ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > 4ಹಂತದ ಚುನಾವಣೆಗೆ ಬಿರುಸಿನ ಮತದಾನ ಆರಂಭ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
4ಹಂತದ ಚುನಾವಣೆಗೆ ಬಿರುಸಿನ ಮತದಾನ ಆರಂಭ
ಹದಿನೈದನೆ ಲೋಕಸಭಾ ಚುನಾವಣೆಯ ನಾಲ್ಕನೇ ಹಂತದ ಮತದಾನ ಗುರುವಾರ ಬೆಳಿಗ್ಗೆ ಏಳು ಗಂಟೆಗೆ ಆರಂಭಗೊಂಡಿದ್ದು, ಸಾಯಂಕಾಲ ಐದು ಗಂಟೆಯ ತನಕ ನಡೆಯಲಿದೆ. ಮತಗಟ್ಟೆಗಳಲ್ಲಿ ಮತದಾರರು ತಮ್ಮ ಪರಮೋಚ್ಚ ಹಕ್ಕನ್ನು ಚಲಾಯಿಸಲು ಸರತಿ ಸಾಲಿನಲ್ಲಿ ನಿಂತಿರುವ ದೃಶ್ಯಗಳು ಕಂಡು ಬರುತ್ತಿವೆ. ನಾಲ್ಕನೆ ಹಂತದ ಚುನಾವಣೆಯಲ್ಲಿ ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್, ಕಾಂಗ್ರೆಸ್ 'ಆಪತ್ಭಾಂದವ' ಪ್ರಣಬ್ ಮುಖರ್ಜಿ, ಸಮಾಜವಾದಿ ಪಕ್ಷದ ವರಿಷ್ಠ ಮುಲಾಯಂ ಸಿಂಗ್ ಯಾದವ್, ರೈಲ್ವೇ ಸಚಿವ ಲಾಲೂ ಪ್ರಸಾದ್ ಯಾದವ್ ಅವರುಗಳ ಹಣೆ ಬರಹ ನಿರ್ಧಾರವಾಗಲಿದೆ.

119 ಮಹಿಳೆಯರು ಸೇರಿದಂತೆ ಒಟ್ಟು 1,315 ಅಭ್ಯರ್ಥಿಗಳು ಗುರುವಾರದ ಚುನಾವಣೆಯಲ್ಲಿ ಅದೃಷ್ಟ ಪರೀಕ್ಷಿಸಿಕೊಳ್ಳುತ್ತಿದ್ದಾರೆ. ಎಂಟು ರಾಜ್ಯಗಳ 85 ಲೋಕ ಸಭಾ ಸ್ಥಾನಗಳಿಗೆ ನಾಲ್ಕನೇ ಹಂತದಲ್ಲಿ ಚುನಾವಣೆ ನಡೆಯುತ್ತಿದೆ.

ರಾಜಸ್ಥಾನದ ಎಲ್ಲಾ 25, ಹಾಗೆಯೇ ಹರಿಯಾಣದ 10 ಮತ್ತು ದೆಹಲಿಯ ಎಲ್ಲಾ 7 ಸ್ಥಾನಗಳಿಗೆ ಒಂದೇ ಹಂತದಲ್ಲಿ ಚುನಾವಣೆ ನಡೆಯುತ್ತಿದೆ. ಇದಲ್ಲದೆ, ಬಿಹಾರದ 3, ಜಮ್ಮು ಕಾಶ್ಮೀರದ 1, ಪಂಜಾಬ್‌ನ 18, ಉತ್ತರ ಪ್ರದೇಶದ 18 ಹಾಗೂ ಪಶ್ಚಿಮ ಬಂಗಾಲದ 17 ಲೋಕಸಭೆ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ.

9.46 ಕೋಟಿ ಜನರು ತಮ್ಮ ಹಕ್ಕನ್ನು ಚಲಾಯಿಸಲಿದ್ದಾರೆ. 1.29 ಲಕ್ಷ ಮತಗಟ್ಟೆಗಳನ್ನು ರಚಿಸಲಾಗಿದ್ದು, ಸುಮಾರು 6 ಲಕ್ಷ ಜನರು ಮತದಾನ ಪ್ರಕ್ರಿಯೆ ನಿರ್ವಹಣೆಗೆ ಮುಂದಾಗಿದ್ದಾರೆ.

ನಾಲ್ಕನೆ ಹಂತ ಪೂರ್ಣಗೊಂಡರೆ, ಒಟ್ಟು 545 ಸ್ಥಾನಗಳಲ್ಲಿ 457 ಸ್ಥಾನಗಳಿಗೆ ಚುನಾವಣೆ ಪೂರ್ಣಗೊಂಡಂತಾಗುತ್ತದೆ. ಲೋಕಸಭೆಯ 543 ಸ್ಥಾನಗಳಿಗೆ ಮಾತ್ರ ಚುನಾವಣೆ ನಡೆಯಲಿದ್ದು, ಮಿಕ್ಕೆರಡು ಸ್ಥಾನಗಳಿಗೆ ಆಂಗ್ಲೋ ಇಂಡಿಯನ್ ಅಭ್ಯರ್ಥಿಗಳ ನಾಮನಿರ್ದೇಶನ ಮಾಡಲಾಗುವುದು.

ಎನ್‌ಡಿಎ, ಯುಪಿಎ ಮತ್ತು ತೃತೀಯ ರಂಗಗಳ ತಾರಪ್ರಚಾರಕರು ರಾಷ್ಟ್ರಾದ್ಯಂತ ಎಷ್ಟು ಸಾಧ್ಯವೋ ಅಷ್ಟು ಪ್ರಚಾರ ಮಾಡಿದ್ದರು. ಆಡ್ವಾಣಿ ಅವರು ಮನಮೋಹನ್ ಸಿಂಗ್ ದುರ್ಬಲ ಎನ್ನುವುದನ್ನು ಮುಂದುವರಿಸಿದ್ದರೆ, ಇದಕ್ಕೆ ಪ್ರತಿಯಾಗಿ ಸೋನಿಯಾ ಗಾಂಧಿ ಹಾಗೂ ಆವರ ಪುತ್ರ ರಾಹುಲ್ ಗಾಂಧಿ, ಕಾಂಧಹಾರ್ ವಿಮಾನಾಪಹರಣದ ವೇಳೆ ಉಗ್ರರ ಬಿಡುಗಡೆಯ ವಿಚಾರವನ್ನು ಎತ್ತಿಆಡಿದ್ದರು.

ಸಮಾಜವಾದಿ ಪಕ್ಷದ ಬೆಂಬಲದೊಂದಿಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ ಸಿಂಗ್ ಇಟಾ ಲೋಕಸಭೆ ಕ್ಷೇತ್ರದಿಂದ ಅದೃಷ್ಟ ಪರೀಕ್ಷೆ ನಡೆಸಿದ್ದಾರೆ. ಇವರಲ್ಲದೇ, ಫಾರೂಕ್ ಅಬ್ದುಲ್, ಸಚಿನ್ ಪೈಲೆಟ್, ಶೇಖರ್ ಸುಮನ್, ಭಜನ್ ಲಾಲ್, ಶತೃಘ್ನ ಸಿನ್ಹಾ ಕೂಡಾ ಕಣದಲ್ಲಿದ್ದಾರೆ.



 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ನಾಲ್ಕನೇ ಹಂತದ ಮತದಾನ: ಭಾರೀ ಭದ್ರತೆ
ನಕ್ಸಲ್ ದಾಳಿಗೆ ಜವಾನ ಸಹಿತ 11 ಮಂದಿ ಬಲಿ
ಪ್ರಧಾನಿ ಆಡ್ವಾಣಿಯೇ ಹೊರತು ಮೋದಿಯಲ್ಲ: ನಿತೀಶ್
ನಾನು ನಿರಪರಾಧಿ: ನರಹಂತಕ ಉಗ್ರ ಕಸಬ್
ಮತಹಾಕಲು ಇಷ್ಟವಿಲ್ಲದಿದ್ದರೆ, ಫಾರಂ 49-o ತುಂಬಿ
ಸೋನಿಯಾ ಜಯಾಲಲಿತಾ 'ಕೈ' ಹಿಡಿತಾರಾ?