ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಚಟರ್ಜಿಯವರನ್ನು ಮಿಸ್ ಮಾಡುತ್ತಿರುವ ಬುದ್ಧದೇವ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಚಟರ್ಜಿಯವರನ್ನು ಮಿಸ್ ಮಾಡುತ್ತಿರುವ ಬುದ್ಧದೇವ್
PTI
ಲೋಕಸಭಾ ಸ್ಪೀಕರ್, ಹೆಡ್‌ಮಾಸ್ಟರ್ ಖ್ಯಾತಿಯ ಸೋಮನಾಥ್ ಚಟರ್ಜಿ ಅವರನ್ನು ಸಿಪಿಎಂಗೆ ಮರಳಿ ಕರೆತರಲು ಪ್ರಯತ್ನಿಸುವುದಾಗಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಬುದ್ಧದೇವ್ ಭಟ್ಟಚಾರ್ಯ ಹೇಳಿದ್ದಾರೆ. ಬೆಂಗಾಳಿ ಸುದ್ದಿವಾಹಿನಿ ಸ್ಟಾರ್ ಆನಂದಗೆ ನೀಡಿರುವ ಸಂದರ್ಶನದಲ್ಲಿ ಸಿಪಿಐ-ಎಂ ಪಾಲಿಟ್ ಬ್ಯೂರೋ ಸದಸ್ಯರಾದ ಬುದ್ಧದೇವ್, ಚಟರ್ಜಿಯವರನ್ನು ಕಳಕೊಂಡಿರುವ ಅನುಭವವಾಗುತ್ತಿದೆ ಎಂದು ಹೇಳಿದ್ದಾರೆ.

"ಖಂಡಿತವಾಗಿಯೂ ನಾನು ಅವರನ್ನು ರಾಜಕೀಯವಾಗಿ ಕಳೆದುಕೊಂಡಿದ್ದೇನೆ. ಸೋಮನಾಥರಂತ ವ್ಯಕ್ತಿತ್ವದ ನಾಯಕರನ್ನು ಪಕ್ಷದಿಂದ ದೂರ ಇರಿಸಿರುವುದರಿಂದ ಪಕ್ಷಕ್ಕೆ ಮತ್ತು ವೈಯಕ್ತಿಕವಾಗಿ ತನಗೆ ತುಂಬ ನೋವಾಗಿದೆ" ಎಂದು ಅವರು ನುಡಿದರು.

ಮಾಜಿ ಸಂಸದ ಸೈಫುದ್ದೀನ್ ಚೌಧುರಿ ಹಾಗೂ ಸೋಮನಾಥ್ ಅವರನ್ನು ಮರಳಿ ಪಕ್ಷಕ್ಕೆ ಕರೆತರುವ ಸಾಧ್ಯತೆ ಇದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.

ಪಕ್ಷ ತನ್ನೊಬ್ಬನದಲ್ಲ. ತನ್ನಂತೆಯೇ ಹಲವಾರು ಮಂದಿ ಪಕ್ಷದಲ್ಲಿದ್ದಾರೆ. ಆದರೆ ಹಿರಿಯ ನಾಯಕರನ್ನು ಮತ್ತೆ ಪಕ್ಷಕ್ಕೆ ಮರಳಿ ತರಲು ತಾನು ಪ್ರಯತ್ನಿಸುತ್ತಿರುವುದಾಗಿ ಅವರು ನುಡಿದರು.
PTI

ಅಣುಒಪ್ಪಂದವನ್ನು ವಿರೋಧಿಸಿ ಎಡಪಕ್ಷಗಳು ಯುಪಿಎ ಸರ್ಕಾರಕ್ಕೆ ನೀಡಿದ್ದ ಬೆಂಬಲ ಹಿಂತೆಗೆದುಕೊಂಡ ವೇಳೆ ಅಲ್ಪಸಂಖ್ಯಾತವಾದ ಮನಮೋಹನ್ ಸಿಂಗ್ ಸರ್ಕಾರ, ಸಂಸತ್ತಿನಲ್ಲಿ ಕಳೆದ ಜುಲೈ 22ರಂದು ವಿಶ್ವಾಸ ಮತ ಯಾಚಿಸಿದಾಗ, ಸ್ಥಾನ ತೆರವು ಗೊಳಿಸುವಂತೆ ಪಕ್ಷವು ಚಟರ್ಜಿಯವರಿಗೆ ಸೂಚಿಸಿತ್ತು. ಆದರೆ ಸ್ಪೀಕರ್ ಆಗಿದ್ದ ಚಟರ್ಜಿ ಸ್ಥಾನತೊರೆಯಲು ನಿರಾಕರಿಸಿದಾಗ ಅವರನ್ನು ಪಕ್ಷವು ಉಚ್ಟಾಟಿಸಿತ್ತು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ನಿವೃತ್ತಿ ನಂತರವೂ ಇಲಾಖಾ ತನಿಖೆ ನಡೆಸಬಹುದು: ಸು.ಕೋ
ಪಂಜಾಬಿನಲ್ಲಿ ಎನ್‌ಡಿಎ ದಿಢೀರ್ ತಾಕತ್ತು ಪ್ರದರ್ಶನ
ಅಮರ್‌ ಸಿಂಗ್‌ ಆಸ್ಪತ್ರೆಗೆ ದಾಖಲು
ಮರುಮತದಾನ ವೇಳೆ ಮತಗಟ್ಟೆ ವಶಕ್ಕೆ ಯತ್ನ: ಓರ್ವ ಬಲಿ
ವರುಣ್ ಗಾಂಧಿ ಸಂತಾನಹರಣ ಶಸ್ತ್ರಚಿಕಿತ್ಸೆ ವಿವಾದಕ್ಕೆ ಸ್ಪಷ್ಟನೆ
ರಾಜಪಕ್ಷೆ ವಿರುದ್ಧ ಕ್ರಮಕ್ಕೆ ಮಾನವ ಹಕ್ಕು ಸಂಘಟನೆ ಆಗ್ರಹ