ಕಲ್ಯಾಣ್ ಸಿಂಗ್ ಸೇರ್ಪಡೆಯಿಂದ ಸಮಾಜವಾದಿ ಪಕ್ಷದ ವಿರುದ್ಧ ಮುನಿಸಿಕೊಂಡಿರುವ ಪಕ್ಷದ ಹಿರಿಯ ಸ್ಥಾಪಕ ಮುಖಂಡ ಅಜಂಖಾನ್ ಸಮಾಜವಾದಿ ಪಕ್ಷದ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಭಾನುವಾರ ರಾಜೀನಾಮೆ ನೀಡಿದ್ದಾರೆ.
ಬಾಬರಿ ಮಸೀದಿ ಧ್ವಂಸ ಪ್ರಕರಣದ ಆರೋಪ ಎದುರಿಸುತ್ತಿರುವ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ಅವರ ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಗೊಂಡಿರು ವುದನ್ನು ಖಾನ್ ಬಲವಾಗಿ ವಿರೋಧಿಸಿದ್ದರು. ಅಲ್ಲದೇ ರಾಂಪುರ್ ಕ್ಷೇತ್ರದಿಂದ ನಟಿ ಜಯಪ್ರದಾಗೆ ಟಿಕೆಟ್ ನೀಡಿರುವ ಕಾರಣಕ್ಕೆ ಪಕ್ಷದ ವರಿಷ್ಠ ಮುಲಾಯಂ ಸಿಂಗ್ ಯಾದವ್ ಹಾಗೂ ಅಮರ್ ಸಿಂಗ್ ವಿರುದ್ಧ ಬಹಿರಂಗವಾಗಿ ಆಕ್ರೋಶ ವ್ಯಕ್ತಪಡಿಸಿದ್ದರು.
ಈ ಕಾರಣದಿಂದಾಗಿಯೇ ಜಯಪ್ರದಾ ಅವರ ನಗ್ನ ವೀಡಿಯೋ ಚಿತ್ರಣ ಸಿಡಿ ಪ್ರಕರಣ, ಬಹಿರಂಗ ಆರೋಪ-ಪ್ರತ್ಯಾರೋಪಗಳು ನಡೆದಿದ್ದವು. ಅವೆಲ್ಲದರ ನಡುವೆಯೂ 47ರ ಹರೆಯದ ನಟಿ ಜಯಪ್ರದಾ ಸಂಸತ್ ಪ್ರವೇಶಿಸಿದ್ದಾರೆ.
ಇದೀಗ ಸಮಾಜವಾದಿ ಪಕ್ಷದ ನಿಲುವಿನ ವಿರುದ್ಧ ಬಂಡೆದ್ದಿರುವ ಅಜಂಖಾನ್ ಪಕ್ಷದ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಅಲ್ಲದೇಸಂಸದೀಯ ಮಂಡಳಿಗೂ ರಾಜೀನಾಮೆ ನೀಡಿದ್ದಾರೆ. |