ಮಹಾರಾಷ್ಟ್ರ ಕ್ರೈಂ ಬ್ರ್ಯಾಂಚ್‌ನ ಮಹಾರಾಷ್ಟ್ರ ಕಂಟ್ರೋಲ್ ಆಫ್ ಆರ್ಗನೈಸ್ಡ್ ಕ್ರೈಂ ಆಕ್ಟ್ ನ್ಯಾಯಾಲಯ ಸೋಮವಾರ ಇಂಡಿಯನ್ ಮುಜಾಹುದ್ದೀನ್ ಸಂಘಟನೆಯ ಸಹ ಸಂಸ್ಥಾಪಕ ಸಾದಿಕ್ ಶೇಕ್ ಅವರನ್ನು 2006ರ ಜುಲೈ 11ರ ರೈಲು ಸರಣಿ ಸ್ಫೋಟದ ಆರೋಪದಿಂದ ಖುಲಾಸೆಗೊಳಿಸಿದೆ.
ಹಲವು ವೈದ್ಯ ಪರೀಕ್ಷೆಗಳಿಂದಲೂ, ರೈಲು ಸರಣಿ ಸ್ಫೋಟದಲ್ಲಿ ತಾನು ಪ್ರಕರಣದ್ಲಲಿ ಭಾಗಿಯಾಗಿಲ್ಲ ಎಂದು ಸಾದಿಕ್ ಹೇಳುತ್ತಿರುವುದು ಸುಳ್ಳಲ್ಲ ಎಂದು ದೃಢಪಟ್ಟಿರುವ ಕಾರಣ ಬಿಡುಗಡೆ ಮಾಡಲಾಗಿದೆ.
ಟ್ರಾಂಬೆಯ ಎಲೆಕ್ಟ್ರೀಶಿಯನ್ ಆಗಿದ್ದ 31ರ ಹರೆಯದ ಸಾದಿಕ್ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್)ನಿಂದ ಫೆಬ್ರವರಿ 20ಕ್ಕೆ ಬಂಧನಕ್ಕೆ ಒಳಗಾಗಿದ್ದ. 188 ಮಂದಿ ಜನರ ಸಾವಿಗೆ ಕಾರಣವಾಗಿದ್ದ 7/11ನ ರೈಲು ಸರಣಿ ಸ್ಫೋಟದ ಆರೋಪದಲ್ಲಿ ಸಾದಿಕ್‌ನನ್ನು ಬಂಧಿಸಲಾಗಿತ್ತು. ನಂತರ ಈ ಸರಣಿ ಸ್ಫೋಟದಲ್ಲಿ ಇಂಡಿಯನ್ ಮುಜಾಹುದ್ದೀನ್ ಶಂಕೆಯನ್ನು ಬಲಗೊಳಿಸಲು ತಕ್ಕ ಸಾಕ್ಷ್ಯ ಸಿಗುತ್ತಿಲ್ಲ ಎಂದು ಕೋರ್ಟಿಗೆ ಎಟಿಎಸ್ ಅರ್ಜಿ ಸಲ್ಲಿಸಿತ್ತು.
ನ್ಯಾಯಾಧೀಶರಾದ ವೈ.ಡಿ.ಶಿಂಧೆ ಈ ಹಿನ್ನೆಲೆಯಲ್ಲಿ ಸಾದಿಕ್ ಅವರನ್ನು ಆರೋಪಮುಕ್ತಗೊಳಿಸಿದ್ದಾರೆ. ಎಟಿಎಸ್‌ನ ಹೆಚ್ಚುವರಿ ಪೊಲೀಸ್ ಆಯುಕ್ತ ಪರಮ್ ಬೀರ್ ಸಿಂಗ್ ಹೇಳುವಂತೆ, ರೈಲು ಸರಣಿ ಸ್ಫೋಟದ ಕುರಿತಾಗಿ ನಾವು ಸಾದಿಕ್‌ನನ್ನು ಸಾಕಷ್ಟು ಪ್ರಶ್ನಿಸಿದ್ದೇವೆ. ಜತೆಗೆ, ಪಾಲಿಗ್ರಾಫ್ ಹಾಗೂ ಬ್ರೈನ್ ಮ್ಯಾಪಿಂಗ್ ಪರೀಕ್ಷೆಗೆ ಒಳಪಡಿಸಲು ಸೂಚಿಸಿದ್ದೆವು. ಆದರೆ, ಆತನ ಯಾವುದೇ ನಡವಳಿಕೆಯಲ್ಲೂ ಆತ ಈ ಸರಣಿ ಸ್ಫೋಟದೊಂದಿಗೆ ಸಂಬಂಧ ಹೊಂದಿದ್ದಾನೆ ಎಂದು ತೋರಿಸಿಕೊಡಲಿಲ್ಲ. ಹೀಗಾಗಿ ನಾವು ನ್ಯಾಯಾಲಯಕ್ಕೆ ಆತನನ್ನು ಈ ಕೇಸಿನಿಂದ ಬಿಡುಗಡೆ ಮಾಡಬಹುದೆಂದು ಅರ್ಜಿ ಸಲ್ಲಿಸಿದೆವು ಎನ್ನುತ್ತಾರೆ.
2008ರಲ್ಲಿ ಸಾದಿಕ್‌ನನ್ನು ಇಂಡಿಯನ್ ಮುಜಾಹುದ್ದೀನ್‌ನ 20 ಮಂದಿ ಶಂಕಿತರ ಜತೆಗೆ ಕ್ರೈಂ ಬ್ರಾಂಚ್ ಬಂಧಿಸಿತ್ತು. ಅಹ್ಮದಾಬಾದ್, ದೆಹಲಿ ಬಾಂಬ್ ಸ್ಫೋಟಗಳಿಗಿಂತ ಮುಂಚೆ ಉಗ್ರವಾದ ಸೋಂಕಿರುವ ಇ-ಮೈಲ್‌ಗಳನ್ನು ಕಳುಹಿಸಿರುವ ಜಾಡಿನಲ್ಲಿ ಇವರನ್ನು ಬಂಧಿಸಲಾಗಿತ್ತು. 2006ರಲ್ಲೇ ಭಯೋತ್ಪಾದನಾ ನಿಗ್ರಹ ದಳ 13 ಮಂದಿ ಸಿಮಿ ಕಾರ್ಯಕರ್ತರನ್ನು ಶಂಕಿತರೆಂದು ಗುರುತಿಸಿ ಬಂಧಿಸಿತ್ತು. ಹಾಗೂ ಅವರ ವಿರುದ್ಧ 11,000 ಪುಟಗಳ ಚಾರ್ಜ್‌ಶೀಟ್ ಫೈಲ್ ಮಾಡಿತ್ತು. ಅಲ್ಲದೆ ಎಟಿಎಸ್ ಸ್ಫೋಟಕ ಬಾಂಬ್‌ಗಳನ್ನು ಸಿವ್ರಿ ಫ್ಲ್ಯಾಟ್‌ನಲ್ಲಿ ತಯಾರಿಸಲಾಗಿದ್ದು, ಆರ್‌ಡಿಎಕ್ಸ್‌ನ್ನು ಇಂಡಿಯನ್ ಮುಜಾಹುದ್ದೀನ್ ಸಂಘಟನೆಯ ರಿಯಾಝ್ ಭಟ್ಕಳ್ ಬಳಿಯಿಂದ ಪಡೆದಿದ್ದಾಗಿ ಲೆಕ್ಕಾಚಾರ ಹಾಕಿತ್ತು.
ಹಾಗಿದ್ದಾಗ್ಯೂ, ಎಟಿಎಸ್ ಈಗ ಸಿವ್ರಿ ಫ್ಲ್ಯಾಟ್‌ನಲ್ಲಿ ಬಾಂಬ್ ತಯಾರಿಸಿದ್ದಲ್ಲವಾದರೂ, 100 ಚದರ ಅಡಿಯ ಗೋವಂಡಿ ಫ್ಲ್ಯಾಟ್‌ನಲ್ಲಿ ತಯಾರಿಸಲಾಗಿತ್ತು ಎಂಬ ತನ್ನ ಹಳೇ ಥಿಯರಿಗೇ ಜೋತು ಬಿದ್ದಿದೆ. ಇದರ ಜತೆಗೇ ಆರ್ಡಿಎಕ್ಸ್‌ನ್ನು ಭಾರತಕ್ಕೆ ಇತರ ಹತ್ತು ಮಂದಿಯೊಂದಿಗೆ ಅಕ್ರಮವಾಗಿ ಪ್ರವೇಶಿಸಿರುವ ಪಾಕಿಸ್ತಾನಿ ಎಸನುಲ್ಲಾ ಎಂಬವನ ಬಳಿಯಿಂದ ಪಡೆದುದಾಗಿ ಭಯೋತ್ಪಾದನಾ ನಿಗ್ರಹ ದಳ ಹೇಳಿದೆ. |