ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಲೋಕಸಭೆ ಮತಸಮರ ಅಂತ್ಯ-ಎಲ್ಲರ ಚಿತ್ತ 16ರತ್ತ...
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಲೋಕಸಭೆ ಮತಸಮರ ಅಂತ್ಯ-ಎಲ್ಲರ ಚಿತ್ತ 16ರತ್ತ...
ಕೆಲವೆಡೆ ಹಿಂಸಾಚಾರ-ಘಟಾನುಘಟಿಗಳ ಭವಿಷ್ಯ ನಿರ್ಧಾರ
ND
ಲೋಕಸಭಾ ಚುನಾವಣೆಯ ಐದನೇ ಹಾಗೂ ಅಂತಿಮ ಸುತ್ತಿನ ಮತಸಮರ ಬುಧವಾರ ಸಂಜೆ ಮುಕ್ತಾಯಗೊಳ್ಳುವ ಮೂಲಕ ಇದೀಗ ಎಲ್ಲರ ಚಿತ್ತ ಮೇ 16ರ ಫಲಿತಾಂಶದತ್ತ ಕುತೂಹಲದಿಂದ ಕಾಯುವಂತೆ ಮಾಡಿದೆ. ಒಟ್ಟಾರೆ ಈ ಬಾರಿ ಕೇಂದ್ರದಲ್ಲಿ ಯಾರಿಗೂ ಸ್ಪಷ್ಟ ಬಹುಮತ ದೊರೆಯದೆ ಅತಂತ್ರ ಸಂಸತ್ ನಿರ್ಮಾಣವಾಗುವ ಸಾಧ್ಯತೆಗಳು ಹೆಚ್ಚಾಗಿವೆ ಎಂದೇ ರಾಜಕೀಯ ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬುಧವಾರ ಎಂಟು ರಾಜ್ಯಗಳಲ್ಲಿನ 86ಕ್ಷೇತ್ರಗಳಲ್ಲಿ ಅಂದಾಜು ಶೇ.60ರಷ್ಟು ಮತದಾನವಾಗಿರುವುದಾಗಿ ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ. ತಮಿಳುನಾಡು-ಶೇ.62, ಪಂಜಾಬ್-ಶೇ.65, ಜಮ್ಮು-ಕಾಶ್ಮೀರ-ಶೇ.48, ಪಶ್ಚಿಮಬಂಗಾಲ-ಶೇ.70, ಉತ್ತರಪ್ರದೇಶ-ಶೇ.55,

ಕಾಂಗ್ರೆಸ್ ಬೆಂಬಲಿತ ಯುಪಿಎ ಮತ್ತೊಮ್ಮೆ ಅಧಿಕಾರದ ಗದ್ದುಗೆ ಏರುವ ಕನಸು ಕಾಣುತ್ತಿದ್ದರೆ, ಮತ್ತೊಂದೆಡೆ ಭಾರತೀಯ ಜನತಾ ಪಕ್ಷ ವಿರೋಧ ಪಕ್ಷದ ಸ್ಥಾನದಿಂದ ಅಧಿಕಾರ ಚುಕ್ಕಾಣಿ ಹಿಡಿಯುವ ವಿಶ್ವಾಸ ಹೊಂದಿದೆ.

545 ಸದಸ್ಯ ಬಲದ ಲೋಕಸಭೆಯಲ್ಲಿ ಸರ್ಕಾರ ರಚಿಸಲು ಒಂದು ಪಕ್ಷ ಅಥವಾ ಮೈತ್ರಿ ಕೂಟಕ್ಕೆ 272 ಮ್ಯಾಜಿಕ್ ಸಂಖ್ಯೆಯ ಸ್ಥಾನಗಳ ಅಗತ್ಯವಿದೆ. ಆಂಗ್ಲೋ ಇಂಡಿಯನ್ ಸಮುದಾಯದಿಂದ ಇಬ್ಬರು ಸದಸ್ಯರನ್ನು ನಾಮಕರಣ ಮಾಡುವುದರಿಂದ ಒಟ್ಟು 543ಕ್ಷೇತ್ರಗಳಿಗೆ ಮಾತ್ರ ಚುನಾವಣೆ ನಡೆದಿದ್ದು, ಮೇ 16ರಂದು ನಡೆಯಲಿರುವ ಮತಎಣಿಕೆ ಈ ಎಲ್ಲಾ ಕುತೂಹಲಕ್ಕೆ ಅಂತಿಮ ತೆರೆ ಎಳೆಯಲಿದೆ.

ಬುಧವಾರ ತಮಿಳುನಾಡಿನ 39 ಕ್ಷೇತ್ರ, ಹಿಮಾಚಲ ಪ್ರದೇಶದಲ್ಲಿ 04, ಜಮ್ಮು-ಕಾಶ್ಮೀರ-02, ಪಂಜಾಬ್-09, ಉತ್ತರ ಪ್ರದೇಶ-14, ಪಶ್ಚಿಮಬಂಗಾಲ-11, ಉತ್ತರಖಂಡ್-05, ಚಂಡೀಗಢ್-01, ಪಾಂಡಿಚೇರಿ-01 ಕ್ಷೇತ್ರಗಳಿಗೆ ಮತದಾನ ನಡೆಯಿತು.

ಅಂತಿಮ ಹಂತದ 86 ಸ್ಥಾನಗಳಿಗೆ 1432 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದು, ಪಿ.ಚಿದಂಬರಂ, ಮಮತಾ ಬ್ಯಾನರ್ಜಿ, ದಯಾನಿಧಿ ಮಾರನ್, ವರುಣ್ ಗಾಂಧಿಕ್ರಿಕೆಟಿಗ ಮಹಮದ್ ಅಜರುದ್ದೀನ್, ಬಿಜೆಪಿಯ ಮನೇಕಾ ಗಾಂಧಿ, ಡಿಎಂಕೆ ಮುಖ್ಯಸ್ಥ ಎಂ.ಕರುಣಾನಿಧಿಯವರ ಪುತ್ರ ಅಳಗಿರಿ, ಮುಖ್ತಾರ್ ಅಬ್ಬಾಸ್ ನಖ್ವಿ, ಡಿಎಂಕೆಯ ಟಿ.ಆರ್.ಬಾಲು, ಎ.ರಾಜಾ, ಎಂಡಿಎಂಕೆಯ ವೈಕೋ, ಎಸ್ಪಿಯ ಜಯಪ್ರದಾ ಸೇರಿದಂತೆ ಹಲವು ಘಟಾನುಘಟಿಗಳ ಭವಿಷ್ಯ ಮತಯಂತ್ರ ಸೇರಿದೆ.

ನಟ ಕಮಲ್ ಹಾನಸ್ ಹೆಸರು ನಾಪತ್ತೆ: ದಕ್ಷಿಣ ಭಾರತದ ಹೆಸರಾಂತ ನಟ ಕಮಲ್ ಹಾಸನ್ ಅವರು ಬುಧವಾರ ಬೆಳಿಗ್ಗೆ ಮತಚಲಾಯಿಸಲು ಮತಗಟ್ಟೆಗೆ ಆಗಮಿಸಿದರಾದರೂ, ಮತಪಟ್ಟಿಯಲ್ಲಿ ಅವರ ಹೆಸರೇ ಇಲ್ಲದಿದ್ದರಿಂದ ಮತಚಲಾಯಿಸಿದೆ ವಾಪಸಾದರು. ಆದರೆ ಈ ಬಗ್ಗೆ ಅವರು ಯಾರನ್ನೂ ದೂಷಿಸದೇ, ಪ್ರಥಮ ಬಾರಿಗೆ ಮತಚಲಾವಣೆಯಿಂದ ವಂಚಿತನಾಗಿದ್ದೇನೆ ಎಂದರು.

ತಮಿಳುನಾಡಿನಲ್ಲಿ ಹಿಂಸೆ-ಒಬ್ಬ ಬಲಿ: ಇಂದು ಎಂಟು ರಾಜ್ಯಗಳಲ್ಲಿ ನಡೆದ ಐದನೇ ಹಾಗೂ ಅಂತಿಮ ಮತಸಮರದಲ್ಲಿ ತಮಿಳುನಾಡಿನಲ್ಲಿ ಚುರುಕಿನ ಮತದಾನ ನಡೆದಿದಿರುವುದು ವಿಶೇಷವಾಗಿತ್ತು. ಆದರೆ ಇಲ್ಲಿನ ದಿಂಡಿಗಲ್ ಸಮೀಪ ನಡೆದ ಘರ್ಷಣೆಯಲ್ಲಿ ಓರ್ವ ವ್ಯಕ್ತಿ ಬಲಿಯಾಗಿದ್ದಾನೆ. ಅದೇ ರೀತಿ ರಾಯ್‌ಪೆಟ್ಟಾ ಸಮೀಪ ಡಿಎಂಕೆ ಹಾಗೂ ಎಂಎಂಕೆ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದ ಪರಿಣಾಮ ಎಂಎಂಕೆಯ ಆರು ಮಂದಿಗೆ ಚೂರಿ ಇರಿತಕ್ಕೊಳಗಾದರು. ಬಳಿಕ ಪೊಲೀಸರು ಸ್ಥಳಕ್ಕಾಮಿಸುವ ಮೂಲಕ ಪರಿಸ್ಥಿತಿಯನ್ನು ಹತೋಟಿಗೆ ತರುವಲ್ಲಿ ಯಶಸ್ವಿಯಾದರು. ಚೆನ್ನೈ ಸೆಂಟ್ರಲ್, ಕಡಲೂರು ಕ್ಷೇತ್ರಗಳಲ್ಲೂ ಹಿಂಸಾಚಾರ ನಡೆದಿದ್ದು, ಹಲವಾರು ಮಂದಿ ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ.

ಅದೇ ರೀತಿ ಪಂಜಾಬ್‌ನ ಮೋಗಾ ನಗರದಲ್ಲಿ ಶಿರೋಮಣಿ ಅಕಾಲಿದಳ ಖಾಸಗಿ ಟಿವಿ ಚಾನೆಲ್ ಪತ್ರಕರ್ತರ ಮೇಲೂ ಹಲ್ಲೆ ನಡೆಸಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಕೋಲ್ಕತಾದ ಬಲಿಗುರಿ ಪ್ರದೇಶದಲ್ಲಿ ತೃಣಮೂಲ ಕಾಂಗ್ರೆಸ್ ಹಾಗೂ ಸಿಪಿಐಎಂ ಕಾರ್ಯಕರ್ತರ ನಡುವೆ ನಡೆದ ಘರ್ಷಣೆಯಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸ್ವಿಸ್‌ಗೆ ನಕಲಿ ದಾಖಲೆ ನೀಡಿದ ಯುಪಿಎ: ಬಿಜೆಪಿ ಆರೋಪ
'ಎಡ' ಕೈಗೆ ಅಧಿಕಾರ ನೀಡದಂತೆ ಅಮೆರಿಕ ಒತ್ತಡ?
ಬನ್ನಿ ಬನ್ನಿ ಸೇರಿಕೊಳ್ಳಿ: ಇದೀಗ ಯುಪಿಎ ಆಹ್ವಾನ
ಮತಯಂತ್ರ ಹಾಳು, ಡಿಎಂಕೆ ಅಕ್ರಮ: ಜಯಾ
ಅಜಂ ಖಾನ್ ವಿರುದ್ಧ ಕ್ರಮ ಕೈಗೊಳ್ಳಿ: ಅಮರ್ ಸಿಂಗ್ ಮನವಿ
ವಿಮಾನದಲ್ಲಿ ಎರಡು ನಾಯಿಗಳ ಸಾವು