ಶಿವಸೇನೆ ತೊರೆದು ದೂರಸರಿದು ಮಹಾರಾಷ್ಟ್ರ ನವನಿರ್ಮಾಣ ಸಮಿತಿ ರಚಿಸಿದ ತನ್ನ ತಮ್ಮನ ಮಗ ರಾಜ್ ಠಾಕ್ರೆ ಜತೆಗಿನ ಎಲ್ಲಾ ಸಂಬಂಧಗಳನ್ನು ಶಿವಸೇನಾ ಮುಖ್ಯಸ್ಥ ಬಾಳಾಠಾಕ್ರೆ ಮುರಿದು ಕೊಂಡಿದ್ದಾರೆ. ರಾಜ್ ಅವರ ಎಂಎನ್ಎಸ್ ಹಾಲಿ ಚುನಾವಣೆಯಲ್ಲಿ ಶಿನಸೇನಾ-ಬಿಜೆಪಿ ಮೈತ್ರಿ ಕೂಟಕ್ಕೆ ನೀಡಿರುವ ತೀವ್ರಹೊಡೆತದಿಂದ ಸಿಟ್ಟುಗೊಂಡಿರುವ ಹಿರಿಯ ಠಾಕ್ರೆ ಈ ನಿರ್ಧಾರಕ್ಕೆ ಬಂದಿದ್ದಾರೆ.
"ಯಾರೇ ಆಗಲಿ, ಮರಾಠಿಗರ ಶತ್ರುಗಳು ನನ್ನ ಶತ್ರುಗಳು" ಎಂಬುದಾಗಿ ಬಾಳಾ ಠಾಕ್ರೆ ನೀಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಚುನಾವಣೆಯಲ್ಲಿ ಕಳಪೆ ಫಲಿತಾಂಶಕ್ಕೆ ಕಾರಣವೆಂದರೆ, ಎಂಎನ್ಎಸ್ ಅಭ್ಯರ್ಥಿಗಳು ಕಣದಲ್ಲಿದಲ್ಲಿದ್ದ ಶಿವಸೇನಾ ಬಿಜೆಪಿ ಅಭ್ಯರ್ಥಿಗಳ ಸಾಂಪ್ರದಾಯಿಕ ಓಟುಗಳನ್ನು ತಿಂದುದು. ಇದು ವಿರೋಧ ಪಕ್ಷಗಳಿಗೆ ಅನುಕೂಲವಾಗಿದೆ. ಇದರಿಂದ ಹಿರಿಯ ಠಾಕ್ರೆ ವ್ಯಗ್ರಗೊಂಡಿದ್ದಾರೆ.
ಈ ಬೆಳವಣಿಗೆಗಳಿಗೆ ಪ್ರತಿಕ್ರಿಯಿಸಿರುವ ಎಂಎನ್ಎಸ್ ಉಪಾಧ್ಯಕ್ಷ ವಿ. ಸಾರಸ್ವತ್ ಅವರು, ಇದು ದೊಡ್ಡಪ್ಪ ಮತ್ತು ಮಗನ ನಡುವಿನ ವಿಚಾರವಾಗಿದ್ದು, ಈ ಕುರಿತು ಪ್ರತಿಕ್ರಿಯಿಸುವ ಹಕ್ಕು ಇತರರಿಗಿಲ್ಲ ಎಂದು ಹೇಳಿದ್ದಾರೆ.
ಇದೇವೇಳೆ, ರಾಜ್ಯದ ಇತರರಂತೆ ಎಂಎನ್ಎಸ್ ಮರಾಠಿಗರ ಹಿತಾಸಕ್ತಿಯ ಕುರಿತು ಕಾಳಜಿಹೊಂದಿದೆ ಎಂದು ಅವರು ಹೇಳಿದ್ದಾರೆ. |