ದೆಹಲಿಯಲ್ಲಿ ಮಂಗಳವಾರ ನಡೆದ ಕಾಂಗ್ರೆಸ್ ಸಂಸದೀಯ ಮಂಡಳಿ ಸಭೆಯಲ್ಲಿ ಸೋನಿಯಾಗಾಂಧಿ ಅವರನ್ನು ಸಿಪಿಪಿ ಅಧ್ಯಕ್ಷೆಯನ್ನಾಗಿ ಪುನರಾಯ್ಕೆ ಮಾಡಲಾಗಿದೆ. ಅಲ್ಲದೆ ಮನಮೋಹನ್ ಸಿಂಗ್ ಅವರನ್ನು ಸಿಪಿಪಿ ನಾಯಕನನ್ನಾಗಿ ಆಯ್ಕೆ ಮಾಡಲಾಗಿದ್ದು, ಪ್ರಧಾನಿ ಹಾದಿಯನ್ನು ಸುಗಮವಾಗಿಸಲಾಗಿದೆ.ಸಂಸತ್ ಭವನದಲ್ಲಿ ನಡೆದ ಸಭೆಯಲ್ಲಿ ಮನಮೋಹನ್ ಸಿಂಗ್ ಅವರನ್ನು ರಾಜ್ಯಸಭಾ ನಾಯಕನನ್ನಾಗಿ ಮತ್ತು ಪ್ರಣಬ್ ಮುಖರ್ಜಿ ಅವರನ್ನು ಲೋಕಸಭಾ ನಾಯಕನನ್ನಾಗಿಯೂ ಆಯ್ಕೆ ಮಾಡಲಾಗಿದೆ.205 ಸ್ಥಾನಗಳನ್ನು ಗೆದ್ದಿರುವ ಕಾಂಗ್ರೆಸ್ ಖಾತೆ ಹಂಚಿಕೆ ವೇಳೆ ಸಿಂಹಪಾಲನ್ನು ತನ್ನ ಬಳಿಯೇ ಉಳಿಸಿಕೊಳ್ಳಲಿದೆ ಎಂದು ಮೂಲಗಳು ಹೇಳಿವೆ. ಅದು ಸುಮಾರು 60 ಸಂಪುಟ ಸ್ಥಾನಗಳನ್ನು ಮತ್ತು ಪ್ರಮುಖ ಖಾತೆಗಳನ್ನು ತನ್ನ ಬಳಿಯಲ್ಲೇ ಉಳಿಸಿಕೊಳ್ಳುವ ಇಚ್ಚೆ ಹೊಂದಿದೆ ಎಂದು ಸಮೀಪದ ಮೂಲಗಳು ಹೇಳಿವೆ.ಉಳಿದ 20 ಸಂಪುಟ ಸ್ಥಾನಗಳನ್ನು ತೃಣಮೂಲ ಕಾಂಗ್ರೆಸ್, ಎನ್‌ಸಿಪಿ ಹಾಗೂ ಇದರಲ್ಲೊಂದು ನ್ಯಾಶನಲ್ ಕಾನ್ಫರೆನ್ಸ್‌ಗೂ ಧಕ್ಕಲಿದೆ ಎಂದು ಅಂದಾಜಿಸಲಾಗಿದೆ.ಈ ಮಧ್ಯೆ ಯುಪಿಎಗೆ ಬೇಷರತ್ ಬೆಂಬಲ ಘೋಷಿಸಿ ದೆಹಲಿಯಲ್ಲೇ ಕಳೆದೆರಡು ದಿನಗಳಿಂದ ಮೊಕ್ಕಾಂ ಹೂಡಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿಯವರು ಸಚಿವರಾಗಲು ಸಿದ್ದರಾಮಯ್ಯ ಅಡ್ಡಗಾಲು ಹಾಕುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. |