ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಸರಕಾರ ನಿರ್ಣಯಿಸುವ ಅಂತಿಮ ಹಂತದ ಮತದಾನ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸರಕಾರ ನಿರ್ಣಯಿಸುವ ಅಂತಿಮ ಹಂತದ ಮತದಾನ
ಕೇಂದ್ರದಲ್ಲಿ ಅಧಿಕಾರಕ್ಕೇರುವ ಚುಕ್ಕಾಣಿ ಇದೆ ಎಂದೇ ನಂಬಲಾಗಿರುವ ತಮಿಳುನಾಡು ಸೇರಿದಂತೆ ದೇಶದ 86 ಲೋಕಸಭಾ ಕ್ಷೇತ್ರಗಳಿಗೆ 2009ರ ಐದನೇ ತಥಾ ಅಂತಿಮ ಹಂತದ ಮತದಾನ ಬುಧವಾರ ಬೆಳಿಗ್ಗೆ ಆರಂಭವಾಗಿದ್ದು, ಮಂದಗತಿಯಿಂದ ಚಾಲನೆ ದೊರೆತಿದೆ.

ಪಿ.ಚಿದಂಬರಂ, ಮಮತಾ ಬ್ಯಾನರ್ಜಿ, ದಯಾನಿಧಿ ಮಾರನ್, ವರುಣ್ ಗಾಂಧಿ ಹಾಗೂ ಮೊದಲ ಬಾರಿಗೆ ಚುನಾವಣಾ ಕಣಕ್ಕಿಳಿದಿರುವ ಡಿಎಂಕೆ ಮುಖ್ಯಸ್ಥ ಎಂ.ಕರುಣಾನಿಧಿಯವರ ಪುತ್ರ ಅಳಗಿರಿಯವರ ಚುನಾವಣಾ ಭವಿಷ್ಯಗಳು ಇಂದು ಮತಪೆಟ್ಟಿಗೆಯಲ್ಲಿ ಭದ್ರವಾಗುತ್ತಿವೆ.

ಅಂತಿಮ ಹಂತದ 86 ಸ್ಥಾನಗಳಿಗೆ 1432 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದು, ಕ್ರಿಕೆಟಿಗ ಮಹಮದ್ ಅಜರುದ್ದೀನ್, ಬಿಜೆಪಿಯ ಮನೇಕಾ ಗಾಂಧಿ, ಮುಖ್ತಾರ್ ಅಬ್ಬಾಸ್ ನಖ್ವಿ, ಡಿಎಂಕೆಯ ಟಿ.ಆರ್.ಬಾಲು, ಎ.ರಾಜಾ, ಎಂಡಿಎಂಕೆಯ ವೈಕೋ, ಎಸ್ಪಿಯ ಜಯಪ್ರದಾ ಮುಂತಾದವರು ಅದೃಷ್ಟಪರೀಕ್ಷೆಯ ಪಟ್ಟಿಯಲ್ಲಿದ್ದಾರೆ.

ತಮಿಳುನಾಡಿನ 30, ಪುದುಚೇರಿಯ 1, ಹಿಮಾಚಲ ಪ್ರದೇಶದ 4, ಜಮ್ಮು ಮತ್ತು ಕಾಶ್ಮೀರದ 2, ಪಂಜಾಬಿನ 9, ಉತ್ತರ ಪ್ರದೇಶದ 14, ಪಶ್ಚಿಮ ಬಂಗಾಳದ 11, ಉತ್ತರಾಖಂಡದ 5 ಮತ್ತು ಚಂಡೀಗಢದಲ್ಲಿ 1 ಸ್ಥಾನಗಳಿಗೆ ಇಂದು ಮತದಾನ ಪ್ರಕ್ರಿಯೆ ಜಾರಿಯಲ್ಲಿದೆ.

ಮತ ಎಣಿಕೆ ಮೇ 16ರಂದು ದೇಶಾದ್ಯಂತ ನಡೆಯಲಿದ್ದು, ಮಧ್ಯಾಹ್ನದ ವೇಳೆಗೆ ಮುಂದಿನ ಸರಕಾರ ರಚನೆಯ ಸಾಧ್ಯಾಸಾಧ್ಯತೆಗಳ ಕುರಿತು ಸ್ಪಷ್ಟ ಚಿತ್ರಣ ದೊರೆಯಲಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಅಂತಿಮ ಹಂತ: ಮತದಾನ ಆರಂಭ
ಉ.ಪ್ರದೇಶ: ಭಾರೀ ಮಳೆಗೆ ಕನಿಷ್ಠ 27 ಬಲಿ
ತೃತೀಯ 'ರಂಗು': ಸೋನಿಯಾ ಬಾಗಿಲು ಬಡಿದ ಕುಮಾರ!
ನಾಳೆ ಚಿದಂಬರಂ, ಬ್ಯಾನರ್ಜಿ, ವರುಣ್, ವೈಕೋ ಭವಿಷ್ಯ ನಿರ್ಧಾರ
7/11ರ ಸರಣಿ ರೈಲು ಸ್ಫೋಟದ ಶಂಕಿತ ಸಾದಿಕ್ ಬಿಡುಗಡೆ
ಚತುರ್ಥರಂಗದಲ್ಲಿ ಬಿಕ್ಕಟ್ಟಿಲ್ಲ: ಪಾಸ್ವಾನ್ ಉವಾಚ