ವಿದೇಶದ ಬ್ಯಾಂಕುಗಳಲ್ಲಿ ಕೊಳೆಯುತ್ತಿರುವ ಕಪ್ಪು ಹಣವನ್ನು ಮರಳಿ ಭಾರತಕ್ಕೆ ತರಲು ಕೇಂದ್ರ ಸರ್ಕಾರವು ಏನೆಲ್ಲ ಮಾಡಿದೆ ಎಂಬ ಕುರಿತು ಹೆಚ್ಚು ಮಾಹಿತಿಗಳನ್ನು ನೀಡುವಂತೆ ಸುಪ್ರೀಂಕೋರ್ಟ್ ಕೇಂದ್ರಕ್ಕೆ ತಾಕೀತು ಮಾಡಿದೆ.
ಮುಖ್ಯನ್ಯಾಯಧೀಶ ಕೆ.ಜಿ. ಬಾಲಕಷ್ಣನ್ ಹಾಗೂ ನ್ಯಾಯಮೂರ್ತಿಗಳಾದ ಪಿ.ಸದಾಶಿವಂ ಮತ್ತು ಮುಕುಂದಾಕಂ ಶರ್ಮಾ ಅವರನ್ನೊಳಗೊಂಡ ನ್ಯಾಯಪೀಠವು ಪ್ರಕರಣದ ಮುಂದಿನ ವಿಚಾರಣೆಯನ್ನು ಜುಲೈ 20ಕ್ಕೆ ನಿಗದಿ ಪಡಿಸಿದೆ.
ವಿದೇಶಗಳಲ್ಲಿ ಕೊಳೆಯುತ್ತಿರುವ ಭಾರತೀಯರ ಕಪ್ಪುಹಣವನ್ನು ಭಾರತಕ್ಕೆ ತರುವಂತೆ ಕಾರ್ಯಕೈಗೊಳ್ಳಲು ನಿರ್ದೇಶನ ನೀಡಬೇಕು ಎಂಬುದಾಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದ್ದು, ನ್ಯಾಯಾಲಯದ ಸೂಚನೆಯಂತೆ ಕೇಂದ್ರ ಸರ್ಕಾರವು ಸಲ್ಲಿಸಿರುವ ಅಫಿದಾವಿತ್‌ನಲ್ಲಿ ತಾನು ಈ ಕುರಿತು ಕಾರ್ಯಕೈಗೊಂಡಿರವುದಾಗಿ ಕೇಂದ್ರ ಹೇಳಿತ್ತು.
ಅಲ್ಲದೆ, ಈ ಅರ್ಜಿಯ ಸಲ್ಲಿಕೆಯು ಚುನಾವಣಾ ಪ್ರೇರಿತವಾಗಿದ್ದು, ಇದನ್ನು ವಜಾ ಮಾಡಬೇಕೆಂದು ಕೋರಿತ್ತು. |