ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ರಾಮ ಮಂದಿರ ನಿರ್ಮಿಸಿಯೇ ಸಿದ್ಧ - ರಾಜ್‌ನಾಥ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಾಮ ಮಂದಿರ ನಿರ್ಮಿಸಿಯೇ ಸಿದ್ಧ - ರಾಜ್‌ನಾಥ್
ರಾಮಮಂದಿರ ನಿರ್ಮಾಣಕ್ಕೆ ತಮ್ಮ ಪಕ್ಷ ಬದ್ಧವಾಗಿದ್ದು, ಅಧಿಕಾರಕ್ಕೆ ಬಂದ ಬಳಿಕ ಇದನ್ನು ನೆರವೇರಿಸುವುದು ಶತಸಿದ್ಧ ಎಂಬುದಾಗಿ ಬಿಜೆಪಿ ಅಧ್ಯಕ್ಷ ರಾಜ್‌ನಾಥ್ ಸಿಂಗ್ ಹೇಳಿದ್ದಾರೆ.

ಬಿಜೆಪಿಯು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ವಿಚಾರವನ್ನು ಕೈಬಿಟ್ಟಿದೆ ಎಂಬ ವಿರೋಧಿಗಳ ಅರೋಪವನ್ನು ತಳ್ಳಿಹಾಕಿದ ಅವರು, "ಇದು ಅಯೋಧ್ಯೆಯಲ್ಲಿ ರಾಮಮಂದಿರದ ನಿರ್ಮಾಣವನ್ನು ಎಂದಿಗೂ ಬಯಸಿರದ ಮತ್ತು ಭಗವಾನ್ ರಾಮನ ಅಸ್ತಿತ್ವವನ್ನು ಪ್ರಶ್ನಿಸಿರುವವರು ಮಾಡಿರುವ ಅಪಪ್ರಚಾರ" ಎಂದು ನುಡಿದರು.

ರಾಮಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ, ನಮ್ಮ ಬದ್ಧತೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಮತ್ತು ನಾವು ಅದನ್ನು ಸಾಬೀತು ಮಾಡಲಿದ್ದೇವೆ ಎಂದು ಅವರು ಸಂದರ್ಶನ ಒಂದರಲ್ಲಿ ಹೇಳಿದ್ದಾರೆ.

ತನ್ನ ಮುಖವನ್ನು ಉಳಿಸಿಕೊಳ್ಳುವ ಪ್ರಯತ್ನವಾಗಿ ಮತ್ತು ಈ ರಾಷ್ಟ್ರದ ಜನತೆಯ ಹಾದಿ ತಪ್ಪಿಸಲು ಕಾಂಗ್ರೆಸ್ ಪದೇಪದೇ ಕಾಂಧಹಾರ್ ವಿಮಾನ ಅಪಹರಣ ಪ್ರಕರಣವನ್ನು ಎತ್ತುತ್ತಿದೆ. ಆದರೆ, ವಿಮಾನದಲ್ಲಿದ್ದ ಅಮಾಯಕ ಪ್ರಯಾಣಿಕರನ್ನು ರಕ್ಷಿಸಬೇಕೋ ಅಥವಾ ಅವರನ್ನು ಸಾಯಲು ಬಿಡುವುದೋ ಎಂಬ ಕವಲು ಹಾದಿಯಲ್ಲಿ ನಾವಿದ್ದೆವು. ಇಂತ ಕ್ಷಿಷ್ಟ ಪರಿಸ್ಥಿತಿಯಲ್ಲಿ ಉಗ್ರರ ಬಿಡುಗಡೆ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.

ಉಗ್ರರನ್ನು ಬಿಡುಗಡೆ ಮಾಡುವ ನಿರ್ಧಾರವನ್ನು ಸರ್ವಪಕ್ಷಗಳ ಸಭೆಯಲ್ಲಿ ಕೈಗೊಳ್ಳಲಾಗಿದ್ದು, ಕಾಂಗ್ರೆಸ್ ಸಹ ಒಂದು ಪಕ್ಷವಾಗಿದ್ದು, ಅದೂ ಈ ನಿರ್ಧಾರದ ಒಂದು ಅಂಗವಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.

ಭಯೋತ್ಪಾನೆ ಮತ್ತು ಅಗತ್ಯವಸ್ತುಗಳ ಬೆಲೆ ಹೆಚ್ಚಳವು ಪ್ರಮುಖ ಚುನಾವಣಾ ವಿಚಾರಗಳಾಗಿದ್ದು, ಮುಂಬರುವ ಚುನಾವಣೆಯು 'ವಿಚಾರಗಳಿಲ್ಲದ' ಚುನಾವಣೆಗಳು ಎಂದು ಭಾವಿಸಿದವರಿಗೆ ಸೂಕ್ತ ಉತ್ತರ ನೀಡಲಿದೆ ಎಂದು ಅವರು ನುಡಿದರು.

ಭಯೋತ್ಪಾದನೆ ಮತ್ತು ಬೆಲೆಏರಿಕೆ ವಿಚಾರಗಳು ಇತರ ರಾಜಕೀಯ ಪಕ್ಷಗಳಿಗೆ ಕಾಣದೇ ಇದ್ದರೆ, ಅದು ಅವರ ದೃಷ್ಟಿದೋಷದ ಕಾರಣದಿಂದಾಗಿದ್ದು, ಚುನಾವಣಾ ಫಲಿತಾಂಶ ಹೊರಬಿದ್ದ ತಕ್ಷಣ ಸತ್ಯವೇನೆಂಬುದು ಗೊತ್ತಾಗಲಿದೆ ಎಂದು ಅವರು ರಾಜ್‌ನಾಥ್ ಸಿಂಗ್ ನುಡಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಹಂದಿಜ್ವರ ತಡೆಗೆ ವ್ಯಾಪಕ ಕಟ್ಟೆಚ್ಚರದ ಕ್ರಮ
'ಇಟಲಿ ಉದ್ಯಮಿಗೆ ಕ್ಲೀನ್ ಚಿಟ್, ಮಣ್ಣಿನ ಮಗನಿಗೆ ಜೈಲು'
ಪ್ರಧಾನಿ ಸ್ಥಾನ: ಸಿಂಗ್‌ಗೇ ಕರುಣಾನಿಧಿ ವೋಟು
ಚೆನ್ನೈ: ಗೂಡ್ಸ್-ಲೋಕಲ್ ಟ್ರೈನ್ ಡಿಕ್ಕಿ, 7 ಸಾವು
ಅನಿಲ್‌ರನ್ನ 'ಕಾಪಾಡಿದ' ವ್ಯಕ್ತಿಯ ಶವ ಪತ್ತೆ
ನಾಳೆ ಮ‌ೂರನೇ ಹಂತದ ಮತದಾನ