ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಬಿಜೆಪಿ-ಎಸ್ಪಿ ಪಿಸುಮಾತು ಸೃಷ್ಟಿಸಿದ ರಾಜಕೀಯ ತಲ್ಲಣ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಿಜೆಪಿ-ಎಸ್ಪಿ ಪಿಸುಮಾತು ಸೃಷ್ಟಿಸಿದ ರಾಜಕೀಯ ತಲ್ಲಣ
'ರಾಜಕೀಯದಲ್ಲಿ ಯಾರೂ ಶತ್ರುಗಳಿಲ್ಲ' ಎಂಬ ಪದ ಸಮೂಹಕ್ಕೆ ಮತ್ತಷ್ಟು ಪುಷ್ಟಿ ದೊರೆತಿದ್ದು, ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್ ಹಾಗೂ ಸಮಾಜವಾದಿ ಪಕ್ಷದ ಮುಖಂಡ ಅಮರ್ ಸಿಂಗ್ ನಡುವೆ ಗುರುವಾರ ರಾತ್ರಿ ನಡೆದ ಭೇಟಿ ಹಾಗೂ ಪಿಸು ಮಾತುಗಳು ರಾಜಕೀಯದಲ್ಲಿ ಏನೆಲ್ಲಾ ನಡೆಯಬಹುದೆಂಬುದಕ್ಕೆ ಮುನ್ನುಡಿ ಬರೆದಿದೆ.

ಗುರುವಾರ ರಾತ್ರಿ ಬದ್ಧ ಪೈರಿ ಪಕ್ಷಗಳ ಉಭಯ ನಾಯಕರು ಔತಣಕೂಟವೊಂದರಲ್ಲಿ ಪಿಸು ಮಾತಿನಲ್ಲಿ ತೊಡಗಿರುವುದು ಎನ್‌ಡಿಎ ಮತ್ತು ಯುಪಿಎ ಪಾಳಯಗಳಲ್ಲಿ ತಲ್ಲಣ ಸೃಷ್ಟಿಸಿವೆ. ರಾಜನಾಥ್ ಸಿಂಗ್ ಆತಿಥ್ಯದ ವಿವಾಹ ಔತಣಕೂಟದಲ್ಲಿ ಈ ವಿದ್ಯಮಾನ ನಡೆದಿದೆ.

ಮೇ 16ರಂದು ಫಲಿತಾಂಶ ಪ್ರಕಟವಾಗುವವರೆಗೆ ಕಾಯುವುದಕ್ಕೆ ಉಭಯ ನಾಯಕರೂ ಸಮ್ಮತಿಸಿದ್ದಾರೆ ಎಂದು ರಾಜನಾಥ್ ಆಪ್ತ ಮೂಲಗಳು ತಿಳಿಸಿವೆ.

ಉತ್ತರ ಪ್ರದೇಶದ ಮತ್ತೊಂದು ಬಲಾಢ್ಯ ಪಕ್ಷ, ಮಾಯಾವತಿಯವರ ಬಿಎಸ್ಪಿಯನ್ನು ದೂರವಿರಿಸಬೇಕಿದ್ದರೆ, ಎಸ್ಪಿ ಮತ್ತು ಬಿಜೆಪಿಗಳು ಒಟ್ಟಾಗಿ ಕೆಲಸ ಮಾಡಬೇಕಾದೀತು ಎಂದು ಬಿಜೆಪಿ ಮುಖಂಡರೊಬ್ಬರು ತಿಳಿಸಿದ್ದಾರೆ.

ಉತ್ತರ ಪ್ರದೇಶದಲ್ಲಿ ಬಿಎಸ್ಪಿ ಮತ್ತು ಎಸ್ಪಿ ನಡುವಣ ರಾಜಕೀಯ ದ್ವೇಷ ಎಲ್ಲರಿಗೂ ತಿಳಿದದ್ದೇ. ಹೀಗಾಗಿ ಒಂದರ ವಿರುದ್ಧ ಮೇಲುಗೈ ಸಾಧಿಸಲು ಮತ್ತೊಂದು ಪಕ್ಷವು ಕೇಂದ್ರದಲ್ಲಿ ಯಾವುದೇ ಕೂಟದೊಂದಿಗೆ ಕೈಜೋಡಿಸಬಹುದಾಗಿದೆ.

ಎಲ್‌ಜೆಪಿ, ಆರ್‌ಜೆಡಿ ಒಳಗೊಂಡಿರುವ ಚತುರ್ಥರಂಗದ ಸದಸ್ಯ ಪಕ್ಷವಾಗಿರುವ ಎಸ್ಪಿಯೊಂದಿಗೆ ಕೆಲಸ ಮಾಡುವುದೂ ಸೇರಿದಂತೆ ಎಲ್ಲ ಆಯ್ಕೆಗಳನ್ನು ಬಿಜೆಪಿ ಮುಕ್ತವಾಗಿರಿಸಿದೆ ಎಂದು ಇನ್ನೊಬ್ಬ ಬಿಜೆಪಿ ನೇತಾರ ತಿಳಿಸಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸೋನಿಯಾ-ಕೃಷ್ಣ ಮಾತುಕತೆ
ನಿರೀಕ್ಷೆಗಿಂತ ಮೊದಲೇ ಮುಂಗಾರು ಮಳೆ
ಛೋಟಾ ಶಕೀಲ್ ಸಹಚರ ಗುರ್‌ಪ್ರೀತ್ ಬಂಧನ
ಕುದುರೆ ವ್ಯಾಪಾರ ತಪ್ಪಿಸಲು ಟಿಆರ್ಎಸ್‌ಗೆ ಬೇಲಿ!
ಎನ್‌ಡಿಎ ಅಧಿಕಾರಕ್ಕೇರಲು ಬಿಡೆವು: ಎಡ ರಂಗ
ರಾಜಧಾನಿಯಲ್ಲಿ ಬಿರುಸುಗೊಂಡ ರಾಜಕೀಯ ಲೆಕ್ಕಾಚಾರ