ಲೋಕಸಭಾ ಚುನಾವಣೆಯ ಮಹಾಸಮರದಲ್ಲಿ ಕಾಂಗ್ರೆಸ್ ಎಲ್ಲೆಡೆ ಜಯಭೇರಿ ಬಾರಿಸಿರುವ ಹಿನ್ನೆಲೆಯಲ್ಲಿ ಎಡರಂಗ ತಮ್ಮ ಸೋಲನ್ನು ಒಪ್ಪಿಕೊಂಡು ವಿಮರ್ಶೆಗೆ ಮುಂದಾಗಿವೆ. ಅದೇ ವೇಳೆ ತಾವು ವಿಪಕ್ಷದಲ್ಲಿ ಕುಳಿತುಕೊಳ್ಳಲು ಸಿದ್ದ ಎಂದು ಸಿಪಿಐ(ಎಂ)ನ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್ ತಿಳಿಸಿದ್ದಾರೆ.15 ನೇ ಲೋಕಸಭಾ ಚುನಾವಣೆಯಲ್ಲಿ ಎಡರಂಗ ಭಾರೀ ಹೊಡೆತ ತಿಂದಿದೆ ಎಂದು ಕಾರಟ್ ಹೇಳಿದ್ದು, ಪಕ್ಷದ ಚಟುವಟಿಕೆಯಲ್ಲಿ ಏನೋ ಚ್ಯುತಿ ಉಂಟಾಗಿದೆ ಅದರ ಬಗ್ಗೆ ಪರಿಶೀಲಿಸಲಾಗುವುದು ಎಂದಿದ್ದಾರೆ.ದೇಶಾದ್ಯಂತ ಕಾಂಗ್ರೆಸ್ ಮೈತ್ರಿಕೂಟ ವಿಜಯದ ಪತಾಕೆ ಹಾರಿಸಿದ್ದು ಆ ಪಕ್ಷದ ಕಾರ್ಯ ಚಟುವಟಿಕೆಯೇ ಗೆಲುವಿಗೆ ಬುನಾದಿಯಾಗಿದೆ ಎಂದು ಕಾರಟ್ ಈ ಸಂದರ್ಭದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಏನತನ್ಮಧ್ಯೆ ಪಕ್ಷದ ಅಭಿಪ್ರಾಯವನ್ನು ಮಂಡಿಸಿದ ಅವರು, ತಾವು ವಿಪಕ್ಷದಲ್ಲಿ ಕುಳಿತುಕೊಳ್ಳಲು ಸಿದ್ಧರಾಗಿದ್ದೇವೆ ಎಂದು ಹೇಳಿಕೆ ನೀಡಿದ್ದಾರೆ. |