ನಿಮಗೆ ಕಣದಲ್ಲಿರುವ ಯಾವುದೇ ಅಭ್ಯರ್ಥಿಗೆ ಮತಹಾಕಲು ಇಷ್ಟವಿಲ್ಲದಿದ್ದರೆ ಇನ್ನೆರಡು ಹಂತದ ಚುನಾವಣೆಯಲ್ಲಿ ಮನೆಯೊಳಗೆ ಕಳಿತುಕೊಳ್ಳಬೇಕೆಂದು ಇಲ್ಲ. ತಮ್ಮ ಅನಿಚ್ಛೆಯನ್ನು ಫಾರಂ 49-ಒ ಫಾರಂ ತುಂಬಿಸುವ ಮೂಲಕ ವ್ಯಕ್ತಪಡಿಸಬಹುದಾಗಿದೆ. ಈ ಫಾರಂ ನಿಮಗೆ ಮತದಾನ ಮಾಡದಿರುವ ಹಕ್ಕು ನೀಡುತ್ತದೆ.
ಮತನೀಡದಿರುವ ಹಕ್ಕಿನ ಗುಂಡಿಯು ಪ್ರಸಕ್ತ ವಿದ್ಯುನ್ಮಾನ ಮತಯಂತ್ರದಲ್ಲಿ ಇಲ್ಲದೇ ಇದ್ದರೂ, ಮತಕೇಂದ್ರಗಳಲ್ಲಿ ಇದಕ್ಕಾಗಿ ಇರುವ 49-ಒ ಫಾರಂಗಳನ್ನು ಕೇಳುವ ಅವಕಾಶವಿದೆ.
"ಮತದಾರನೊಬ್ಬ ಮತ ನಿರಾಕರಣೆಯ ತನ್ನ ಹಕ್ಕನ್ನು ಚಲಾಯಿಸಬಹುದಾಗಿದೆ. ಇದಕ್ಕಾಗಿರುವ ಫಾರಂ ಅನ್ನು ವಿನಂತಿಸುವವರಿಗೆ ಅದನ್ನು ಒದಗಿಸುವಂತೆ ನಾವು ಚುನಾವಣಾ ಕಾರ್ಯನಿರ್ವಹಿಸುವ ಅಧಿಕಾರಿಗಳಿಗೆ ತಿಳಿಸಿದ್ದೇವೆ" ಎಂದು ಉಪ ಮುಖ್ಯ ಚುನಾವಣಾ ಅಧಿಕಾರಿ ಜೆ.ಕೆ. ಶರ್ಮಾ ತಿಳಿಸಿದ್ದಾರೆ.
ಚುನಾವಣಾ ನಿರ್ವಹಣಾ ಕಾನೂನು, 1961ರ ಪ್ರಕಾರ, ಮತ ನಿರಾಕರಣೆ ಹಕ್ಕನ್ನು ದಾಖಲಿಸಬಹುದಾಗಿದೆ. ಯಾವುದೇ ಮತದಾರ ಮತ ನಿರಾಕರಣೆಗೆ ಮುಂದಾದರೆ ಚುನವಣಾ ಅಧಿಕಾರಿ ಫಾರಂ 17ಎಯಲ್ಲಿ ನಮೂದಿಸಿ ಟಿಪ್ಪಣಿ ಬರೆದು ಮತದಾರರ ಹೆಬ್ಬೆಟ್ಟು ಗುರುತು ಅಥವಾ ಸಹಿಯನ್ನು ಪಡೆಯಬೇಕಾಗಿದೆ.
ಫಾರಂ ಒ ಮುಖಾಂತರ ಅಭ್ಯರ್ಥಿಯೊಬ್ಬ ತನ್ನ ಗೆಲವಿನ ಅಂತರಕ್ಕಿಂತಲೂ ಹೆಚ್ಚಿನ ನೆಗೆಟೀವ್ ವೋಟ್‌ಗಳನ್ನು ಗಳಿಸಿದರೂ ಅದು ಚುನಾವಣೆಯನ್ನು ಅಸಿಂಧುಗೊಳಿಸುವುದಿಲ್ಲ ಎಂದು ಶರ್ಮಾ ತಿಳಿಸಿದ್ದಾರೆ. |