ಕೇರಳದ ಕಣ್ಣೂರಿನಲ್ಲಿ ಕಾಂಗ್ರೆಸ್ ವಿಜಯ: ಕೆ.ಸುಧಾಕರನ್ ಅವರು ಸಿಪಿಎಂನ ಕೆ.ಕೆ.ರಾಗೇಶ್ ಅವರನ್ನು 40 ಸಾವಿರ ಮತಗಳ ಅಂತರದಿಂದ ಸೋಲಿಸಿದ್ದಾರೆ. ದೆಹಲಿಯಲ್ಲಿ ಏಳೂ ಸ್ಥಾನಗಳನ್ನು ಬಗಲಿಗೆ ಹಾಕಿಕೊಳ್ಳುವತ್ತ ಕಾಂಗ್ರೆಸ್ ಪಕ್ಷವು ದಾಪುಗಾಲಿಟ್ಟಿದೆ.
ದೆಹಲಿಯಲ್ಲಿ ಕ್ಲೀನ್ ಸ್ವೀಪ್‌ನತ್ತ ಕಾಂಗ್ರೆಸ್: ಇತ್ತೀಚಿನ ಟ್ರೆಂಡ್ ಪ್ರಕಾರ ದೆಹಲಿಯ 7 ಲೋಕಸಭಾ ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಮುನ್ನಡೆ ಸಾಧಿಸಿ ಗೆಲುವಿನತ್ತ ದಾಪುಗಾಲಿಕ್ಕಿದೆ.
ದೆಹಲಿಯ ಚಾಂದನಿಚೌಕ್‌ನಲ್ಲಿ ಕಾಂಗ್ರೆಸಿನ ಕಪಿಲ್ ಸಿಬಲ್ ಅವರು ಬಿಜೆಪಿಯ ವಿಜೇಂದರ್ ಗುಪ್ತಾ ವಿರುದ್ಧ 45 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಮುನ್ನಡೆ. ನವದೆಹಲಿ ಕ್ಷೇತ್ರದಲ್ಲಿ ಕೇಂದ್ರ ಸಚಿವ ಅಜಯ್ ಮೇಕನ್ ಅವರು ಬಿಜೆಪಿಯ ವಿಜಯ್ ಗೋಯಲ್ ವಿರುದ್ಧ 8 ಸಾವಿರ ಮತಗಳಿಂದ ಮುಂದೆ.
ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಪುತ್ರ, ಕಾಂಗ್ರೆಸ್ ಅಭ್ಯರ್ಥಿ ಸಂದೀಪ್ ಅವರು ಪೂರ್ವ ದೆಹಲಿ ಕ್ಷೇತ್ರದಲ್ಲಿ ಮಾಜಿ ಕ್ರಿಕೆಟಿಗ, ಬಿಜೆಪಿ ಅಭ್ಯರ್ಥಿ ಚೇತನ್ ಚೌಹಾಣ್ ಎದುರು 28 ಸಾವಿರ ಮತಗಳ ಮುನ್ನಡೆ.
ಹಾಲಿ ಶಾಸಕ, ಕಾಂಗ್ರೆಸ್ ಅಭ್ಯರ್ಥಿ ಮಹಾಬಲ ಮಿಶ್ರಾ ಅವರು ದೆಹಲಿ ಪ್ರತಿಪಕ್ಷ ನಾಯಕ ಜಗದೀಶ್ ಮುಖಿ ಎದುರು ಪಶ್ಚಿಮ ದೆಹಲಿ ಕ್ಷೇತ್ರದಲ್ಲಿ 33 ಸಾವಿರ ಮತಗಳ ಮುನ್ನಡೆಯಲ್ಲಿ.
ಈಶಾನ್ಯ ದೆಹಲಿ ಕ್ಷೇತ್ರದಲ್ಲಿ ಜಗದೀಶ್ ಟೈಟ್ಲರ್ ಸ್ಥಾನದಲ್ಲಿ ಕಣಕ್ಕಿಳಿದ ದೆಹಲಿ ಕಾಂಗ್ರೆಸ್ ಅಧ್ಯಕ್ಷ ಜೆ.ಪಿ.ಅಗರ್ವಾಲ್ ಅವರು ಬಿಜೆಪಿಯ ಬಿ.ಎಲ್.ಶರ್ಮಾ ಎದುರು 30 ಸಾವಿರ ಮತಗಳ ಮುನ್ನಡೆಯಲ್ಲಿ. |