ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಕಾಂಗ್ರೆಸ್ ಎಡಕ್ಕೆ ಹೊರಳಿದರೆ, ನಾವು ಹೊರಕ್ಕೆ: ಮಮತಾ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಾಂಗ್ರೆಸ್ ಎಡಕ್ಕೆ ಹೊರಳಿದರೆ, ನಾವು ಹೊರಕ್ಕೆ: ಮಮತಾ
ಎಡಪಕ್ಷಗಳು ಮನಮೋಹನ್ ಸಿಂಗ್ ಸರ್ಕಾರಕ್ಕೆ ಬೆಂಬಲ ವ್ಯಕ್ತಪಡಿಸುತ್ತವೆ ಎಂಬ ವಿಶ್ವಾಸ ತನಗಿದೆ ಎಂಬುದಾಗಿ ಮಂಗಳವಾರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಹೇಳಿರುವ ಬೆನ್ನಿಗೆ, "ನೀವು ಎಡಕ್ಕೆ ಹೊರಳಿದರೆ ನಾವು ಹೊರಕ್ಕೆ ತೆರಳುತ್ತೇವೆ" ಎಂಬುದಾಗಿ ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಇಂಡಿಯನ್ ಎಕ್ಸ್‌ಪ್ರೆಸ್ ಜತೆಗೆ ಮಾಡನಾಡಿದ ಮಮತಾ, "ನಮ್ಮ ನಿಲುವು ಸ್ಪಷ್ಟವಾಗಿದೆ. ಕಾಂಗ್ರೆಸ್ ಸಿಪಿಎಂ ಅಥವಾ ಎಡಪಕ್ಷಗಳೊಂದಿಗೆ ಚುನಾವಣೆ ಬಳಿಕ ಕೈಜೋಡಿಸಿದರೆ, ನಾವು ಕಾಂಗ್ರೆಸ್‌ನೊಂದಿಗೆ ಮುಂದುವರಿಯಲಾರೆವು. ಸಿಪಿಎಂ ಮತ್ತು ನಾವು ಒಂದೇ ಕಡೆ ಇರಲು ಸಾಧ್ಯವೇ ಇಲ್ಲ" ಎಂದು ಸ್ಪಷ್ಟಪಡಿಸಿದರು.

ಎರಡು ಹಂತದ ಪ್ರಮುಖ ಚುನಾವಣೆಗಳ ಹೊಸ್ತಿಲಲ್ಲಿರುವ ವೇಳೆಗೆ ರಾಹುಲ್ ಈ ಹೇಳಿಕೆ ನೀಡಿರುವುದಕ್ಕೆ ತರಾಟೆಗೆ ತೆಗೆದುಕೊಂಡಿರುವ ತೃಣಮೂಲ ಕಾಂಗ್ರೆಸ್ ನಾಯಕ ಹಾಗೂ ಪಶ್ಚಿಮಬಂಗಾಳದ ವಿಪಕ್ಷನಾಯಕ ಪತ್ರಾವೋ ಚಟರ್ಜಿ ಅವರು "ಅಂತಹ ನಾಯಕರಿಂದ ಇಂತಹ ಬೇಜವಾಬ್ದಾರಿ ಹೇಳಿಕೆಗಳು ಹೊರಬೀಳಬಾರದಿತ್ತು. ಇದು ಚುನಾವಣೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ. ಕಾಂಗ್ರೆಸ್ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವ ಕ್ಷೇತ್ರಗಳ ಚುನಾವಣೆ ಮುಗಿದ ಬಳಿಕ ಕಾಂಗ್ರೆಸ್ ಇಂತಹ ಹೇಳಿಕೆಗಳನ್ನು ನೀಡುತ್ತಿರುವುದು ವಿಲಕ್ಷಣವಾಗಿದೆ" ಎಂದು ಟೀಕಿಸಿದ್ದಾರೆ.

"ಅದು ಬಾಹ್ಯ ಅಥವಾ ಒಳ- ಯಾವುದೇ ಬೆಂಬಲವಿರಬಹುದು. ಕಾಂಗ್ರೆಸ್ ಎಡಪಕ್ಷಗಳ ಬೆಂಬಲ ಪಡೆದುದೇ ಆದರೆ ನಾವು ಅದರೊಂದಿಗಿರಲು ಸಾಧ್ಯವಿಲ್ಲ. ರಾಜ್ಯದಲ್ಲಿ ಸಿಪಿಎಂ ನಮ್ಮ ಪ್ರಧಾನ ವಿರೋಧಿ ಅಲ್ಲದೆ, ಅನೇಕ ವರ್ಷಗಳಿಂದ ನಾವು ಅದರ ದೌರ್ಜನ್ಯಗಳ ವಿರುದ್ಧ ಹೋರಾಡುತ್ತಾ ಬಂದಿದ್ದು, ಕೇಂದ್ರದಲ್ಲಿ ನಾವು ಒಂದೇ ವೇದಿಕೆಯನ್ನು ಹಂಚಿಕೊಳ್ಳಲು ಹೇಗೆ ಸಾಧ್ಯ ಎಂದು ಅವರು ಪ್ರಶ್ನಿಸಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಮತ್ತು ಕಾಂಗ್ರೆಸ್ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿವೆ. ಕಾಂಗ್ರೆಸ್ ಇಲ್ಲಿ 14 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಅದರ ಹೆಚ್ಚಿನ ಅಭ್ಯರ್ಥಿಗಳು ಉತ್ತರ ಬಂಗಾಳದಲ್ಲಿ ಸ್ಫರ್ಧಿಸಿದ್ದಾರೆ. ಇಲ್ಲಿ ಪ್ರಥಮ ಹಂತದಲ್ಲಿ ಚುನಾವಣೆ ಮುಗಿದಿದೆ. ತೃಣಮೂಲ ಕಾಂಗ್ರೆಸ್ 28 ಸ್ಥಾನಗಳಲ್ಲಿ ಸ್ಫರ್ಧಿಸುತ್ತಿದ್ದು, ಇದರ ಹೆಚ್ಚಿನ ಸ್ಥಾನಗಳು ದಕ್ಷಿಣ ಬಂಗಾಳದಲ್ಲಿವೆ. ಇಲ್ಲಿ ಸಿಪಿಎಂನಿಂದ ಸ್ಥಾನ ಹಾರಿಸುವ ಹವಣಿಕೆ ಅದರದ್ದು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ರಾಷ್ಟ್ರ ಭಕ್ತ ಮುಸ್ಲಿಮರಿಗೆ ಠಾಕ್ರೆ ಸಲಾಂ
ಸಿಂಗ್‌ರಂತೆ ನಾನ್ಯಾಕೆ ಹಿಂಬಾಗಿಲ ಪ್ರಧಾನಿಯಾಗಬಾರದು: ಮಾಯಾ
ನಿಲ್ಡಾಣದ ಏರೋ ಬ್ರಿಡ್ಜ್‌ಗೆ ವಿಮಾನ ಢಿಕ್ಕಿ
ಬಸ್ ವಿದ್ಯುತ್ ತಂತಿಗೆ ಸ್ಫರ್ಶ: 17 ಬಲಿ
ಯುಪಿಎಗೆ ನೋ, ರಾಹುಲ್‌ಗೆ ಥ್ಯಾಂಕ್ಸ್: ನಿತೀಶ್
ನಾಲ್ಕನೇ ಹಂತದ ಚುನಾವಣಾ ಪ್ರಚಾರಕ್ಕೆ ತೆರೆ