ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಸೋಮವಾರ ಮನಮೋಹನ್ ಸಿಂಗ್ ರಾಜೀನಾಮೆ?
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸೋಮವಾರ ಮನಮೋಹನ್ ಸಿಂಗ್ ರಾಜೀನಾಮೆ?
PTI
ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬೀಳುತ್ತಿದ್ದಂತೆ, ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಸೋಮವಾರ ತಮ್ಮ ಹುದ್ದೆಗೆ ರಾಜೀನಾಮೆ ಕೊಡುವ ನಿರೀಕ್ಷೆಯಿದೆ. ಆದರೂ, ಹೊಸ ಸರ್ಕಾರ ರಚನೆಯಾಗುವವರೆಗೆ ಪ್ರಧಾನಮಂತ್ರಿಯಾಗಿ ಮುಂದುವರಿಯಬೇಕು ಎಂದು ರಾಷ್ಟ್ಪತಿ ಪ್ರತಿಭಾ ಪಾಟೀಲ್ ಹೇಳಿದ್ದಾರೆ ಎಂಬ ಮಾತೂ ಕೇಳಿ ಬಂದಿದೆ.

ಮೂಲಗಳ ಪ್ರಕಾರ ಪ್ರದಾನಮಂತ್ರಿ ಸೋಮವಾರ ತನ್ನ ಕ್ಯಾಬಿನೆಟ್ ಸಚಿವರುಗಳ ಸಭೆ ಕರೆದಿದ್ದು, ಎಲ್ಲರೂ ಒಟ್ಟಾಗಿ ರಾಜೀನಾಮೆ ಕೊಡುವ ಬಗ್ಗೆ ಒಮ್ಮತದ ನಿರ್ಧಾರ ಕೈಗೊಳ್ಳಲಿದ್ದಾರೆ. ಅದೇ ದಿನ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಕೂಡ ಪ್ರಧಾನ ಮಂತ್ರಿಗಳನ್ನು ಮಾತುಕತೆಗೆ ಕರೆಯಲಿದ್ದು, ಎಲ್ಲಾ ಸಚಿವರು ಅಂದು ರಾಜೀನಾಮೆ ನೀಡಲು ಸೂಚಿಸಲಿದ್ದಾರೆ ಎಂದೂ ಹೇಳಲಾಗಿದೆ.

ಚುನಾವಣಾ ಫಲಿತಾಂಶ ಹೊರಬೀಳುತ್ತಿದ್ದಂತೆ ಈವರೆಗೆ ಆಡಳಿತದಲ್ಲಿದ್ದ ಸರ್ಕಾರ ರಾಜೀನಾಮೆ ಕೊಡುವುದು ಸಂವಿಧಾನದ ನಿಯಮ. ಅದೇ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದರೂ ಒಮ್ಮೆ ರಾಜೀನಾಮೆ ಕೊಟ್ಟೇ ಮತ್ತೆ ಆ ಸರ್ಕಾರ ಪ್ರಮಾಣ ವಚನ ಸ್ವೀಕರಿಸುತ್ತದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಪ್ರಾಥಮಿಕ ಫಲಿತಾಂಶಗಳಂತೆ ಯುಪಿಎ ಮುನ್ನಡೆ
ನಿತೀಶ್-ನಾಯ್ಡು-ಶರದ್-ನವೀನ್ ನಡುವೆ ಏನು ನಡೆಯಿತು?
150ಸೀಟು ಪಡೆದಲ್ಲಿ ಮಾತ್ರ ಬಿಜೆಪಿ ಜತೆ ಮಾತುಕತೆ: ಜಯಲಲಿತಾ
ಮತದಾರನ ತೀರ್ಪು: ರಾಜಕೀಯ ಪಕ್ಷಗಳಲ್ಲಿ ತಳಮಳ
ಕಾಂಗ್ರೇಸೇತರ ಪಕ್ಷಗಳ ಪಾಲಿಗೆ ದುಸ್ವಪ್ನವಾದ ಪ್ರಜಾರಾಜ್ಯಂ
ಮತದಾರರ ಮಹಾ ನಿರ್ಣಯದ ಕ್ಷಣಗಣನೆ ಆರಂಭ