ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > 18ರೊಳಗಿನ ಎಲ್ಲ ತಪ್ಪಿತಸ್ಥರು ಬಾಲಾಪರಾಧಿಗಳು: ಸು.ಕೋ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
18ರೊಳಗಿನ ಎಲ್ಲ ತಪ್ಪಿತಸ್ಥರು ಬಾಲಾಪರಾಧಿಗಳು: ಸು.ಕೋ
ಹದಿನೆಂಟರ ಹರೆಯದ ಕೆಳಗಿನ ಎಲ್ಲಾ ತಪ್ಪಿತಸ್ಥರೂ ಬಾಲಾಪರಾಧಿಗಳು ಎಂಬುದಾಗಿ ಸುಪ್ರೀಂಕೋರ್ಟ್ ಹೇಳಿದೆ. ಬಾಲಾಪರಾಧಿಗಳ ನ್ಯಾಯ ಕಾಯ್ದೆ 1986, 16ರ ಹರೆಯದೊಳಗಿನ ವಯಸ್ಕರು ಅಪರಾಧ ಮಾಡಿದ್ದಲ್ಲಿ ಅವರ ಕುರಿತು ಮೆದು ಧೋರಣೆ ತಳೆಯುವಂತೆ ಹೇಳಿದೆ. 2000ದ ಇಸವಿಯಲ್ಲಿ ಇದನ್ನು 18ರ ಹರೆಯದ ತನಕ ವಿಸ್ತರಿಸುವ ಹೊಸ ಕಾಯ್ದೆಯನ್ನು ಜಾರಿಗೆ ತರಲಾಗಿತ್ತು .

ಈ 14 ವರ್ಷಗಳ ನಡುವಿನಲ್ಲಿ 16ರಿಂದ 18ರ ಹರೆಯದ ಸಾವಿರಾರು ಅಪರಾಧಿಗಳು ಇತರ ಸಹಜ ಅಪರಾಧಿ ಪ್ರಕರಣಗಳಂತೆ ವಿಚಾರಣೆ ಎದುರಿಸಿದ್ದರು. ಇವರಲ್ಲಿ ಹಲವಾರು ಮಂದಿ ಇನ್ನೂ ವಿಚಾರಣೆ ಎದುರಿಸುತ್ತಿದ್ದಾರೆ. ಇದಕ್ಕೆ ವೈರುಧ್ಯ ಎಂಬಂತೆ 2001ರ ಎಪ್ರಿಲ್ ಒಂದರಂದು ಜಾರಿಗೆ ಬಂದಿರುವ ಬಾಲಾಪರಾಧಿಗಳ ಕಾಯ್ದೆಯನ್ವಯ ಇದರ ಬಳಿಕದ 18ರ ಹರೆಯದೊಳಗಿನ ಅಪರಾಧಿಗಳನ್ನು ಬಾಲಾಪರಾಧಿಗಳ ಕಾಯ್ದೆಯಡಿ ವಿಚಾರಣೆ ನಡೆಸಲಾಗುತ್ತಿತ್ತು.

ಇದೀಗ ಈ ಎರಡು ಕಾಯ್ದೆಗಳ ನಡುವಿನ ವ್ಯತ್ಯಾಸವನ್ನು ಸರಿಪಡಿಸಿರುವ ಸುಪ್ರೀಂ ಕೋರ್ಟ್, ಹೊಸ ಅಥವಾ ಹಳೆ, ಯಾವುದೇ ಕಾನೂನಿನಡಿ ಬರುವ ಎಲ್ಲಾ 18ರ ಹರೆಯದೊಳಗಿನವರು ಬಾಲಾಪರಾಧಿಗಳು ಎಂದು ಹೇಳಿದೆ. ಹೊಸದಾಗಿ ಪ್ರಕರಣ ದಾಖಲಾಗುವ ಅಥವಾ ಇದೀಗಾಗಲೇ ವಿಚಾರಣೆ ಎದುರಿಸುತ್ತಿರುವ ಎಲ್ಲರಿಗೂ ಇದು ಅನ್ವಯವಾಗುತ್ತದೆ ಎಂದು ಹೇಳಿರುವ ನ್ಯಾಯಾಲಯ ಈ ಕುರಿತ ಗೊಂದಲ ಪರಿಹರಿಸಿದೆ.

ನ್ಯಾಯಮೂರ್ತಿಗಳಾದ ಅಲ್ತಮಸ್ ಕಬೀರ್ ಹಾಗೂ ಸಿರಿಯಾಕ್ ಜೋಸೆಫ್ ಅವರನ್ನೊಳಗೊಂಡ ನ್ಯಾಯಪೀಠವು ಈ ಅತ್ಯಂತ ಮಹತ್ವದ ತೀರ್ಪು ನೀಡಿದೆ. ಒಂದಿಲ್ಲೊಂದು ಕಾರಣದಿಂದ ಅಪರಾಧ ಎಸಗಿರುವ ಮಕ್ಕಳಿಗೆ ತಮ್ಮ ತಪ್ಪನ್ನು ಅರಿತು ಸರಿಪಡಿಸಿ ತಮ್ಮ ಜೀವನ ರೂಪಿಸಿಕೊಂಡು ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಬಾಳುವಂತೆ ಮನಪರಿವರ್ತನೆಯಾಗುವ ಅವಕಾಶ ನೀಡುವುದೇ ಈ ಕಾನೂನಿನ ಉದ್ದೇಶ ಎಂದು ನ್ಯಾಯಪೀಠ ಹೇಳಿದೆ.

ಹಾಗಾಗಿ ಬಾಲಾಪರಾಧಿಗಳು ಎಂಬುದಕ್ಕೆ 18ರೊಳಗಿನ ಮತ್ತು 16ರೊಳಗಿನ ಎಂಬ ಎರಡು ವ್ಯಾಖ್ಯಾನ ಅವಶ್ಯಕತೆಇಲ್ಲ ಎಂದು ನ್ಯಾಯಪೀಠ ಅಭಿಪ್ರಾಯಿಸಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಪಟ್ಟಿಯಿಂದ ಸಿಇಸಿ ನವೀನ್ ಚಾವ್ಲಾ ಹೆಸರು ಡಿಲೀಟ್!
ನಂದಿಗ್ರಾಮದಲ್ಲಿ ಗುಂಡು ಹಾರಾಟ, ಒಂದು ಸಾವು
'ಕೈ' ಹಿಡಿಯಲು ಎಸ್ಪಿಗೇನು ಚಿಂತೆ ಇಲ್ವಂತೆ
ಈಳಂ ಹೋರಾಟ ಸೇರಿಕೊಂಡ ಕರುಣಾನಿಧಿ
ದೆಹಲಿಯಲ್ಲಿ ಪ್ರಿಯಾಂಕಾ ಗಾಂಧಿ ಮತ ಚಲಾವಣೆ
4ಹಂತದ ಚುನಾವಣೆಗೆ ಬಿರುಸಿನ ಮತದಾನ ಆರಂಭ