ಕೇಂದ್ರದಲ್ಲಿ ಅಧಿಕಾರ ಹಿಡಿಯಲು ಸರ್ವ ಸನ್ನದ್ಧವಾಗಿರುವ ಯುಪಿಎ ಮೈತ್ರಿ ಕೂಟವು ತನ್ನ ಅಧ್ಯಕ್ಷೆಯಾಗಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಬುಧವಾರ ಮರುಆಯ್ಕೆ ಮಾಡಿದೆ.ಸೋನಿಯಾ ನಿವಾಸ 10, ಜನಪತ್‌ನಲ್ಲಿ ಯುಪಿಎ ಮೈತ್ರಿಕೂಟದ ಸಭೆ ನಡೆಯಿತು. ಸಭೆಯಲ್ಲಿ ಡಿಎಂಕೆ ಮುಖ್ಯಸ್ಥ ಕರುಣಾನಿಧಿ ಅವರು ಯುಪಿಎ ಅಧ್ಯಕ್ಷೆ ಸ್ಥಾನಕ್ಕೆ ಸೋನಿಯಾ ಗಾಂಧಿ ಹೆಸರನ್ನು ಪ್ರಸ್ತಾಪಿಸಿದ್ದು, ತೃಣಮೂಲ ಕಾಂಗ್ರೆಸ್ ಅಧ್ಯಕ್ಷ ಮಮತಾ ಬ್ಯಾನರ್ಜಿ ಅನುಮೋದಿಸಿದರು.ಕೇಂದ್ರದಲ್ಲಿ ಮುಂದಿನ ಸರ್ಕಾರ ರೂಪಿಸುವ ವಸ್ತುಸ್ಥಿತಿಯ ಕುರಿತು ಚರ್ಚಿಸಲು ಮಿತ್ರ ಪಕ್ಷಗಳ ಮುಖಂಡರು ಸಭೆ ಸೇರಿದ್ದಾರೆ. ಚುನಾವಣಾ ಫಲಿತಾಂಶ ಹೊರಬಿದ್ದು ಯುಪಿಎ ಅತಿದೊಡ್ಡ ಮೈತ್ರಿಕೂಟವಾಗಿ ಮೂಡಿ ಬಂದಬಳಿಕ ಯುಪಿಎ ಸಭೆ ಸೇರಿರುವುದು ಇದೇಮೊದಲಾಗಿದೆ. |