ಆರಂಭಿಕ ಮುನ್ನಡೆಯ ವರದಿಗಳಿಂದ ರೋಮಾಂಚನಗೊಂಡಿರುವ ಕಾಂಗ್ರೆಸ್, ಯುಪಿಎಗೆ ಸ್ಪಷ್ಟ ಮುನ್ನಡೆ ಖಚಿತವಾಗುತ್ತಿರುವಂತೆಯೇ ಉತ್ಸಾಹದಿಂದ ಪುಟಿದೆದ್ದಿದ್ದು, ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು ಮುಂದಿನ ಸರಕಾರ ರಚನೆಗೆ ತಮ್ಮನ್ನೇ ಆಹ್ವಾನಿಸುತ್ತಾರೆ ಎಂದು ವಿಶ್ವಾಸದಿಂದ ನುಡಿದಿದೆ.
ಯುಪಿಎ ಏಕೈಕ ಅತಿದೊಡ್ಡ ಮಿತ್ರಕೂಟವಾಗಿ ಹೊರಹೊಮ್ಮಲಿದ್ದು, ಬಹುಮತ ಗಳಿಸಿಕೊಳ್ಳಲು ಯಶಸ್ವಿಯಾಗುತ್ತದೆ. ನಾವು ಸರಕಾರ ರಚಿಸುತ್ತೇವೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಬಿ.ಕೆ.ಹರಿಪ್ರಸಾದ್ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ. |