ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಕಾರಟ್ ವಿರುದ್ಧ ಹರಿಹಾಯ್ದ ಸೋಮನಾಥ್ ಚಟರ್ಜಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಾರಟ್ ವಿರುದ್ಧ ಹರಿಹಾಯ್ದ ಸೋಮನಾಥ್ ಚಟರ್ಜಿ
PTI
ಸಿಪಿಐ-ಎಂ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್ ವಿರುದ್ಧ ಹರಿಹಾಯ್ದಿರುವ ಪಕ್ಷದ ಉಚ್ಚಾಟಿತ ನಾಯಕ, ಲೋಕಸಭಾ ಸ್ಪೀಕರ್ ಸೋಮನಾಥ್ ಚಟರ್ಜಿ ಅವರು 'ಜವಾಬ್ದಾರಿಯ ಮೊನೆ'ಯು ಕಾರಟ್ ಅವರತ್ತ ತಿರುಗುತ್ತಿದ್ದು, ಅವರು ತನ್ನ ಸ್ಥಾನಕ್ಕೆ ರಾಜೀನಾಮೆ ನೀಡುವ ಕುರಿತು ಪರಿಗಣಿಸಬೇಕು ಎಂಬುದಾಗಿ ಹೇಳಿದ್ದಾರೆ.

ಕಳೆದ ಜುಲೈ 22ರಂದು ಪ್ರಧಾನಿ ಮನಮೋಹನ್ ಸಿಂಗ್ ಅವರು ವಿಶ್ವಾಸ ಮತ ಯಾಚನೆ ಮಾಡಿದ ವೇಳೆ ಸ್ಥಾನ ತ್ಯಜಿಸುವಂತೆ ಪಕ್ಷ ನೀಡಿದ ಸೂಚನೆಯನ್ನು ಧಿಕ್ಕರಿಸಿದ ಕಾರಣಕ್ಕೆ ಚಟರ್ಜಿ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿತ್ತು.

ಕಾರಟ್ ಅವರು ತೃತೀಯ ರಂಗ ಹುಟ್ಟು ಹಾಕಿ ಪರ್ಯಾಯ ಸರ್ಕಾರ ರಚಿಸಲು ಹೊರಟಿರುವುದು ಆತ್ಮಹತ್ಯೆ ಎಂದು ಬಣ್ಣಿಸಿರುವ ಚಟರ್ಜಿ, ಮಾರ್ಕ್ಸ್‌ವಾದಿ ಪಕ್ಷದ ನಾಯಕತ್ವವನ್ನು ಒಬ್ಬ ಜವಾಬ್ದಾರಿಯುಳ್ಳ ಮತ್ತು ಸಮರ್ಥ ನಾಯಕನ ಅಗತ್ಯವಿದೆ ಎಂದು ನುಡಿದರು.

ಕೇರಳ ಮತ್ತು ಪಶ್ಚಿಮ ಬಂಗಾಳದಲ್ಲಿ ಪಕ್ಷವು ಗಳಿಸಿರುವ ಫಲಿತಾಂಶಕ್ಕೆ ತೀವ್ರ ವಿಶಾದ ವ್ಯಕ್ತಪಡಿಸಿದರು. ಈ ಸರ್ತಿ ಎಡಪಕ್ಷಗಳು ಗಳಿಸಿರುವ ಒಟ್ಟು ಸ್ಥಾನ 24 ಹಾಗೂ ಅದರಲ್ಲಿ ಸಿಪಿಐ-ಎಂ ಪಾಲು 16. ಕಳೆದ ಮೂರು ದಶಕಗಳಲ್ಲೇ ಪಕ್ಷ ಸಾಧಿಸಿದ ಕಳಪೆ ಪ್ರದರ್ಶನ ಇದಾಗಿದೆ.

"ನಾನು ಪಕ್ಷದೊಳಗಿಲ್ಲ. ಆದರೂ ಪ್ರಸಕ್ತ ಪರಿಸ್ಥಿತಿ ತನ್ನಲ್ಲಿ ಬೇಸರ ಮ‌ೂಡಿಸಿದೆ. ಪಕ್ಷದ ನಾಯಕತ್ವವು ಫಲಿತಾಂಶಗಳನ್ನು ವಿಶ್ಲೇಷಿಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು" ಎಂದು ಅವರು ಆನಂದ ಬಜಾರ್ ಪತ್ರಿಕಾ‌ಗೆ ನೀಡಿರುವ ಲೇಖನದಲ್ಲಿ ಅಭಿಪ್ರಾಯಿಸಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಆಡ್ವಾಣಿ ವಿಪಕ್ಷ ನಾಯಕ: ರಾಜನಾಥ್ ಸಿಂಗ್
ಪ್ರಧಾನಿ ರಾಜೀನಾಮೆ, ಲೋಕಸಭೆ ವಿಸರ್ಜನೆ
ಗುಜರಾತಿನಲ್ಲಿ ಕುಸಿತ ಕಂಡ ಬಿಜೆಪಿ
300 ಮಂದಿ ಕೋಟ್ಯಾಧಿಪತಿಗಳಿಂದ ಲೋಕಸಭೆ ಶ್ರೀಮಂತ!
ಆಡ್ವಾಣಿ ಸ್ಥಾನಭರ್ತಿಗಾಗಿ ಸರ್ಕಸ್ ಆರಂಭ
ಲೋಕಸಭೆ ಹೊಕ್ಕ ಕ್ರಿಮಿನಲ್‌ಗಳ ಸಂಖ್ಯೆ ಏರಿಕೆ