ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಮತದಾರನ ತೀರ್ಪು: ರಾಜಕೀಯ ಪಕ್ಷಗಳಲ್ಲಿ ತಳಮಳ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮತದಾರನ ತೀರ್ಪು: ರಾಜಕೀಯ ಪಕ್ಷಗಳಲ್ಲಿ ತಳಮಳ
ಮತ ಮಹಾಸಮರದ ಅಂತಿಮ ತೀರ್ಪು ಹೊರಬೀಳಲಾರಂಭಿಸಿದ್ದು, ಶನಿವಾರ ಬೆಳಿಗ್ಗೆ 8 ಗಂಟೆಗೆ ದೇಶದ ಎಲ್ಲ 1080 ಮತ ಎಣಿಕೆ ಕೇಂದ್ರಗಳಲ್ಲಿ ಎಲೆಕ್ಟ್ರಾನಿಕ್ ಯಂತ್ರಗಳನ್ನು ತೆರೆದು ಮತ ಎಣಿಕೆ ಆರಂಭವಾಗಿದ್ದು, ರಾಜಕೀಯ ಪಕ್ಷಗಳಲ್ಲಿ ತಳಮಳವೂ ಆರಂಭವಾಗಿದೆ.

ಒಟ್ಟು 543 ಲೋಕಸಭಾ ಸ್ಥಾನಗಳಿಗೆ ಸ್ಪರ್ಧಿಸಿರುವ ಎಲ್ಲ 8,070 ಮಂದಿ ಅಭ್ಯರ್ಥಿಗಳ ಹಣೆಬರಹ ಶನಿವಾರ ಸಂಜೆಯೊಳಗೆ ಲಭ್ಯವಾಗಲಿದೆ. ಇದೇ ವೇಳೆ ಆಂಧ್ರಪ್ರದೇಶ, ಒರಿಸ್ಸಾ ಮತ್ತು ಸಿಕ್ಕಿಂ ರಾಜ್ಯಗಳ ವಿಧಾನಸಭೆಗೆ ನಡೆದ ಚುನಾವಣೆಯ ಫಲಿತಾಂಶವೂ ಹೊರಬೀಳಲಿದೆ.

545 ಸದಸ್ಯರ (ಇಬ್ಬರು ನಾಮನಿರ್ದೇಶಿತರು ಸೇರಿ) ಲೋಕಸಭೆಯಲ್ಲಿ ಸರಕಾರ ರಚಿಸಬೇಕಿದ್ದರೆ 272 ಸಂಖ್ಯಾಬಲ ಅತ್ಯಗತ್ಯ. ಏಪ್ರಿಲ್ 16ರಿಂದ ಮೇ 13ರವರೆಗೆ ಐದು ಹಂತಗಳಲ್ಲಿ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ, ಒಟ್ಟು 71.377 ಕೋಟಿ ಮತದಾರರಲ್ಲಿ ಅರ್ಧಕ್ಕಿಂತ ಒಂದಷ್ಟು ಹೆಚ್ಚು ಮತದಾರರು ತಮ್ಮ ಹಕ್ಕುಗಳನ್ನು ಚಲಾಯಿಸಿ ಹೊಸ ಸರಕಾರ ರಚನೆಗೆ ದಾರಿ ಮಾಡಿಕೊಟ್ಟಿದ್ದಾರೆ.

ಒರಿಸ್ಸಾ, ಬಿಹಾರ, ತಮಿಳುನಾಡು ಮತ್ತು ಕರ್ನಾಟಕದ ಚುನಾವಣಾ ಫಲಿತಾಂಶಗಳು ಕೇಂದ್ರದಲ್ಲಿ ಸ್ಥಾಪನೆಗೊಳ್ಳಲಿರುವ ಹೊಸ ಸರಕಾರದ ಮೇಲೆ ಭಾರಿ ಪ್ರಭಾವ ಬೀರುವ ನಿರೀಕ್ಷೆ ಇದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕಾಂಗ್ರೇಸೇತರ ಪಕ್ಷಗಳ ಪಾಲಿಗೆ ದುಸ್ವಪ್ನವಾದ ಪ್ರಜಾರಾಜ್ಯಂ
ಮತದಾರರ ಮಹಾ ನಿರ್ಣಯದ ಕ್ಷಣಗಣನೆ ಆರಂಭ
20 ವರ್ಷದ ನಂತರ ಒಂದಾದ ಪ್ರೇಮಿಗಳ ಮದುವೆ
ಭಾನುವಾರ ಚತುರ್ಥರಂಗದ ರಾಜಕೀಯ ಲೆಕ್ಕಾಚಾರ ಸಭೆ
ಬೆಟ್ಟಿಂಗ್...ಬೆಟ್ಟಿಂಗ್..ಡಾ.ಸಿಂಗ್ ಫೇವರಿಟ್!
ಬಿಜೆಪಿ, ತೃ.ರಂಗ ಒಪ್ಪಿದ್ರೆ ನಿತೀಶ್ ಪ್ರಧಾನಿಯಾಗ್ತಾರಾ?