ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ರಾಷ್ಟ್ರದಲ್ಲಿ ಮತದಾನ ಕಡ್ಡಾಯವಾಗಲಿ: ಆಡ್ವಾಣಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಾಷ್ಟ್ರದಲ್ಲಿ ಮತದಾನ ಕಡ್ಡಾಯವಾಗಲಿ: ಆಡ್ವಾಣಿ
ಲೋಕಸಭೆ ಮತ್ತು ವಿಧಾನಸಭೆಗಳಿಗೆ ನಿಗಧಿತ ಅವಧಿ ಇರುವಂತಾಗಬೇಕು ಎಂದು ಬಿಜೆಪಿಯ ಪ್ರಧಾನಿ ಅಭ್ಯರ್ಥಿ ಎಲ್.ಕೆ. ಆಡ್ವಾಣಿ ಹೇಳಿದ್ದಾರೆ. ಅಲ್ಲದೆ ಚುನಾವಣೆಗಳನ್ನು ಫೆಬ್ರವರಿ ತಿಂಗಳಲ್ಲಿ ನಿಗದಿ ಪಡಿಸಬೇಕು ಎಂದೂ ಅವರು ಅಭಿಪ್ರಾಯಿಸಿದ್ದಾರೆ.ಅವರು ಇಲ್ಲಿ ತಮ್ಮ ಮತಚಲಾಯಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.

"ರಾಜಕೀಯ ಪಕ್ಷಗಳು ಮತ್ತು ಚುನಾವಣಾ ಆಯೋಗವು ಲೋಕಸಭಾ ಮತ್ತು ವಿಧಾನಸಭೆಗಳಿಗೆ ನಿಗಧಿತ ಅವಧಿಯನ್ನು ನಿರ್ಧರಿಸುವಂತೆ ಸಂವಿಧಾನವನ್ನು ತಿದ್ದುಪಡಿ ಮಾಡುವ ಕುರಿತು ಯೋಚಿಸಬೇಕು ಎಂಬುದಾಗಿ 81ರ ಹರೆಯದ ಆಡ್ವಾಣಿ ಹೇಳಿದ್ದಾರೆ.

ನಾವು ಬ್ರಿಟನ್ ಪದ್ಧತಿಯನ್ನು ಅನುಸರಿಸುತ್ತಿದ್ದು, ಇದು ನಮಗೆ ಹೊಂದಿಕೆಯಾಗದ ಕಾರಣ ನಾವು ಈ ಪದ್ಧತಿಯನ್ನು ಬದಲಿಸುವ ಕುರಿತು ಚಿಂತಿಸಬೇಕು ಎಂದು ಅವರು ಹೇಳಿದರು.

ನಿಗಧಿತ ಅವಧಿಯ ಅವರ ಇಂಗಿತವೇನೆಂದರೆ, ಒಂದು ವೇಳೆ ಸರ್ಕಾರವೊಂದು ಬಹುಮತ ಕಳೆದುಕೊಂಡರೂ, ಸದನವನ್ನು ವಿಸರ್ಜಿಸದೇ, ಹೊಸ ಸರ್ಕಾರ ಅಧಿಕಾರ ಹಿಡಿಯುವಂತಾಗಬೇಕು ಎಂದು ನುಡಿದರು.

ಬೇಸಿಗೆಕಾಲದಲ್ಲಿ ಚುನಾವಣೆಗಳನ್ನು ನಡೆಸಿದರೆ, ಜನತೆಗೆ ಕಷ್ಟವಾಗುತ್ತಿದ್ದು, ಇದರಿಂದ ಮತದಾನದ ಶೇಖಡಾವಾರು ಕುಸಿಯುತ್ತದೆ ಎಂದ ಅವರು, ಇದಕ್ಕಾಗಿ ಚುನಾವಣೆಗಳು ಫೆಬ್ರವರಿ ತಿಂಗಳಲ್ಲಿ ನಡೆಯುವಂತಾಗಬೇಕು ಎಂದು ನುಡಿದರು. ಇದಲ್ಲದೆ, ಮತದಾನದಿಂದ ಜನತೆ ವಿಮುಖರಾಗುತ್ತಿರುವ ಕುರಿತು ಕಳವಳ ವ್ಯಕ್ತಪಡಿಸಿದರಲ್ಲದೆ ಮತದಾನವನ್ನು ಖಡ್ಡಾಯಗೊಳಿಸಬೇಕು ಎಂಬ ಅಭಿಪ್ರಾಯ ಸೂಚಿಸಿದರು.

ಪ್ರಸಕ್ತ ಚುನಾವಣೆಯಲ್ಲಿ ಬಿಜೆಪಿಯು ಅತಿದೊಡ್ಡ ಪಕ್ಷವಾಗಿ ಮೂಡಿಬರಲಿದೆಯಲ್ಲದೆ, ಕೇಂದ್ರದಲ್ಲಿ ಎನ್‌ಡಿಎ ಅಧಿಕಾರ ಹಿಡಿಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಆಡ್ವಾಣಿ ಅವರು ಮುಂಜಾನೆ ಪತ್ನಿ ಸಮೇತರಾಗಿ ಮತಗಟ್ಟೆಗೆ ತೆರಳಿ ಮತಚಲಾಯಿಸಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಮತದಾನ, ಆಡ್ವಾಣಿ, ಚುನಾವಣೆ, Advani, Polling, BJP
ಮತ್ತಷ್ಟು
ಪ.ಬಂಗಾಳದಲ್ಲಿ ನೆಲಬಾಂಬು ಸ್ಫೋಟ, ಇಬ್ಬರಿಗೆ ಗಾಯ
ಬಿಜೆಪಿಯಲ್ಲಿ ಪ್ರಧಾನಿ ಹುದ್ದೆಗೆ ಸ್ಫರ್ಧೆ ಇಲ್ಲ: ರಾಜ್‌ನಾಥ್
ಚೆನ್ನೈ ರೈಲು ಅಪಘಾತ: ಹೀಗೂ ಉಂಟೇ?
ಬೋಫೋರ್ಸ್: ಎನ್‌ಡಿಎ ಯಶಸ್ವಿಯಾಗಿ ನಿಭಾಯಿಸಿಲ್ಲ
ಚುನಾವಣೆ: 3ನೆ ಹಂತದ ಮತದಾನ ಆರಂಭ
ಅಣು ಒಪ್ಪಂದ ಪುನವಿಮರ್ಶೆಗೆ: ಕಾರಾಟ್