ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಮೇ 18ರಂದು ತೃತೀಯ ರಂಗ ಮುಖಂಡರ ಮಾತುಕತೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮೇ 18ರಂದು ತೃತೀಯ ರಂಗ ಮುಖಂಡರ ಮಾತುಕತೆ
PTI
ತೃತೀಯ ರಂಗದ ಒಗ್ಗಟ್ಟಿನ ಬಗ್ಗೆ ಸಂದೇಹ ಬಲಗೊಳ್ಳುತ್ತಿರುವಾಗ, ಎಡಪಕ್ಷಗಳಾದ ಆಲ್ ಇಂಡಿಯಾ ಅಣ್ಣಾ ದ್ರಾವಿಡ ಮುನ್ನೇತ್ರ ಕಾಝಿರಂಗಂ(ಎಐಎಡಿಎಂಕೆ), ತೆಲುಗು ದೇಶಂ (ಟಿಡಿಪಿ), ಬಿಜು ಜನತಾ ದಳ (ಬಿಜೆಡಿ) ಹಾಗೂ ಜನತಾದಳ ಜಾತ್ಯತೀತ(ಜೆಡಿಎಸ್)ಗಳು ಚುನಾವಣಾ ಫಲಿತಾಂಶದ ನಂತರ ಮೇ 18ರಂದು ಒಟ್ಟಾಗಿ ಸೇರಿ ಬಿಜೆಪಿ ಹಾಗೂ ಕಾಂಗ್ರೆಸೇತರ ಸರ್ಕಾರದ ರಚನೆಯ ಬಗ್ಗೆ ಮಾತುಕತೆ ನಡೆಸಲಿವೆ.

ಎಐಡಿಎಂಕೆ, ಟಿಡಿಪಿ, ಬಿಜೆಡಿ ಹಾಗೂ ಜೆಡಿಎಸ್ ಮುಖಂಡರು ಹಾಗೂ ಎಡಪಕ್ಷಗಳ ಮುಖಂಡರು ಮೇ 16ರ ಚುನಾವಣಾ ಫಲಿತಾಂಶದ ನಂತರ ಜತೆ ಸೇರಿ ಭವಿಷ್ಯದ ನಿರ್ಧಾರಗಳನ್ನು ತೆಗೆದುಕೊಳ್ಳಲಿವೆ. ಬಿಎಸ್‌ಪಿ (ಬಹುಜನ ಸಮಾಜ ಪಕ್ಷ)ವೂ ಈ ಮಾತುಕತಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದ್ದು, ಪರ್ಯಾಯ ಜಾತ್ಯತೀಯ ಸರ್ಕಾರವೊಂದರ ರಚನೆಯತ್ತ ದೃಷ್ಟಿಹರಿಸಲಿದೆ ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್ ಹೇಳಿದ್ದಾರೆ.

ಆದರೆ ಈ ಕೂಟದಲ್ಲಿ ತೆಲಂಗಾಣ ರಾಷ್ಟ್ರೀಯ ಸಮಿತಿ (ಟಿಆರ್‌ಎಸ್) ಈ ಮಾತುಕತೆಯನಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ತಿಳಿಸಿದ ಕಾರಟ್, ಈಗಾಗಲೇ ಟಿಆರ್‌ಎಸ್‌ನ ಪಕ್ಷದ ಅಧ್ಯಕ್ಷ ಕೆ.ಚಂದ್ರಶೇಖರ್ ರಾವ್ ಈಗಾಗಲೇ ಇನ್ನೊಂದು ಸೂರನ್ನು ಕಂಡುಕೊಂಡಿದ್ದಾರೆ. ಹಾಗಾಗಿ ಅವರಿಗೆ ಇದರ ಅಗತ್ಯವಿಲ್ಲ ಎಂದರು.
ಜೆಡಿಎಸ್ ಮುಖಂಡ ಎಚ್.ಡಿ.ಕುಮಾರಸ್ವಾಮಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರೂ, ಪಕ್ಷದ ರಾಷ್ಟ್ರಾಧ್ಯಕ್ಷ ಎಚ್.ಡಿ.ದೇವೇಗೌಡ ಅವರು ತೃತೀಯ ರಂಗದಿಂದ ಸಂಬಂಧ ಕಡಿದುಕೊಂಡಿಲ್ಲ. ತೃತೀಯ ರಂಗದೊಂದಿೇ ಮುಂದುವರಿಯುತ್ತೇವೆ ಎಂದು ಹೇಳಿದ್ದಾರೆ ಎಂದು ಕಾರಟ್ ತಿಳಿಸಿದರು.

ಮೇ 16ರಂದು ಚುನಾವಣಾ ಫಲಿತಾಂಶ ಹೊರಬೀಳುತ್ತಿದ್ದಂತೆ ಮೇ 17ರಂದೇ ತೃತೀಯ ರಂಗದಲ್ಲಿರುವ ಎಲ್ಲ ಪಕ್ಷಗಳೂ ಒಂದೆಡೆ ಭೇಟಿಯಾಗಿ ಮಾತುಕತೆ ನಡೆಸಲಿವೆ. ಮಾತುಕತೆಯ ನಂತರ ಮೇ 18ರಂದು ಸಿಪಿಎಂ ಕೇಂದ್ರೀಯ ಸಮಿತಿಯೊಂದಿಗೆ ಮಾತುಕತೆ ನಡೆಸಲಿದೆ ಎಂದರು.

ಆಲ್ ಇಂಡಿಯಾ ಫಾರ್ವರ್ಡ್ ಬ್ಲಾಕ್ ಹಾಗೂ ರೆವೆಲ್ಯೂಶನರಿ ಸೋಶಿಯಲಿಸ್ಟ್ ಪಾರ್ಟಿಗಳೂ ಮೇ 18ರಂದು ಮಾತುಕತೆ ನಡೆಸಲಿವೆ. ನಂತರ ಎಡಪಕ್ಷದ ಮುಖಂಡರಾದ ಪ್ರಕಾಶ್ ಕಾರಟ್, ಸಿಪಿಐ ರಾಷ್ಟ್ರೀಯ ಕಾರ್ಯದರ್ಶಿ ಎ.ಬಿ.ಬರ್ಧನ್, ಎಐಎಫ್‌ಬಿಯ ದೇಬಬ್ರತ ಬಿಸ್ವಾಸ್ ಸಭೆ ಸೇರಲಿದ್ದು ಮುಂದಿನ ರೂಪುರೇಷೆ ಬಗ್ಗೆ ಚರ್ಚೆ ನಡೆಸಲಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕರ್ನಾಟಕ: ಬಿಜೆಪಿ 17, ಕಾಂಗ್ರೆಸ್ 9, ಜೆಡಿಎಸ್ 2
ಟಿವಿ ಚುನಾವಣೋತ್ತರ ಸಮೀಕ್ಷೆಗಳು ಹೇಳುವುದೇನು?
ಎನ್‌ಡಿಎಗೆ ಬೆಂಬಲ: ನಿತೀಶ್‌
ಬಿಜೆಪಿ ಅತಿ ದೊಡ್ಡ ಪಕ್ಷ: ರಾಜನಾಥ್‌ ಸಿಂಗ್
ಎಡಪಕ್ಷದ ಪಾತ್ರ ಮಹತ್ವದ್ದು: ಸೋಮನಾಥ ಚಟರ್ಜಿ
ಲೋಕಸಭೆ ಮತಸಮರ ಅಂತ್ಯ-ಎಲ್ಲರ ಚಿತ್ತ 16ರತ್ತ...