ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್-ತೃಣಮೂಲ ಮೈತ್ರಿ ಕೂಟವು ಎಡಪಕ್ಷಗಳನ್ನು ಬಗ್ಗುಬಡಿದಿರುವ ಹಿನ್ನೆಲೆಯಲ್ಲಿ, ಮಮತಾ ಬ್ಯಾನರ್ಜಿ ರಾಜ್ಯದಲ್ಲಿ ಮುಂದಿನ ಮುಖ್ಯಮಂತ್ರಿಯಾಗಬಹುದು ಎಂಬುದಾಗಿ ಪಶ್ಚಿಮ ಬಂಗಾಳ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಪ್ರಣಬ್ ಮುಖರ್ಜಿ ಹೇಳಿದ್ದಾರೆ.
ಸದ್ದಿವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮೂರು ದಶಕಗಳ ಬಳಿಕ ರಾಜ್ಯದಲ್ಲಿ ಮತದಾರರು ಎಡಪಕ್ಷಗಳಿಂದ ವಿಮುಕ್ತರಾಗುತ್ತಿರುವ ಕಾರಣ ಮಮತಾ ರಾಜ್ಯದ ಪ್ರಮುಖ ಸ್ಥಾನವನ್ನು ಆಕ್ರಮಿಸುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.
ಮಮತಾ ಅವರು ಮುಖ್ಯಮಂತ್ರಿ ಯಾಗುವ ಕುರಿತು ನೀವೇನು ಹೇಳುತ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಪ್ರಣಬ್, ಮಮತಾ ಅವರು ಮುಖ್ಯಮಂತ್ರಿಯಾಗುವುದರಲ್ಲಿ ನಮಗೇನು ಸಮಸ್ಯೆ ಇಲ್ಲ ಎಂದು ನುಡಿದರು.
ಕಠಿಣ ನಿಲವಿನ ಮಮತಾ ಅವರೊಬ್ಬ ಉತ್ತಮ ಮುಖ್ಯಮಂತ್ರಿಯಾಗಬಹುದೇ ಎಂಬ ಪ್ರಶ್ನೆಗೆ ತಾನು ಯಾವುದೇ ತೀರ್ಪುಗಳನ್ನು ನೀಡಲು ಇಚ್ಚಿಸುವುದಿಲ್ಲ, ಆದರೆ ಸ್ಥಾನಮಾನವು ಜವಬ್ದಾರಿಯನ್ನು ತರುತ್ತದೆ ಎಂದು ಉತ್ತರಿಸಿದರು. |