ಹಲವಾರು ಮಂದಿ ಅಮಾಯಕರನ್ನು ಗುಂಡಿಕ್ಕಿ ಕೊಂದಿರುವ ಅಬ್ದುಲ್ ಕಸಬ್‌ನನ್ನು ಜೈಲಿನಲ್ಲಿ ಮುದ್ದುಮಾಡಲಾಗುತ್ತದೆ ಎಂಬುದಾಗಿ ಬಿಜೆಪಿಯ ವಿವಾದಾಸ್ಪದ ನಾಯಕ ವರಣ್ ಗಾಂಧಿ ಆಲಿಗರ್‌ನಲ್ಲಿ ಬುಧವಾರ ತನ್ನ ಚುನಾವಣಾ ಪ್ರಚಾರ ಭಾಷಣದ ವೇಳೆ ಹೇಳಿದ್ದಾರೆ.
ಕೋಮುಪ್ರಚೋದಕ ಭಾಷಣ ಮಾಡಿರುವ ಆರೋಪದ ಮೇಲೆ ರಾಷ್ಟ್ರೀಯ ಭದ್ರತಾ ಕಾಯ್ದೆ ಹೇರಿ ನನ್ನನ್ನು ಇಟಾ ಜೈಲಿನಲ್ಲಿರಿಸಿ ಅತ್ಯಂತ ಕೆಟ್ಟದಾಗಿ ನಡೆಸಿಕೊಳ್ಳಲಾಯಿತು ಎಂದು ಅವರು ಆಪಾದಿಸಿದರು.
"ನಮ್ಮ ದೇಶದ ಈ ವಾತಾವರಣಕ್ಕೇನನ್ನಬೇಕು ಎಂದು ಪ್ರಶ್ನಿಸಿದ ಅವರು, "ವರುಣ್ ಗಾಂಧಿಯನ್ನು ರಾಷ್ಟ್ರೀಯ ಭದ್ರತೆಯ ಕಾಯ್ದೆಯಡಿ ಜೈಲಿಗೆ ತಳ್ಳಲಾಯಿತು. ಆದರೆ ವಿಧ್ವಂಸಕ ಕೃತ್ಯಗಳನ್ನು ಎಸೆದ ಕಸಬ್‌ನನ್ನು ಜೈಲಿನಲ್ಲಿ ಮುದ್ದುಕೋಳಿಯಂತೆ ನಡೆಸಿಕೊಳ್ಳಲಾಗುತ್ತಿದೆ" ಎಂದು ಅವರು ಘಟನೆಗಳನ್ನು ಸಮೀಕರಿಸಿದರು.
"ನೀವು ಕಾಂಗ್ರಸ್‌ಗೆ ಮತ ಹಾಕುವ ಬದಲಿಗೆ ಅದನ್ನು ಚರಂಡಿಗೆ ಎಸೆಯುವುದು ಲೇಸು" ಎಂದೂ ಅವರು ಈ ಸಂದರ್ಭದಲ್ಲಿ ನುಡಿದರು.
ಕೋಮುಪ್ರಚೋದಕ ಭಾಷಣ ಮಾಡಿರುವ ಆಪಾದನೆ ಹಿನ್ನೆಲೆಯಲ್ಲಿ ಬಂಧನಕ್ಕೀಡಾಗಿದ್ದ ವರುಣ್ 15 ದಿವಸಗಳ ಪೆರೋಲ್ ಮೇಲೆ ಬಿಡುಗಡೆ ಹೊಂದಿದ್ದಾರೆ. ಇವರು ಉತ್ತರ ಪ್ರದೇಶದ ಪಿಲಿಭಿತ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. |