಿಗಳ ಅದೃಷ್ಟ ಒರೆಗೊಡ್ಡಲಿದೆ.

ಸೋನಿಯಾ ಕ್ಷೇತ್ರವಾದ ಉತ್ತರಪ್ರದೇಶದ ರಾಯ್ ಬರೇಲಿ ಹಾಗೂ ಆಡ್ವಾಣಿ ಅವರ ಕ್ಷೇತ್ರವಾಗಿರುವ ಗುಜರಾತಿನ ಗಾಂಧೀನಗರವು ಭಾರೀ ಪ್ರಚಾರವನ್ನು ಕಂಡಿದೆ. ಸೋನಿಯಾ ಪುತ್ರಿ ಪ್ರಿಯಾಂಕಾ ಗಾಂಧಿ ತನ್ನ ತಾಯಿ ಪರ ಪ್ರಚಾರಕ್ಕೆ ಟೊಂಕ ಕಟ್ಟಿದ್ದರು. ಆಡ್ವಾಣಿ ಅವರ ಪುತ್ರಿ ಪ್ರತಿಭಾ ಅವರೂ ಗಾಂಧಿನಗರದಲ್ಲಿ ತನ್ನ ತಂದೆಯ ಪರ ಭರದ ಪ್ರಚಾರದಲ್ಲಿ ತೊಡಗಿದ್ದರು.

ಮೂರನೆ ಹಂತದ ಈ ಚುನಾವಣೆಯಲ್ಲಿ ರಾಷ್ಟ್ರಾದ್ಯಂತ ಒಟ್ಟು 1,567 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಒಂಬತ್ತು ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶದ ಒಟ್ಟು 107 ಕ್ಷೇತ್ರಗಳ ವ್ಯಾಪ್ತಿಯ ಮತಗಟ್ಟೆಗಳಲ್ಲಿ ಚುನಾವಣೆ ನಡೆಯಲಿದೆ.
ಜೆಡಿಯು ಮುಖ್ಯಸ್ಥ ಶರದ್ ಯಾದವ್, ಕೇಂದ್ರ ಸಚಿವರಾದ ಶ್ರೀಪ್ರಕಾಶ್ ಜೈಸ್ವಾಲ್ ಮತ್ತು ಜ್ಯೋತಿರಾದಿತ್ಯ ಸಿಂಧ್ಯ ಅವರ ಹಣೆಬರಹ ಗುರುವಾರ ನಿರ್ಧಾರವಾಗುತ್ತಿದೆ.

ಗುಜರಾತಿನ ಎಲ್ಲಾ 26 ಸ್ಥಾನಗಳಿಗೆ ಒಂದೇ ಹಂತದ ಮತದಾನ ನಡೆಯಲಿದೆ. ಗುಜರಾತ್ ಸೇರಿದಂತೆ, ಮಧ್ಯಪ್ರದೇಶದ 16, ಉತ್ತರ ಪ್ರದೇಶದ 15, ಪಶ್ಚಿಮಬಂಗಾಳದ 14, ಕರ್ನಾಟಕ ಮತ್ತು ಬಿಹಾರದ ತಲಾ 11, ಮಹಾರಾಷ್ಟ್ರದ 10 ಹಾಗೂ ಜಮ್ಮು ಕಾಶ್ಮೀರ, ಸಿಕ್ಕಿಂ, ದಾದ್ರ ನಗರ್ ಹವೇಲಿ, ಡಿಯು ಡಾಮನ್‌ಗಳ ತಲಾ ಒಂದೊಂದು ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ.

ಚೆನ್ನರಾಯಪಟ್ಟಣದಲ್ಲಿ ಮುಖ್ಯಮಂತ್ರಿಗಳ ಮೇಲೆ ಹಾಗೂ ಗುಜರಾತಿನಲ್ಲಿ ಪ್ರಧಾನಿಯವರ ಮೇಲೆ ಚಪ್ಪಲಿ ಎಸೆತ ಪ್ರಯತ್ನ ಬಿಟ್ಟರೆ ಮಿಕ್ಕಂತೆ ಚುನಾವಣಾ ಪ್ರಚಾರ ಬಹುತೇಕ ಶಾಂತಿಯುತವಾಗಿತ್ತು. ಇದಲ್ಲದೆ, ಪಕ್ಷಗಳ ನಾಯಕರ ಪರಸ್ಪರ ಆರೋಪ ಪ್ರತ್ಯಾರೋಪಗಳಿಗೆ ಕೊರತೆ ಇರಲಿಲ್ಲ.

ಮೂರನೆ ಹಂತದ ಚುನಾವಣೆಯೊಂದಿಗೆ ಲೋಕಸಭೆಯ ಒಟ್ಟು 545 ಸ್ಥಾನಗಳಲ್ಲಿ 372 ಸ್ಥಾನಗಳಲ್ಲಿ ಮತದಾನ ಮುಗಿದಂತಾಗುತ್ತದೆ. 543 ಸ್ಥಾನಗಳಿಗೆ ಚುನಾವಣೆ ನಡೆದರೆ ಮಿಕ್ಕೆರಡು ಸ್ಥಾನಗಳಿಗೆ ಆಂಗ್ಲೋ ಇಂಡಿಯನ್ ಸಮುದಾಯದ ವ್ಯಕ್ತಿಗಳ ನಾಮ ನಿರ್ದೇಶನ ಮಾಡಲಾಗುತ್ತದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಲೋಕಸಭೆ, ಚುನಾವಣೆ, ಪ್ರಚಾರ, Lok Sabha, Election, Capaign
ಮತ್ತಷ್ಟು
ತಪ್ಪುಸಾಬೀತಾದರೆ ಜೈಲಿಗೆ ಹೋಗುವೆ: ಮೋದಿ
ಬಾಬ್ರಿ ಧ್ವಂಸ: ಕಾಂಗ್ರೆಸ್‌ನಿಂದ ಕರ್ತವ್ಯ ಲೋಪ- ಯೆಚೂರಿ
ಉಗ್ರ ಕಸಬ್ ಪ್ರಾಪ್ತ ವಯಸ್ಕ: ವೈದ್ಯಕೀಯ ವರದಿ
ಕ್ವಟ್ರೋಚಿ: ಸಿಬಿಐ ಪಾತ್ರದ ತನಿಖೆಗೆ ಆಡ್ವಾಣಿ ಆಗ್ರಹ
ಉಗ್ರವಾದವನ್ನು ಹರಡುವವರು ವೈರಿಗಳು: ವರುಣ್
ಬೋಫೋರ್ಸ್: ಕ್ವಟ್ರೋಚಿ ರೆಡ್ ಕಾರ್ನರ್ ನೋಟೀಸ್ ಹಿಂದಕ್ಕೆ