ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಆಡ್ವಾಣಿ ಸ್ಥಾನಭರ್ತಿಗಾಗಿ ಸರ್ಕಸ್ ಆರಂಭ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಆಡ್ವಾಣಿ ಸ್ಥಾನಭರ್ತಿಗಾಗಿ ಸರ್ಕಸ್ ಆರಂಭ
ಹದಿನೈದನೇ ಲೋಕಸಭಾ ಫಲಿತಾಂಶಗಳು ಬಿಜೆಪಿ ನಾಯಕ ಆಡ್ವಾಣಿ ಅವರಿಗೆ ತೀವ್ರ ಆಘಾತ ನೀಡಿದ್ದು, ತಾನು ವಿಪಕ್ಷ ನಾಯಕನ ಸ್ಥಾನ ತೊರೆಯುವುದಾಗಿ ಹೇಳಿರುವ ಹಿನ್ನೆಲೆಯಲ್ಲಿ ಅವರ ಸ್ಥಾನಭರ್ತಿಗಾಗಿ ಬಿಜೆಪಿಯೊಳಗೆ ತೀವ್ರ ಪ್ರಯತ್ನಗಳು ನಡೆಯುತ್ತಿವೆ.

ಈ ಮಧ್ಯೆ ಆಡ್ವಾಣಿ ಅವರೇ ಈ ಸ್ಥಾನದಲ್ಲಿ ಮುಂದುವರಿಯುವಂತೆ ಮನ ಒಲಿಸಲು ಅವರ ನಿಕಟವರ್ತಿಗಳು ಪ್ರಯತ್ನಿಸುತ್ತಿದ್ದಾರೆ. ಉನ್ನತ ಹುದ್ದೆ ಏರಲು ಮೈಲುಗಲ್ಲಿಯಾಗಲಿರುವ ಈ ಸ್ಥಾನಕ್ಕಾಗಿ ನಾಯಕರೊಳಗಿನ ಪೈಪೋಟಿಯನ್ನು ತಡೆಯಲು ನಾಯಕರು ಆಡ್ವಾಣಿ ಅವರೇ ಸ್ವಲ್ಪ ಕಾಲವಾದರೂ ಮುಂದುವರಿಯಲಿ ಎಂದು ಬಯಸಿದ್ದಾರೆ.

ತಳಮಟ್ಟದ ವಾಸ್ತವಿಕತೆಗಳಿಂದ ದೂರಸರಿದಿರುವುದಕ್ಕಾಗಿ ನಾಯಕತ್ವದ ಮೇಲೆ ಹರಿಹಾಯ್ದಿರುವ ಮುರಳಿ ಮನೋಹರ್ ಜೋಷಿ, ಆಡ್ವಾಣಿ ಅವರ ಸ್ಥಾನ ತುಂಬಲು ತಾನು ಮುಂದಾಗಿರುವುದಾಗಿ ಹೇಳಿದ್ದಾರೆ. ಆದರೆ ಜೋಷಿಯವರ ನಾಯಕತ್ವವನ್ನು ಒಪ್ಪಲು ತಯಾರಿಲ್ಲದ ನಾಯಕರ ಒಲವು ಸುಶ್ಮಾ ಸ್ವರಾಜ್ ಮೇಲೆ. ಉನ್ನತ ಸ್ಥಾನದಲ್ಲಿರುವ ಏಕೈಕ ಮಹಿಳೆ, ಉತ್ತಮ ವಾಗ್ಮಿಯಾಗಿರುವ ಸುಶ್ಮಾ ಅವರು ಈ ಸ್ಥಾನಕ್ಕೆ ಸೂಕ್ತ ಎಂಬ ಅಭಿಪ್ರಾಯವನ್ನು ಪಕ್ಷದ ಒಂದು ವರ್ಗ ವ್ಯಕ್ತಪಡಿಸುತ್ತಿದೆ.

ಈ ಮಧ್ಯೆ, ಭಾನುವಾರ ಆಡ್ವಾಣಿ ಅವರೊಂದಿಗೆ ಭೋಜನ ಕೂಟದಲ್ಲಿ ಪಾಲ್ಗೊಂಡಿರುವ ಆರ್ಎಸ್ಎಸ್ ನಾಯಕರಾದ ಭಯ್ಯಾಜಿ ಜೋಷಿ ಮತ್ತು ಮದನ್‌ದಾಸ್ ದೇವಿ ಅವರೂ ಸಹ ಪಕ್ಷದ ಏಕತೆಗೆ ಧಕ್ಕೆಯಾಗದಿರಲು ಇದ್ದಕ್ಕಿದ್ದಂತೆ ತೆರೆಮರೆಗೆ ಸರಿಯುವುದು ಬೇಡ ಎಂಬುದಾಗಿ ವಿನಂತಿಸಿಕೊಂಡಿದ್ದಾರೆನ್ನಲಾಗಿದೆ. ಅಂತಿಮ ನಿರ್ಧಾರವು ಸೋಮವಾರ ನಡೆಯಲಿರುವ ಎನ್‌ಡಿಎ ಮಿತ್ರ ಪಕ್ಷಗಳ ಸಭೆಯ ಬಳಿಕವಷ್ಟೆ ಗೊತ್ತಾಗಬೇಕಾಗಿದೆ. ಇದೇ ವೇಳೆ ಡಾರ್ಜಲಿಂಗ್‌ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿರುವ ರಾಜ್ಯಸಭಾ ವಿಪಕ್ಷ ನಾಯಕನಾಗಿರಿರುವ ಜಸ್ವಂತ್ ಸಿಂಗ್ ಅವರ ಸ್ಥಾನವನ್ನು ಯಾರು ತುಂಬಲಿದ್ದಾರೆ ಎಂಬ ವಿಚಾರದ ಕುರಿತೂ ಸಭೆಯಲ್ಲಿ ನಿರ್ಧರಿಸಲಾಗುವುದು.

ಆಡ್ವಾಣಿ ಅವರು ವಿಪಕ್ಷ ನಾಯಕನ ಸ್ಥಾನದಿಂದ ಹಿಂಸರಿಯುವ ಸೂಚನೆ ನೀಡುತ್ತಿರುವಂತೆ ಸ್ಥಾನಾಕಾಂಕ್ಷಿಗಳ ಪಟ್ಟಿ ದೊಡ್ಡದಾಗಿ ಬೆಳೆದಿದೆ. ವೆಂಕಯ್ಯನಾಯ್ಡು, ಜಸ್ವಂತ್ ಸಿಂಗ್, ಸುಶ್ಮಾ ಸ್ವರಾಜ್, ಮುರಳಿ ಮನೋಹರ್ ಜೋಷಿ, ರಾಜ್‌ನಾಥ್ ಸಿಂಗ್, ಯಶ್ವಂತ್ ಸಿನ್ಹಾ ಅವರುಗಳು ವಿಪಕ್ಷ ನಾಯಕನ ಸ್ಥಾನದ ಸ್ಫರ್ಧೆಯಲ್ಲಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಲೋಕಸಭೆ ಹೊಕ್ಕ ಕ್ರಿಮಿನಲ್‌ಗಳ ಸಂಖ್ಯೆ ಏರಿಕೆ
ಲಾಲೂಗೆ ಮತ್ತೊಮ್ಮೆ 'ರೈಲು' ಇಲ್ಲ?
ವಿರೋಧ ಪಕ್ಷದ ನಾಯಕನಾಗುವುದಿಲ್ಲ: ಅಡ್ವಾಣಿ
ಸೊರಾಬ್ಜಿ ಜತೆ ರಾಷ್ಟ್ರಪತಿ ಮಾತುಕತೆ
ಸರ್ಕಾರ ರಚನೆ ಕಸರತ್ತು:ಸಚಿವಗಿರಿಗಾಗಿ ಬೇಡಿಕೆಗಳ ಪಟ್ಟಿ!
ಎಸ್ಪಿ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಅಜಂಖಾನ್ ರಾಜೀನಾಮೆ