ಮುಸ್ಲಿಂ ಸಮುದಾಯ ಸೇರಿದಂತೆ ಇತರ ಅಲ್ಪಸಂಖ್ಯಾತ ಮತದಾರರನ್ನು ಕಾಂಗ್ರೆಸ್ ಪಕ್ಷ 'ವೋಟ್ ಬ್ಯಾಂಕ್' ಆಗಿ ಉಪಯೋಗಿಸಿತ್ತಿದೆ ಎಂದು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಟೀಕಿಸಿದ್ದಾರೆ. ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಕಿಂಚಿತ್ತು ಸಹಾಯ ಮಾಡದ ಇಂತಹ ಪಕ್ಷಗಳನ್ನು ದೂರವಿಟ್ಟು ಅಭಿವೃದ್ಧಿಗೆ ಪ್ರಾಧಾನ್ಯ ನೀಡುವ ಬಿಜೆಪಿ ನೇತೃತ್ವದ ಎನ್‌ಡಿಎ ಪಕ್ಷಗಳಿಗೆ ಮತ ನೀಡುವಂತೆ ಅವರು ಕರೆನೀಡಿದ್ದಾರೆ. |