ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ನಾಲ್ಕನೆ ಹಂತದ ಚುನಾವಣೆಯಲ್ಲಿ ಹಿಂಸಾಚಾರ, 2 ಸಾವು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನಾಲ್ಕನೆ ಹಂತದ ಚುನಾವಣೆಯಲ್ಲಿ ಹಿಂಸಾಚಾರ, 2 ಸಾವು
ಧಗಧಗಿಸುವ ಬಿಸಿಲಿನ ನಡುವೆಯೂ ನಡೆದ ನಾಲ್ಕನೆ ಹಂತದ ಚುನಾವಣೆಯಲ್ಲಿ ಪ್ರಮುಖ ವ್ಯಕ್ತಿಗಳು ರಾಜಕಾರಣಿಗಳು ಹಾಗೂ ಜನಸಾಮಾನ್ಯರು ಅತ್ಯುತ್ಸಾಹದಿಂದ ಮತದಾನ ಮಾಡಿದರು. ರಾಷ್ಟ್ರದ ರಾಜಧಾನಿ ದೆಹಲಿ ಸೇರಿದಂತೆ ಎಂಟು ರಾಜ್ಯಗಳಲ್ಲಿ ನಡೆದ ಮತದಾನದಲ್ಲಿ ಮಂದಗತಿಯಿಂದ ಹಿಡಿದು ಬಿರುಸಿನ ಮತದಾನ ದಾಖಲಾಗಿದೆ. ಈ ಮಧ್ಯೆ, ಪಶ್ಚಿಮಬಂಗಾಳ ಹಾಗೂ ರಾಜಸ್ಥಾನದಲ್ಲಿ ನಡೆದ ಗಲಭೆಯಲ್ಲಿ ಇಬ್ಬರು ವ್ಯಕ್ತಿಗಳು ಮೃತರಾಗಿದ್ದಾರೆ ಮತ್ತು ಬಿಸಿಲಾಘಾತದಿಂದ ಇಬ್ಬರು ಅಸುನೀಗಿದ್ದಾರೆ.

ಪಶ್ಚಿಮ ಬಂಗಾಳ
ಪಶ್ಚಿಮ ಬಂಗಾಳದ ಮುರ್ಶಿದಾಬಾದ್ ಜಿಲ್ಲೆಯ ಜಂಗಿಪುರ ಕ್ಷೇತ್ರದಲ್ಲಿ ಮತಚಲಾಯಿಸಿ ಹೊರಬರುತ್ತಿದ್ದ ವೇಳೆ ಸಿಪಿಐ(ಎಂ) ಕಾರ್ಯಕರ್ತ 28ರ ಹರೆಯದ ಕಾಶಿನಾಥ್ ಮಂಡಲ್ ಎಂಬಾತನ ಮೇಲೆ ದುಷ್ಕರ್ಮಿಗಳು ಬಾಂಬ್ ಎಸೆದಿದ್ದು ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಕ್ಷೇತ್ರದಿಂದ ವಿದೇಶಾಂಗ ವ್ಯವಹಾರಗಳ ಸಚಿವ ಕಾಂಗ್ರೆಸ್‌ನ ಪ್ರಮುಖ ನಾಯಕ ಪ್ರಣಬ್ ಮುಖರ್ಜಿ ಸ್ಪರ್ಧಿಸುತ್ತಿದ್ದಾರೆ.

ಇದಲ್ಲದೆ, ಪಶ್ಚಿಮ ಬಂಗಾಳದ ಪಶ್ಚಿಮ ಮಿಡ್ನಾಪುರ ಜಿಲ್ಲೆಯಲ್ಲಿ ಮತದಾನ ನಡೆಸಲು ಬಿಸಿಲಿನಲ್ಲಿ ಸರತಿ ಸಾಲಿನಲ್ಲಿ ನಿಂತಿದ್ದ ಇಬ್ಬರು ಬಿಸಿಲಾಘಾತ ತಡೆಯಲಾಗದೆ ಸಾವನ್ನಪ್ಪಿರು ದಾರುಣ ಘಟನೆಯೂ ಸಹ ಸಂಭವಿಸಿದೆ.

ನಂದಿಗ್ರಾಮದ ತಮ್ಲುಕ್ ಕ್ಷೇತ್ರದಲ್ಲಿ ತೃಣಮೂಲ ಕಾಂಗ್ರೆಸ್ ಮತ್ತು ಸಿಪಿಎಂ ಕಾರ್ಯಕರ್ತರ ನಡುವೆ ಘರ್ಷಣೆ ನಡೆದ ಸಂದರ್ಭ ಯುವಕನೊಬ್ಬ ಗಾಯಗೊಂಡಿದ್ದಾನೆ. ಈ ಮಧ್ಯೆ ಗೋರಖ್‌ಪುರದಲ್ಲಿಯೂ ಈ ಎರಡು ಪಕ್ಷಗಳ ಕಾರ್ಯಕರ್ತರ ನಡುವೆ ಗುಂಡುಹಾರಾಟ ನಡೆದಿದ್ದು, ಯಾರುಯಾರ ಮೇಲೆ ಗುಂಡುಹಾರಿಸಿದ್ದಾರೆ ಎಂಬುದು ಸ್ಪಷ್ಟವಾಗಲಿಲ್ಲ. ಉಭಯ ಪಕ್ಷಗಳೂ ಪರಸ್ಪರ ಆರೋಪಿಸಿಕೊಳ್ಳುತ್ತಿವೆ. ಆದರೆ, ಇಲ್ಲಿ ಗುಂಡು ಹಾರಾಟ ನಡೆದಿದೆ ಎಂಬುದನ್ನು ಪೊಲೀಸರು ತಳ್ಳಿಹಾಕಿದ್ದಾರೆ.

ರಾಜಸ್ಥಾನ
ಇದೇ ವೇಳೆ ರಾಜಸ್ಥಾನದ ಸವಾಯ್‌ಮಾಧೋಪುರ ಜಿಲ್ಲೆಯ ಓಲ್ವಾರ ಗ್ರಾಮದಲ್ಲಿ ಮತಗಟ್ಟೆ ವಶಪಡಿಸಿಕೊಳ್ಳಲು ದುಷ್ಕರ್ಮಿಗಳು ಪ್ರಯತ್ನಿಸಿದಾಗ ಅರೆಸೇನಾಪಡೆ ಸಿಬ್ಬಂದಿಗಳು ಗುಂಡು ಹಾರಿಸಿದ್ದು, ಈ ವೇಳೆ ಓರ್ವವ್ಯಕ್ತಿ ಸಾವನ್ನಪ್ಪಿದ್ದಾನೆ ಎಂದು ಜೈಪುರದಲ್ಲಿ ಪೊಲೀಸರು ತಿಳಿಸಿದ್ದಾರೆ.

ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಕಿರೋರಿಲಾಲ್ ಮೀನಾ ಹಾಗೂ ಅವರ ಬೆಂಬಲಿಗರ ಮೇಲೆ ಕಲ್ಲು ತೂರಾಟ ನಡೆದಿದ್ದು, ಮೀನಾ ಅವರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.

ಜಮ್ಮು ಕಾಶ್ಮೀರ
ಜಮ್ಮು ಕಾಶ್ಮೀರದಲ್ಲಿಯೂ ಗಲಭೆ ಉಂಟಾಗಿದ್ದು, ಪ್ರತಿಭಟನಾ ಕಾರರು ಮತ್ತು ಸರ್ಕಾರಿ ಪಡೆಗಳ ನಡುವೆ ಘರ್ಷಣೆಯುಂಟಾಗಿದೆ. ಜಮ್ಮು ಕಾಶ್ಮೀರದ ಒಂದಿಲ್ಲೊಂದು ಕ್ಷೇತ್ರದಲ್ಲಿ ಪ್ರತೀ ಹಂತದಲ್ಲಿಯೂ ಮತದಾನ ನಡೆದಿದೆ. ನಾಲ್ಕನೆ ಹಂತದಲ್ಲಿಯೂ ಒಂದು ಕ್ಷೇತ್ರದಲ್ಲಿ ಚುನಾವಣೆ ನಡೆಯಿತು. ಪ್ರತ್ಯೇಕತವಾದಿಗಳು 50 ಗಂಟೆಗಳ ಬಂದ್‌ಗೆ ಕರೆ ನೀಡಿದ್ದಾರೆ.

ಮತಚಲಾಯಿಸಿದ ಘಟಾನುಘಟಿಗಳು
ನಾಲ್ಕನೆ ಹಂತದ ಮತದಾನದಲ್ಲಿ ಘಟಾನುಘಟಿಗಳು ಮತ ಚಲಾವಣೆ ನಡೆಸಿದರು. ರಾಷ್ಟ್ರಪತಿ ಪ್ರತಿಭಾ ಪಾಟೀಲ್, ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ, ಉಪರಾಷ್ಟ್ರಪತಿ ಹಮೀದ್ ಅನ್ಸಾರಿ, ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ, ದೆಹಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್, ಜಮ್ಮು ಕಾಶ್ಮೀರದ ಮುಖ್ಯಂತ್ರಿ ಒಮರ್ ಅಬ್ದುಲ್ಲಾ, ಪಂಜಾಬ್ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್, ಉಪ ಮುಖ್ಯಮಂತ್ರಿ ಸುಖ್‌ಬೀರ್ ಸಿಂಗ್ ಬಾದಲ್, ಹರ್ಯಾಣ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ, ಕೇಂದ್ರ ಸಚಿವ ಕಪಿಲ್ ಸಿಬಾಲ್, ಕಾಂಗ್ರೆಸ್ ಕಾರ್ಯಕರ್ತೆ ಪ್ರಿಯಾಂಕಾ ಗಾಂಧಿ, ಸಚಿವ ಲಾಲೂಪ್ರಸಾದ್ ಯಾದವ್, ಸಮಾಜವಾದಿ ಪಕ್ಷದ ವರಿಷ್ಠ ಮುಲಾಯಂ ಸಿಂಗ್ ಯಾದವ್, ಶೇಖರ್ ಸುಮನ್ ಮತ್ತಿರರು ಮತಚಲಾಯಿಸಿದರು.

ಏರಿಹೋದ ಲಾಲೂ
ಮತದಾನ ಕೇಂದ್ರದಲ್ಲಿ ಗೌಪ್ಯ ಮತದಾನದ ವೇಳೆ ಪೋಟೋ ತೆಗೆಯುತ್ತಿದ್ದ ಕ್ಯಾಮಾರಮ್ಯಾನ್ ಒಬ್ಬರ ಮೇಲೆ ಸಚಿವ ಲಾಲೂ ಪ್ರಸಾದ್ ಯಾದವ್ ಸಿಟ್ಟಿನಿಂದ ಏರಿ ಹೋದ ಘಟನೆ ಸಂಭವಿಸಿದೆ. ಮತದಾನ ಕೇಂದ್ರದೊಳಕ್ಕೆ ಸೇರಿಕೊಂಡಿದ್ದ ಫೋಟೋಗ್ರಾಪರನ್ನು ಹೊರತೆರಳಲು ವಿನಂತಿಸಿದಾಗ ಆತ ತೆರಳದಿದ್ದುದು ಲಾಲೂ ಕೋಪವನ್ನು ಕೆರಳಿಸಿತ್ತು. ಕೊನೆಗೆ ಭದ್ರತಾ ಸಿಬ್ಬಂದಿ ಫೋಟೋಗ್ರಾಪರನ್ನು ಬಲವಂತದಿಂದ ಹೊರ ಕಳುಹಿಸಿದರು.

 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮನೆಯಿಂದ ಹೊರತಳ್ಳಿದವರೇ ಆಸ್ತಿ ಪಡೆದರು
18ರೊಳಗಿನ ಎಲ್ಲ ತಪ್ಪಿತಸ್ಥರು ಬಾಲಾಪರಾಧಿಗಳು: ಸು.ಕೋ
ಪಟ್ಟಿಯಿಂದ ಸಿಇಸಿ ನವೀನ್ ಚಾವ್ಲಾ ಹೆಸರು ಡಿಲೀಟ್!
ನಂದಿಗ್ರಾಮದಲ್ಲಿ ಗುಂಡು ಹಾರಾಟ, ಒಂದು ಸಾವು
'ಕೈ' ಹಿಡಿಯಲು ಎಸ್ಪಿಗೇನು ಚಿಂತೆ ಇಲ್ವಂತೆ
ಈಳಂ ಹೋರಾಟ ಸೇರಿಕೊಂಡ ಕರುಣಾನಿಧಿ