ನಾಲ್ಕನೆ ಹಂತದ ಮತದಾನ ಗರುವಾರ ಮುಂಜಾನೆ ಆರಂಭಗೊಂಡಿದ್ದು ಘಟಾನುಘಟಿಗಳು ಮತಚಲಾಯಿಸಿದ್ದಾರೆ. ಕಾಂಗ್ರೆಸ್ ಪಕ್ಷದ ತಾರಾ ಪ್ರಚಾರಕಿ, ಸೋನಿಯಾ ಪುತ್ರಿ, ರಾಹುಲ್ ಸಹೋದರಿ ಪ್ರಿಯಾಂಕಾ ಗಾಂಧಿ ತನ್ನ ಪತಿ ರಾಬರ್ಟ್ ವಾದ್ರ ಅವರೊಂದಿಗೆ ಆಗಮಿಸಿ ಮತದಾನ ಮಾಡಿದರು. ಇದಲ್ಲದೆ, ಕಾಂಗ್ರೆಸ್ ಮುಖಂಡ ಕಪಿಲ್ ಸಿಬಾಲ್, ಶೇಖರ್ ಸುಮನ್ ಸೇರಿದಂತೆ ಹಲವು ಪ್ರಮುಖರು ಮತಚಲಾಯಿಸಿದ್ದಾರೆ.ತನ್ನ 35 ಲೋಧಿ ಎಸ್ಟೇಟ್ ನಿವಾಸದಿಂದ ಸುಮಾರು 20 ಮೀಟರ್ ದೂರದಲ್ಲಿರುವ ವಿದ್ಯಾಭವನ್ ಮಹಾವಿದ್ಯಾಲಯ ಮತಗಟ್ಟೆಗೆ ಆಗಮಿಸಿದ ಪ್ರಿಯಾಂಕ ಚುನಾವಣಾ ಪ್ರಚಾರಕ್ಕೆ ತೆರಳುತ್ತಿದ್ದಂತೆ ಸೀರೆ ಧರಿಸಿರಲಿಲ್ಲ. ಅವರು ಕಪ್ಪು ಬಣ್ಣದ ಜೀನ್ಸ್ ಹಾಗೂ ಕಡು ನೀಲಿ ಬಣ್ಣದ ಟಾಪ್ ತೊಟ್ಟಿದ್ದರು. ಮುಂಜಾನೆ ಸುಮಾರು 7.10ರ ವೇಳೆಗೆ ಆಗಮಿಸಿ ಮತಚಲಾಯಿಸಿದರು.ದೆಹಲಿಯ ಏಳೂ ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲ್ಲುವುದೇ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು ತಾನು ಹಾಗೆ ಭಾವಿಸಿರುವುದಾಗಿ ನುಡಿದರು.ಮತಚಲಾಯಿಸಿರೆಂದು ಜನತೆಗೆ ಮನವಿ ಮಾಡಿದ ಅವರು ಪ್ರಧಾನಿ ಮನಮನೋಹನ್ ಸಿಂಗ್ ಅವರ ರಾಷ್ಟ್ರದ ಅಭಿವೃದ್ಧಿಗಾಗಿ ಮಾಡಿರುವ ಕಾರ್ಯಗಳನ್ನು ಪರಿಗಣಿಸಿ ತಮ್ಮ ಪಕ್ಷಕ್ಕೆ ಮತಚಲಾಯಿಸುವಂತೆ ನುಡಿದರು.ರಾಷ್ಟ್ರಾದ್ಯಂತ ಕಾಂಗ್ರೆಸ್ ಉತ್ತಮ ಫಲಿತಾಂಶ ದಾಖಲಿಸಲಿದೆ ಎಂಬ ಆಶಾಭಾವ ವ್ಯಕ್ತಪಡಿಸಿದ ಅವರು, ನಿಮ್ಮ ಸಹೋದರ ಬಿಂಬಿಸಿರುವಂತೆ ಚುನಾವಣೋತ್ತರದಲ್ಲಿ ಕಾಂಗ್ರೆಸ್‌ಗೆ ಇನ್ನಷ್ಟು ಮಿತ್ರರ ಅವಶ್ಯಕತೆ ಬೀಳಲಿದೆಯೇ ಎಂಬ ಪ್ರಶ್ನೆಗೆ, ಮೇ. 16 ಬಳಿಕ ನೋಡೋಣ ಎಂದಷ್ಟೆ ನುಡಿದರು. |