ಮುಂಬೈಯಿಂದ ದೆಹಲಿ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಎರಡು ನಾಯಿಗಳು ಎರಡು ಗಂಟೆ ವಿಮಾನ ಪ್ರಯಾಣದಲ್ಲಿ ಸಾವಿಗೀಡಾಗಿವೆ.ಜಿಮ್ಮಿ ಹಾಗೂ ಬಟ್ನು ಎಂಬ ಎರಡು ಸುಂದರ ನಾಯಿಗಳನ್ನು ಜೆಟ್ ಏರ್‌ವೇಸ್‌ನ ಸರಕು ಸಾಗಣೆ ವಿಭಾಗದಲ್ಲಿಲ್ಲಿ ಮುಂಬೈಯಿಂದ ದೆಹಲಿಗೆ ಸಾಗಿಸಲಾಗುತ್ತಿತ್ತು. ಮಧ್ಯಾಹ್ನ ಮುಂಬೈಯಲ್ಲಿ 3.30ಕ್ಕೆ ವಿಮಾನಕ್ಕೆ ಹತ್ತಿದ ಈ ನಾಯಿಗಳ ಯಜಮಾನ ರಾಜೇಂದ್ರ ಟಂಡನ್ ಅವರೂ ಅದೇ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು.ಎರಡು ಗಂಟೆಗಳ ನಂತರ ವಿಮಾನ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಿದಾಗ ಆ ಎರಡೂ ನಾಯಿಗಳೂ ಸತ್ತಿದ್ದವು. ಈ ನಾಯಿಗಳಲ್ಲಿ ಒಂದಕ್ಕೆ ನಾಲ್ಕು ವರ್ಷ ಹಾಗೂ ಇನ್ನೊಂದಕ್ಕೆ ಮೂರು ವರ್ಷ ವಯಸ್ಸಾಗಿತ್ತು. ಎರಡೂ ನಾಯಿಗಳ ಸಾವಿಗೆ ಆಮ್ಲಜನಕದ ಕೊರತೆಯೇ ಕಾರಣ ಎಂದು ಅಂದಾಜಿಸಲಾಗಿದೆ.ಏರ್‌ಲೈನ್ಸ್‌ನ ವಕ್ತಾರರು ಹೇಳುವಂತೆ, ಈವರೆಗೆ ನಾವು ಸರಕು ಸಾಗಣೆ ವಿಭಾಗದಲ್ಲಿ ಜೀವಂತ ಪ್ರಾಣಿಗಳನ್ನು ಸಾಗಿಸಿದ ಅನುಭವವಿದೆ. ಸರಕು ಸಾಗಣೆ ವಿಭಾಗವಾರೂ ಸಾಕಷ್ಟು ಸ್ಥಳಾವಕಾಶ ಹಾಗೂ ಉಸಿರಾಡಲು ಗಾಳಿಯಾಡುವ ಅವಕಾಶ ಸೃಷ್ಟಿಸಿದ್ದೇವೆ. ಇಂತಹ ಘಟನೆ ಈವರೆಗೆ ನಡೆದಿಲ್ಲ. ಇದೇ ಮೊದಲ ಬಾರಿಗೆ ಇಂಥದ್ದೊಂದು ಘಟನೆ ನಡೆದುದು ನಮಗೆ ಅತೀವ ಬೇಸರ ತಂದಿದೆ ಎಂದು ಹೇಳಿದ್ದಾರೆ. |