ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > 164 ಕ್ರಿಮಿನಲ್‌ಗಳು, 259 ಕೋಟ್ಯಾಧಿಪತಿಗಳು ಸ್ಫರ್ಧೆಯಲ್ಲಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
164 ಕ್ರಿಮಿನಲ್‌ಗಳು, 259 ಕೋಟ್ಯಾಧಿಪತಿಗಳು ಸ್ಫರ್ಧೆಯಲ್ಲಿ
WD
ಗುರವಾರ ನಡೆಯಲಿರುವ ನಾಲ್ಕನೆ ಹಂತದ ಲೋಕಸಭಾ ಚುನಾವಣಾ ಕಣದಲ್ಲಿ 164 ಕ್ರಿಮಿನಲ್‌ಗಳಿದ್ದಾರೆ. ಈ ವಿಚಾರದಲ್ಲಿ ಮಾತ್ರ ಎಲ್ಲಾ ಪಕ್ಷಗಳೂ ಒಂದೇ. ಯಾವುದೇ ಪಕ್ಷವು ಕ್ರಿಮಿನಲ್ ಪ್ರಕರಣ ಇರುವ ಒಬ್ಬೇ ಒಬ್ಬ ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲ ಎಂಬುದಾಗಿ ಎದೆತಟ್ಟಿಕೊಳ್ಳುವಂತಿಲ್ಲ. ಇದೇ ವೇಳೆ ಕಣದಲ್ಲಿ 250 ಕೋಟ್ಯಾಧಿಪತಿಗಳೂ ಹೋರಾಡುತ್ತಿದ್ದಾರೆ.

ನ್ಯಾಶನಲ್ ಇಲೆಕ್ಷನ್ ವಾಚ್(ನ್ಯೂ) ನಡೆಸಿರುವ ಸಮೀಕ್ಷೆಯ ಪ್ರಕಾರ, ಕಣದಲ್ಲಿ 1,306 ಅಭ್ಯರ್ಥಿಗಳಲ್ಲಿ ಶೇ. 12ರಷ್ಟು ಮಂದಿ ಅಪಾರಾಧಿ ಹಿನ್ನೆಲೆ ಹೊಂದಿದ್ದಾರೆ. ಇದರಲ್ಲಿ ಬಹುಜನ ಸಮಾಜವಾದಿ ಪಕ್ಷವು ಇಂತಹ 13 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದಿದ್ದು, ಮೊದಲ ಸ್ಥಾನದಲ್ಲಿದೆ.

ಕಾಂಗ್ರೆಸ್‌ನ 12, ಭಾರತೀಯ ಜನತಾ ಪಕ್ಷದ 10, ಸಮಾಜವಾದಿ ಪಕ್ಷದ ಏಳು ಅಭ್ಯರ್ಥಿಗಳು ಇಂತಹ ದಾಖಲೆ ಹೊಂದಿದ್ದಾರೆ. ರಾಜ್ಯವಹಿ ಗಮನಿಸಿದರೆ, ಉತ್ತರ ಪ್ರದೇಶ ಒಟ್ಟು 50 ಆಭ್ಯರ್ಥಿಗಳು ಕ್ರಿಮಿನಲ್ ರೆಕಾರ್ಡ್‌ಗಳನ್ನು ಹೊಂದಿದ್ದಾರೆ.

ಈ ಹಿಂದಿನ ಪ್ರಥಮ, ದ್ವಿತೀಯ ಹಾಗೂ ತೃತೀಯ ಹಂತದ ಚುನಾವಣೆಗಳಲ್ಲಿ ಅನುಕ್ರಮವಾಗಿ 222, 288, 258 ಕ್ರಿಮಿನಲ್ ಹಿನ್ನೆಲೆಯ ಅಭ್ಯರ್ಥಿಗಳು ಕಣಕ್ಕಿಳಿದಿದ್ದರು.

ನಾಲ್ಕನೆ ಹಂತದಲ್ಲಿ ಅಖಾಡದಲ್ಲಿರುವ ಮಿಲಿಯಾಧಿಪತಿಗಳಲ್ಲಿ ಕಾಂಗ್ರೆಸ್‌ನ 49, ಬಿಎಸ್ಪಿಯ 39, ಬಿಜೆಪಿಯ 36 ಮತ್ತು ಎಸ್ಪಿಯ 18 ಅಭ್ಯರ್ಥಿಗಳಿದ್ದಾರೆ.

ಒಟ್ಟಾರೆ ಸರಾಸರಿ ನೋಡಿದರೆ ಬಿಎಸ್ಪಿ ಅಭ್ಯರ್ಥಿಯ ತಲಾ ಆಸ್ತಿ 130 ಮಿಲಿಯ, ಕಾಂಗ್ರೆಸ್ ಅಭ್ಯರ್ಥಿಯ ತಲಾ ಆಸ್ತಿ 60 ಮಿಲಿಯ ಹಾಗೂ ಬಿಜೆಪಿ ತಲಾ ಆಸ್ತಿ 20 ಮಿಲಿಯ ರೂಪಾಯಿಗಳು.

ಈ 'ನ್ಯೂ' ಸಂಸ್ಥೆಯು ಚುನಾವಣಾ ಸುಧಾರಣೆ, ಪ್ರಜಾಪ್ರಭುತ್ವದ ಅಭಿವೃದ್ಧಿ ಮತ್ತು ಭಾರತೀಯ ಆಡಳಿತ ವ್ಯವಸ್ಥೆಯ ಸುಧಾರಣೆಗಾಗಿ ಕಾರ್ಯವಹಿಸುತ್ತಿರುವ 1,200 ಎನ್‌ಜಿಒಗಳು ಮತ್ತು ಇತರ ಸಂಘಟನೆಗಳನ್ನು ಹೊಂದಿದೆ.

 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕಾಂಗ್ರೆಸ್ ಎಡಕ್ಕೆ ಹೊರಳಿದರೆ, ನಾವು ಹೊರಕ್ಕೆ: ಮಮತಾ
ರಾಷ್ಟ್ರ ಭಕ್ತ ಮುಸ್ಲಿಮರಿಗೆ ಠಾಕ್ರೆ ಸಲಾಂ
ಸಿಂಗ್‌ರಂತೆ ನಾನ್ಯಾಕೆ ಹಿಂಬಾಗಿಲ ಪ್ರಧಾನಿಯಾಗಬಾರದು: ಮಾಯಾ
ನಿಲ್ಡಾಣದ ಏರೋ ಬ್ರಿಡ್ಜ್‌ಗೆ ವಿಮಾನ ಢಿಕ್ಕಿ
ಬಸ್ ವಿದ್ಯುತ್ ತಂತಿಗೆ ಸ್ಫರ್ಶ: 17 ಬಲಿ
ಯುಪಿಎಗೆ ನೋ, ರಾಹುಲ್‌ಗೆ ಥ್ಯಾಂಕ್ಸ್: ನಿತೀಶ್