ಇತ್ತೀಚಿನ ವರದಿಗಳ ಪ್ರಕಾರ ವರದಿಗಳ ಪ್ರಕಾರ ಎಡಪಕ್ಷಗಳು ಸೇರಿದಂತೆ ಎಐಎಡಿಎಂಕೆ ಮೈತ್ರಿ ಕೂಟವು 18 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಡಿಎಂಕೆ-ಕಾಂಗ್ರೆಸ್-ವಿಸಿಕೆ ಮೈತ್ರಿ ಕೂಟವು 13 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.
ಐದು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಘಟಾನುಘಟಿಗಳಾದ ಎಂ.ಕೃಷ್ಣಸ್ವಾಮಿ, ಎಕೆಎಸ್ ವಿಜಯನ್, ಟಿಕೆಎಸ್ ಇಳಂಗೋವನ್, ಟಿಆರ್ ಬಾಲು ಮತ್ತು ವಿ. ತಮಿಳರಸಿ ಅವರುಗಳು ಮುನ್ನಡೆ ಸಾಧಿಸಿದ್ದಾರೆ.
ಕೇಂದ್ರ ಸಚಿವ ಪಿ.ಚಿದಂಬರಂ, ಮಣಿಶಂಕರ್ ಅಯ್ಯರ್, ಕೆ.ವಿ. ತಂಕಬಾಲು ಮತ್ತು ಇವಿಕೆಎಸ್ ಇಳಂಗೋವನ್ ಅವರುಗಳು ಹಿನ್ನಡೆ ಸಾಧಿಸಿದ್ದಾರೆ.
ಪುದುಚೇರಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎನ್ ನಾರಾಯಣಸ್ವಾಮಿ ಅವರು ಪಿಎಂಕೆಯ ಎಂ ರಾಮದಾಸ್ ಅವರನ್ನು ಹಿಂದಿಕ್ಕಿದ್ದಾರೆ.
ತಮಿಳ್ನಾಡಿನಲ್ಲಿ 41 ಮಹಿಳೆಯರು ಸೇರಿದಂತೆ ಒಟ್ಟು 823 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಪುದುಚೇರಿಯ ಏಕೈಕ ಸ್ಥಾನಕ್ಕೆ 28 ಮಂದಿ ಸ್ಫರ್ಧಿಸಿದ್ದರು. |