ಶ್ರೀಲಂಕಾದ ಮಾನವೀಯ ದುರಂತದಲ್ಲಿ ಪರಿಣಾಮಕಾರಿ ಮಧ್ಯಸ್ಥಿಕೆ ವಹಿಸಲು ಕೇಂದ್ರ ಸರ್ಕಾರ ವಿಫಲವಾದ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆಯ ಮೊರೆ ಹೋಗಲು ಭಾರತದ ಮಾನವ ಹಕ್ಕು ರಕ್ಷಣೆ ಕಾರ್ಯಕರ್ತರು ಮುಂದಾಗಿದ್ದಾರೆ.
ದ್ವೀಪ ರಾಷ್ಟ್ರದ ವಾನ್ನಿ ಪ್ರದೇಶದಲ್ಲಿ ವಾಸಿಸುವ ತಮಿಳುನಾಗರಿಕರ ಕುಂದುಕೊರತೆಗಳ ಬಗ್ಗೆ ಕಾರ್ಯಕರ್ತರು ವಿಶ್ವಸಂಸ್ಥೆ ಗಮನಸೆಳೆಯಲಿದ್ದಾರೆ.
ನಾಗರಿಕ ಸ್ವಾತಂತ್ರ್ಯಗಳ ಜನತಾ ಒಕ್ಕೂಟವು ವಿಶ್ವಸಂಸ್ಥೆ ಭದ್ರತಾಮಂಡಳಿಯನ್ನು ಸಂಪರ್ಕಿಸಿದ್ದು, ಸಾವಿರಾರು ಶ್ರೀಲಂಕಾ ತಮಿಳರು ಬಾಂಬ್ ದಾಳಿಯಿಂದ, ಹಸಿವಿನಿಂದ ಮತ್ತು ವೈದ್ಯಕೀಯ ಸೌಲಭ್ಯದ ಕೊರತೆಯಿಂದ ಸಾವನ್ನಪ್ಪುವ ಜೀವಭಯದ ಹಿನ್ನೆಲೆಯಲ್ಲಿ ಶ್ರೀಲಂಕಾ ಕದನದಲ್ಲಿ ಮಿಲಿಟರಿ ಹಸ್ತಕ್ಷೇಪ ಆರಂಭಿಸಬೇಕೆಂದು ಕೋರಲಿದ್ದಾರೆ.
ಮಾನವೀಯತೆ ವಿರುದ್ಧ ಅಪರಾಧಕ್ಕಾಗಿ ಶ್ರೀಲಂಕಾ ಅಧ್ಯಕ್ಷ ಮಹೀಂದ್ರ ರಾಜಪಕ್ಷೆ, ರಕ್ಷಣಾ ಕಾರ್ಯದರ್ಶಿ ಗೋಟಾಬಾಯ ರಾಜಪಕ್ಷ ಮತ್ತು ಸೇನಾ ಕಮಾಂಡರ್ ವಿರುದ್ಧ ಕಾನೂನು ಕ್ರಮ ಜರುಗಿಸುವ ಪ್ರಕ್ರಿಯೆ ಆರಂಭಿಸಬೇಕೆಂದೂ ಮಾನವ ಹಕ್ಕು ಸಂಸ್ಥೆಯು ಆಗ್ರಹಿಸಿದೆ.
|