ಒರಿಸ್ಸಾದಾದ್ಯಂತ ಬಿಸಿಲ ತಾಪಕ್ಕೆ ಬಲಿಯಾಗುತ್ತಿರುವವರ ಸಂಖ್ಯೆಯು ದಿನೇದಿನೇ ಹೆಚ್ಚುತ್ತಿದ್ದು ಸೋಮವಾರ 31ಕ್ಕೇರಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಿಸಿತಾಪದಿಂದಾಗಿ ಸತ್ತವರ ಸಂಖ್ಯೆ 31ಕ್ಕೇರಿದೆ ಎಂದು ರಾಜ್ಯ ಕಂದಾಯ ನಿಯಂತ್ರಣ ಕೊಠಡಿಯಲ್ಲಿ ವಿಶೇಷ ಕರ್ತವ್ಯದ ಮೇರೆಗೆ ನಿಯೋಜಿತರಾಗಿರುವ ಮನೋರಂಜನ್ ಚೌಧರಿ ಹೇಳಿದ್ದಾರೆ.
ರಾಜ್ಯದ ಪಶ್ಚಿಮ ಭಾಗದ ಹಲವು ಪಟ್ಟಣಗಳಲ್ಲಿ ತಾಪಮಾನವು 44 ಡಿಗ್ರಿಸೆಲ್ಷಿಯಸ್‌ಗಿಂತ ಹೆಚ್ಚು ದಾಖಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ರಾಜ್ಯದ ಒಳಭಾಗಗಳಲ್ಲೂ ಇಂತಹುದೇ ಪರಿಸ್ಥಿತಿ ಮುಂದುವರಿಯಲಿದೆ ಎಂಬುದಾಗಿ ಎಚ್ಚರಿಕೆ ನೀಡಿರುವುದಾಗಿ ಹವಾಮಾನ ತಜ್ಞ ಡಿ.ಸಿ. ಜೇನಾ ಅವರು ಹೇಳಿದ್ದಾರೆ. ಪಶ್ಚಿಮ ಒರಿಸ್ಸಾದ ಸಂಬಾಲ್ಪುರ ಪಟ್ಟಣದಲ್ಲಿ ಭಾನುವಾರ ತಾಪಮಾನವು 45.6 ಡಿಗ್ರಿ ಸೆಲ್ಷಿಯಸ್ ದಾಖಲಾಗಿದೆ. ಅಂತೆಯೇ ಭುವನೇಶ್ವರದಲ್ಲಿ 40.6 ಡಿಗ್ರಿ ಸೆಲ್ಷಿಯಸ್ ದಾಖಲಾಗಿದೆ. |