ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ನಾನು ನಿರಪರಾಧಿ: ನರಹಂತಕ ಉಗ್ರ ಕಸಬ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನಾನು ನಿರಪರಾಧಿ: ನರಹಂತಕ ಉಗ್ರ ಕಸಬ್
ಹಲವಾರು ಅಮಾಯಕರನ್ನು ಗುಂಡಿಕ್ಕಿ ಕೊಂದಿರುವ ಮುಂಬೈದಾಳಿಕೋರ ಉಗ್ರ ಅಜ್ಮಲ್ ಅಮೀರ್ ಕಸಬ್, ತನ್ನ ವಿರುದ್ಧ ಹೇರಲಾಗಿರುವ ಯಾವುದೇ ಆರೋಪವನ್ನು ಒಪ್ಪಿಕೊಂಡಿಲ್ಲ. ಇದಲ್ಲದೆ, ಇದೇ ಪ್ರಕರಣದ ಇತರ ಇಬ್ಬರು ಆರೋಪಿಗಳಾಗಿರುವ ಫಾಹಿಂ ಅನ್ಸಾರಿ ಹಾಗೂ ಸಬಾವುದ್ದೀನ್ ಅವರುಗಳೂ ತಪ್ಪೊಪ್ಪಿಕೊಂಡಿಲ್ಲ.

ಬಧವಾರ ಮುಂಬೈದಾಳಿ ಪ್ರಕರಣದ ವಿಚಾರಣೆ ನಡೆಸುತ್ತಿರುವ ವಿಶೇಷ ನ್ಯಾಯಾಲಯವು ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡಾಗ ಈ ಬೆಳವಣಿಗೆ ಸಂಭವಿಸಿದೆ. ಪ್ರಕರಣದಲ್ಲಿ ಈ ಮೂವರ ವಿರುದ್ಧ 166 ಮಂದಿಯ ಕೊಲೆ ಹಾಗೂ ಇತರ 234 ಮಂದಿಯನ್ನು ಗಾಯಗೊಳಿಸಿರುವ ಆರೋಪ ಹೊರಿಸಲಾಗಿದೆ. ಅಲ್ಲದೆ, ಭಾರತದ ವಿರುದ್ಧ ಯುದ್ಧ ಹಾಗೂ ಅಪರಾಧಿ ಸಂಚು ಆರೋಪದಲ್ಲಿ ಸೇರಿವೆ. ಕಸಬ್ ಒಬ್ಬನ ಮೇಲೆಯೇ 72 ಮಂದಿಯನ್ನು ಕೊಂದಿರುವ ಆರೋಪವಿದೆ. ಒಟ್ಟಾರೆಯಾಗಿ 86 ಆರೋಪಗಳನ್ನು ಹೇರಲಾಗಿದೆ.

ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎಂ.ಎನ್. ತಹಿಲ್ಯಾನಿ ಅವರು ಆತನ ವಿರುದ್ಧ ರೂಪಿಸಲಾಗಿರುವ ಆರೋಪಗಳನ್ನು ವಿವರಿಸಿದಾಗ ಆತ, "ಇದೆಲ್ಲವೂ ತಪ್ಪು, ನಾನಿದನ್ನು ಒಪ್ಪಿಕೊಳ್ಳುವುದಿಲ್ಲ" ಎಂದು ಹೇಳಿದ.

ಬುಧವಾರದ ವಿಚಾರಣೆ ವೇಳೆ, ನ್ಯಾಯಾಧೀಶರು ಆತನನ್ನು ಪ್ರಶ್ನಿಸುತ್ತಾ ಸಹಜವಾಗೇ ವಯಸ್ಸೆಷ್ಟು ಎಂಬುದಾಗಿ ಕೇಳಿದಾಗ ಆತ ತಕ್ಷಣವೇ '21 ವರ್ಷಗಳು' ಎಂದ. ಬಳಿಕ ತಾನು ಬಾಲಾಪರಾಧಿ ಎಂಬುದಾಗಿ ನಿರೂಪಿಸಲು ನಡೆಸಿದ ಕಸರತ್ತು ನೆನಪಾಗಿ ಹಲ್ಲುಕಚ್ಚಿಕೊಂಡ.

ಕಸಬ್ ಮತ್ತು ಇತರರ ವಿರುದ್ಧ ಕಾನೂನುಕ್ರಮ ಜರುಗಿಸಲು ಕೇಂದ್ರ ಮತ್ತು ಮಹಾರಾಷ್ಟ್ರ ಸರ್ಕಾರದಿಂದ ನ್ಯಾಯಾಲಯ ಮಂಗಳವಾರ ಮಂಜೂರಾತಿ ಪಡೆದಿತ್ತು.

ವಿಶೇಷ ಸರ್ಕಾರಿ ಅಭಿಯೋಜಕ ಉಜ್ವಲ್ ನಿಕಾಮ್ ಅವರು ಮಂಗಳವಾರ ಮಂಜೂರಾತಿ ಸಲ್ಲಿಸಿದ್ದರೆ. ರಾಷ್ಟ್ರದ ವಿರುದ್ಧ ದಂಗೆ, ಸೀಮಾ ಸುಂಕ ನೀತಿ ಕಾಯ್ದೆ ಉಲ್ಲಂಘನೆ(ಕಾನೂನು ಬಾಹಿರವಾಗಿ ರಾಷ್ಟ್ರದೊಳಗೆ ಶಸ್ತ್ರಾಸ್ತ್ರ ತಂದಿರುವುದು) ಸ್ಫೋಟಕಗಳನ್ನು ಬಳಸಿರುವುದು, ಶಸ್ತ್ರಾಸ್ತ್ರ ಕಾಯ್ದೆಗಳನ್ವಯ ಆರೋಪಗಳನ್ನು ಮಾಡಲಾಗಿದೆ.

ಇದನ್ನು ಸ್ವೀಕರಿಸಿದ್ದ ನ್ಯಾಯಾಧೀಶರು ಬುಧವಾರ ಚಾರ್ಜ್ ಫ್ರೇಮ್ ಮಾಡುವುದಾಗಿ ಹೇಳಿದ್ದರು. ಕಸ್ಟಮ್ಸ್ ಕಾಯ್ದೆ ಪ್ರಕಾರ ಕಾನೂನು ಕ್ರಮ ಜರುಗಿಸಲು ಕಸ್ಟಂ ಇಲಾಖೆಯಿಂದ ಮಂಜೂರಾತಿ ಪಡೆದಿರುವುದಾಗಿ ತಿಳಿಸಿದರು.

ಕಸಬ್ ತನ್ನ ಪಾಕಿಸ್ತಾನಿ ಸಹಚರರೊಂದಿಗೆ ಮುಂಬೈಯಲ್ಲಿ ಭಯೋತ್ಪಾದನಾ ದಾಳಿ ನಡೆಸಲು ಶಸ್ತ್ರಾಸ್ತ್ರಗಳನ್ನು ಕಾನೂನು ಬಾಹಿರವಾಗಿ ಭಾರತದೊಳಕ್ಕೆ ತಂದಿದ್ದ ಎಂದು ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.

ಕೇಂದ್ರ ಸರ್ಕಾರವೂ ಸಹ ರಾಷ್ಟ್ರದ ವಿರುದ್ಧ ದಂಗೆ ಹೂಡಿರುವುದಕ್ಕಾಗಿ ಕಸಬ್ ಮತ್ತು ಇತರರ ವಿರುದ್ಧ ಭಾರತೀಯ ದಂಡ ಸಂಹಿತೆಯಡಿ ಕಾನೂನು ಕ್ರಮ ಕೈಗೊಳ್ಳಲು ಅನುಮತಿ ನೀಡಿದೆ.

ಆರೋಪ ಸಾಬೀತಾದಲ್ಲಿ, ಈ ಉಗ್ರರಿಗೆ ಮರಣದಂಡನೆ ಅಥವಾ ಜೀವಾವಧಿ ಶಿಕ್ಷೆ ಮತ್ತು ದಂಡವನ್ನು ವಿಧಿಸಬಹುದಾಗಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮತಹಾಕಲು ಇಷ್ಟವಿಲ್ಲದಿದ್ದರೆ, ಫಾರಂ 49-o ತುಂಬಿ
ಸೋನಿಯಾ ಜಯಾಲಲಿತಾ 'ಕೈ' ಹಿಡಿತಾರಾ?
164 ಕ್ರಿಮಿನಲ್‌ಗಳು, 259 ಕೋಟ್ಯಾಧಿಪತಿಗಳು ಸ್ಫರ್ಧೆಯಲ್ಲಿ
ಕಾಂಗ್ರೆಸ್ ಎಡಕ್ಕೆ ಹೊರಳಿದರೆ, ನಾವು ಹೊರಕ್ಕೆ: ಮಮತಾ
ರಾಷ್ಟ್ರ ಭಕ್ತ ಮುಸ್ಲಿಮರಿಗೆ ಠಾಕ್ರೆ ಸಲಾಂ
ಸಿಂಗ್‌ರಂತೆ ನಾನ್ಯಾಕೆ ಹಿಂಬಾಗಿಲ ಪ್ರಧಾನಿಯಾಗಬಾರದು: ಮಾಯಾ