ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಶ್ರೀಲಂಕಾ ತಮಿಳರಿಗೆ ಸಹಾಯ: ಪ್ರಧಾನಿ ಭರವಸೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಶ್ರೀಲಂಕಾ ತಮಿಳರಿಗೆ ಸಹಾಯ: ಪ್ರಧಾನಿ ಭರವಸೆ
ಶ್ರೀಲಂಕಾ ತಮಿಳರು ಘನತೆ ಮತ್ತು ಗೌರವಗದಿಂದ ಬದುಕಲು ಅವಶ್ಯಕತೆ ಇರುವ ಸಹಾಯವನ್ನು ನೀಡಲು ಭಾರತ ಸಾಧ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಪ್ರಧಾನಿ ಮನಮೋಹನ್ ಸಿಂಗ್ ಹೇಳಿದ್ದಾರೆ.

ಚುನಾವಣಾ ಪ್ರಚಾರಕ್ಕಾಗಿ ಚೆನ್ನೈಗೆ ಆಗಮಿಸಿದ್ದ ಪ್ರಧಾನಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಶ್ರೀಲಂಕಾದಲ್ಲಿನ ಕಷ್ಟಕರ ಪರಿಸ್ಥಿತಿಯಿಂದ ತೀವ್ರ ಕಳವಳಗೊಂಡಿರುವುದಾಗಿ ನುಡಿದರು. ಶ್ರೀಲಂಕಾ ಸೇನೆಯು ತಮಿಳು ಉಗ್ರರ ಮೇಲೆ ನಡೆಸಿರುವ ದಾಳಿಯಿಂದಾಗಿ ಹಲವಾರು ಮಂದಿ ಸಾವನ್ನಪ್ಪಿದ್ದಾರೆ.

ಶ್ರೀಲಂಕಾ ತಮಿಳರ ಪರಿಸ್ಥಿತಿ ಎಲ್ಲೆಡೆಯ ಜನತೆಯಲ್ಲಿ ಕಳವಳ ಮೂಡಿಸಿದೆ. ಶ್ರೀಲಂಕಾದಲ್ಲಿರುವ ತಮಿಳರು ಶಾಂತಿ, ಘನತೆ ಮತ್ತು ಗೌರವದ ಜೀವನ ಸಾಗಿಸಲು ಅಗತ್ಯ ಇರುವ ಎಲ್ಲವನ್ನೂ ನಾವು ಮಾಡುತ್ತಿದ್ದೇವೆ ಎಂದು ಅವರು ನುಡಿದರು.

ಶ್ರೀಲಂಕಾದಲ್ಲಿ ನಡೆಯುತ್ತಿರುವ ದಾಳಿಯಿಂದ ತೊಂದರೆಗೀಡಾದವರಿಗೆ ನೆಮ್ಮದಿ ಕಲ್ಪಿಸುವುದು ನಮ್ಮ ಮೊದಲ ಆದ್ಯತೆ ಎಂದು ಅವರು ನುಡಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ವಜಾ ಅಲ್ಲ, ಆಂತರಿಕ ಬದಲಾವಣೆ ಅಷ್ಟೆ: ಮೊಯ್ಲಿ
ಸಂತಾನಹರಣ ನೀತಿ; ಮನೆಗೊಬ್ಬ ಸೈನಿಕ: ವರುಣ್
ಸೋನಿಯಾ ಮೇಡಂ ಕರೆದ್ರೆ ಮಾತ್ರ ಬತ್ತೀವಿ: ಪಾಸ್ವಾನ್
ವಿಭಜನೆಯ ಅಂಚಿನಲ್ಲಿ ಸಮಾಜವಾದಿ ಪಕ್ಷ?
'ಅಫ್ಜಲ್‌ಗೆ ಮೃದುಧೋರಣೆ, ವರುಣ್‌ಗೆ ಗಲ್ಲು'
ಮೊಯ್ಲಿ ಮಾಧ್ಯಮ ಮುಖ್ಯಸ್ಥ ಸ್ಥಾನಕ್ಕೆ ಕೊಕ್!