ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಚುನಾವಣೆ: 3ನೆ ಹಂತದ ಮತದಾನ ಆರಂಭ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಚುನಾವಣೆ: 3ನೆ ಹಂತದ ಮತದಾನ ಆರಂಭ
ಹದಿನೈದನೆ ಲೋಕಸಭಾ ಚುನಾವಣೆಯ ಮ‌ೂರನೆ ಹಂತದ ಮತದಾನ ಆರಂಭಗೊಂಡಿದ್ದು ಆರಂಭದಲ್ಲಿ ಮಂದಗತಿಯ ಮತದಾನ ವರದಿಯಾಗಿದೆ. ಕರ್ನಾಟಕ ಸೇರಿದಂತೆ ಒಂಬತ್ತು ರಾಜ್ಯಗಳು ಮತ್ತು ಎರಡು ಕೇಂದ್ರೀಯ ಪ್ರದೇಶಗಳಲ್ಲಿ ಮತದಾನ ನಡೆಯುತ್ತಿದೆ. ರಾಜ್ಯದಲ್ಲಿ ಇದು ಎರಡನೆಯ ಹಾಗೂ ಕೊನೆಯ ಹಂತದ ಮತದಾನವಾಗಿದೆ.

ರಾಜ್ಯದ 11 ಕ್ಷೇತ್ರಗಳು ಸೇರಿದಂತೆ ಒಟ್ಟು 107 ಸ್ಥಾನಗಳಿಗೆ ಮತದಾನ ನಡೆಯುತ್ತಿದ್ದು, 101 ಮಹಿಳೆಯರು ಸೇರಿದಂತೆ 1,567 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇವರಲ್ಲಿ ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಮುಖ್ಯಮಂತ್ರಿ ಬಂಗಾರಪ್ಪ, ಮುಖ್ಯಮಂತ್ರಿ ಪುತ್ರ ರಾಘವೇಂದ್ರ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಬಿಜೆಪಿಯ ಪ್ರಧಾನಿ ಅಭ್ಯರ್ಥಿ ಎಲ್.ಕೆ. ಆಡ್ವಾಣಿ, ಜೆಡಿಯು ಮುಖ್ಯಸ್ಥ ಶರದ್ ಪವಾರ್, ಕಾಂಗ್ರೆಸ್ ಯುವ ನಾಯಕ ಜ್ಯೋತಿರಾದಿತ್ಯ ಸಿಂಧ್ಯಾ, ಮಾಜಿ ವಿದೇಶಾಂಗ ಸಚಿವ ಜಸ್ವಂತ್ ಸಿಂಗ್ ಅವರುಗಳ ಹಣೆಬರಹ ನಿರ್ಧಾರವಾಗಲಿದೆ.

ಗುಜರಾತಿನ ಎಲ್ಲಾ 26 ಸ್ಥಾನಗಳಿಗೆ ಒಂದೇ ಹಂತದಲ್ಲಿ ಮತದಾನ ನಡೆಯುತ್ತಿದೆ. ಮಧ್ಯಪ್ರದೇಶದ 16, ಉತ್ತರ ಪ್ರದೇಶದ 15, ಪಶ್ಚಿಮಬಂಗಾಳದ 14, ಕರ್ನಾಟಕ ಮತ್ತು ಬಿಹಾರದ ತಲಾ 11, ಮಹಾರಾಷ್ಟ್ರದ 10 ಹಾಗೂ ಜಮ್ಮು ಕಾಶ್ಮೀರ, ಸಿಕ್ಕಿಂ, ದಾದ್ರ ನಗರ್ ಹವೇಲಿ, ಡಿಯು ಡಾಮನ್‌ಗಳ ತಲಾ ಒಂದೊಂದು ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ.

ತೃತೀಯ ಹಂತದಲ್ಲಿ 14 ಕೋಟಿ ಮಂದಿ ಮತದಾನಕ್ಕೆ ಅರ್ಹತೆ ಪಡೆದಿದ್ದಾರೆ. ರಾಷ್ಟ್ರಾದ್ಯಂತ 1.65 ಲಕ್ಷ ಮತಗಟ್ಟೆಗಳಿವೆ ಇವುಗಳಲ್ಲಿ 15 ಸಾವಿರ ಮತಗಟ್ಟೆಗಳನ್ನು ನಕ್ಸಲ್ ಪೀಡಿತ ಎಂದು ಪರಿಗಣಿಸಲಾಗಿದೆ. ಇಂದಿನ ಚುನಾವಣೆಯಲ್ಲಿ 135 ಪಕ್ಷಗಳ ವಿವಿಧ ಅಭ್ಯರ್ಥಿಗಳು ಸ್ಫರ್ಧಿಸುತ್ತಿದ್ದರೆ, 752 ಅಭ್ಯರ್ಥಿಗಳು ಸ್ವತಂತ್ರವಾಗಿ ಅದೃಷ್ಟಪರೀಕ್ಷೆಗೆ ಹೊರಟಿದ್ದಾರೆ.

ಶಿವಮೊಗ್ಗದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಮ್ಮ ಕುಟುಂಬದೊಂದಿಗೆ ಮತಚಲಾಯಿಸಿದರು. ಮಂಗಳೂರಿನಲ್ಲಿ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್, ಚಿಕ್ಕಮಗಳೂರಿನಲ್ಲಿ ಶಾಸಕ ಸಿ.ಟಿ. ರವಿ, ಮುಂಬೈಯಲ್ಲಿ ಅನಿಲ್ ಅಂಬಾನಿ, ಕೊಡಗಿನಲ್ಲಿ ಅಭ್ಯರ್ಥಿ ಜೀವಿಜಯ ಸೇರಿದಂತೆ ಅನೇಕ ಗಣ್ಯರು ಇದೀಗಾಲೇ ಮತ ಚಲಾಯಿಸಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಚುನಾವಣೆ, ಮತಾದನ, ಲೋಕಸಭೆ, Election, Election Polling
ಮತ್ತಷ್ಟು
ಅಣು ಒಪ್ಪಂದ ಪುನವಿಮರ್ಶೆಗೆ: ಕಾರಾಟ್
ಜಮ್ಮು: ಪ್ರತ್ಯೇಕವಾದಿಗಳಿಂದ ಚುನಾವಣೆ ಬಹಿಷ್ಕಾರ
ಕಸಬ್ ಜೈಲಿನಲ್ಲಿರುವ ಮುದ್ದುಕೋಳಿ: ವರುಣ್ ಗಾಂಧಿ
ಭಾರತಕ್ಕೆ ಎಲ್ಟಿಟಿಇ ಉಗ್ರರು ನುಸುಳುವ ಸಾಧ್ಯತೆ: ವರದಿ
ಕಸಬ್‌ಗೆ ಉರ್ದು ಪತ್ರಿಕೆ, ಪಾಕ್ ಪರ್ಫ್ಯೂಮ್ ಬೇಕಂತೆ
ರಾಮ ಮಂದಿರ ನಿರ್ಮಿಸಿಯೇ ಸಿದ್ಧ - ರಾಜ್‌ನಾಥ್