ರಾಷ್ಟ್ರಾದ್ಯಂತ ಫಲಿತಾಂಶಗಳು ಹೊರಬೀಳುತ್ತಿರುವಂತೆ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವನ್ನು ಹಿಂದಿಕ್ಕಿರುವ ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟ ಯುಪಿಎ ಮುನ್ನಡೆ ಸಾಧಿಸಿದೆ. 240 ಸ್ಥಾನಗಳ ಮುನ್ನಡೆ ಸಾಧಿಸಿರುವ ಯುಪಿಎ ಮತ್ತೊಮ್ಮೆ ಅಧಿಕಾರ ರಚಿಸುವ ಸಿದ್ಧತೆಯಲ್ಲಿದೆ.*ಉದಯರಂಜೆ ಭೋಂಸ್ಲೆ(ಎನ್‌ಸಿಪಿ) ಮಹಾರಾಷ್ಟ್ರದ ಸತಾರ ಕ್ಷೇತ್ರದಲ್ಲಿ ಗೆಲುವು*ಇದೀಗ ಕಾಂಗ್ರೆಸ್‌ನ ಶೇಖರ್ ಸುಮನ್ ಅವರನ್ನು ಹಿಂದಿಕ್ಕಿ ಮುನ್ನಡೆಯುತ್ತಿರುವ ಶತ್ರುಘ್ನ ಸಿನ್ಹಾ *ಸಿಪಿಐ-ಎಂನ ಇ ಅಹಮದ್ ಅವರು ಕೇರಳದ ಮಲಪ್ಪುರಂ ಕ್ಷೇತ್ರದಲ್ಲಿ ಆರನೆಯ ನೇರ ಗೆಲುವು*ದಮನ್‌ನಲ್ಲಿ ಬಿಜೆಪಿಯ ಲಾಲು ಭಾಯ್ ಪಟೇಲ್ ಗೆಲುವು *ಲಕ್ಷದ್ವೀಪದಲ್ಲಿ ಕಾಂಗ್ರೆಸ್‌ನ ಪಿ.ಎಂ. ಹಮಾದುಲ್ಲಾ ಅವರು ಎನ್‌ಸಿಪಿ . ಪೂಕುಂಜಿ ಕೋಯಾ ವಿರುದ್ಧ ಗೆಲುವು ಸಾಧಿಸಿದ್ದಾರೆ.*ಕೇರಳದ ಕಣ್ಣೂರಿನಲ್ಲಿ ಕಾಂಗ್ರೆಸ್‌ನ ಕೆ. ಸುಧಾಕರನ್ ಅವರು ಗೆಲುವು ಸಾಧಿಸಿದ್ದಾರೆ.*ಕೇಂದ್ರ ಸಚಿವೆ ರೇಣುಕಾ ಚೌಧರಿ ಅವರು ಕಮ್ಮಮ್ ನಲ್ಲಿ ಹಿನ್ನಡೆ ಸಾಧಿಸಿದ್ದಾರೆ.*ಬಿಜೆಪಿಯ ಹಿರಿಯ ನಾಯಕ ಎಲ್.ಕೆ. ಆಡ್ವಾಣಿ ಅವರು ಕಾಂಗ್ರೆಸ್‌ನ ಸುರೇಶ್ ಪಾಟೀಲ್ ಅವರ ವಿರುದ್ಧ ಮುನ್ನಡೆ.*ತಿರುವನಂತ ಪುರಂನಲ್ಲಿ ಶಶಿ ಥರೂರ್ ಗೆಲುವು*ಲಾಲೂ ಪ್ರಸಾದ್ ಯಾವದ್ ಅವರು ಪಾಟಲಿಪುತ್ರ ಮತ್ತು ಸರನ್ ಕ್ಷೇತ್ರಗಳಲ್ಲಿ ಮುನ್ನಡೆ*ಶೇಖರ್ ಸುಮನ್ ಪಟ್ನ ಸಾಹಿ ಕ್ಷೇತ್ರದಲ್ಲಿ ಶತ್ರುಘ್ನ ಸಿನ್ಹಾ ವಿರುದ್ಧ ಮುನ್ನಡೆ*ದಿಗ್ವಿಜಯ್ ಸಿಂಗ್(ಸ್ವತಂತ್ರ ಅಭ್ಯರ್ಥಿ) ಬಂಕಾದಲ್ಲಿ ಮುನ್ನಡೆ*ಸೋನಿಯಾಗಾಂಧಿ ರಾಯ್ ಬರೇಲಿಯಲ್ಲಿ ಮುನ್ನಡೆ*ಸಂದೀಪ್ ದೀಕ್ಷಿತ್ ಪಶ್ಚಿಮ ದೆಹಲಿಯಲ್ಲಿ ಮುನ್ನಡೆ*ತೃಣಮೂಲ ಕಾಂಗ್ರೆಸ್‌ನ ಮಮತಾ ಬ್ಯಾನರ್ಜಿ ಮುನ್ನಡೆ ಕಾಂಗ್ರೆಸ್ ನೇತೃತ್ವದ ಯುಪಿಎಯು 240 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಕರ್ನಾಟಕ, ಬಿಹಾರ ಮತ್ತು ಹಿಮಾಚಲ ಪ್ರದೇಶ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಎನ್‌ಡಿಎ ಮುನ್ನಡೆ ಸಾಧಿಸಿದ್ದು ಒಟ್ಟು 156 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. ಕೇರಳ ಮತ್ತು ರಾಜಸ್ಥಾನ ಸೇರಿದಂತೆ ಇತರ ರಾಜ್ಯಗಳಲ್ಲಿ ಯುಪಿಎ ಮುನ್ನಡೆ ಸಾಧಿಸಿದೆ. ತೃತೀಯ ರಂಗವು 28 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಇತರರು 12 ಸ್ಥಾನಗಳಲ್ಲಿ ಮುನ್ನಡೆ ಕಂಡಿದ್ದಾರೆ. ಕಾಂಗ್ರೆಸ್‌ನ ರಾಹುಲ್ ಗಾಂಧಿ, ಸೋನಿಯಾಗಾಂಧಿ, ಸಚಿನ್ ಪೈಲಟ್, ಹಾಗೂ ಪ್ರಥಮ ಬಾರಿ ಭಾರತದ ಚುನಾವಣಾ ಕ್ಷೇತ್ರದಲ್ಲಿ ಸ್ಫರ್ಧಿಸುತ್ತಿರುವ ಶಶಿ ಥರೂರ್ ಮುನ್ನಡೆ ಸಾಧಿಸಿದ್ದಾರೆ.ಕಾಂಗ್ರೆಸ್ ಪ್ರಮುಖರಾದ ಜನಾರ್ದನ ಪೂಜಾರಿ, ಮಾರ್ಗರೆಟ್ ಆಳ್ವ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ರೇಣುಕಾ ಚೌಧರಿ, ಕಮಲ್ ನಾಥ್, ಪಿ. ಚಿದಂಬರಂ ಹಿನ್ನಡೆ ಸಾಧಿಸಿದ್ದಾರೆ.ಆರ್‌ಜೆಡಿಯ ಲಾಲೂ ಪ್ರಸಾದ್ ಯಾದವ್ ಅವರು ಎರಡು ಸ್ಥಾನಗಳಲ್ಲಿ ಸ್ಫರ್ಧಿಸಿದ್ದು ಪಾಟಲಿ ಪುತ್ರದಲ್ಲಿ ಮುನ್ನಡೆ ಸಾಧಿಸಿದ್ದರೆ, ಶರನ್ ಕ್ಷೇತ್ರದಲ್ಲಿ ಹಿನ್ನಡೆ ಸಾಧಿಸಿದ್ದಾರೆ. |