ತೃತೀಯ ರಂಗದ ಸ್ಥಾಪನೆಯೊಂದು ದೊಡ್ಡ ತಪ್ಪು ಎಂದು ಒಪ್ಪಿಕೊಂಡಿರುವ ಸಿಪಿಎಂ ಇದನ್ನು ಜನತೆಯು ರಾಷ್ಟ್ರ ಮಟ್ಟದಲ್ಲಿ ಒಂದು ವಿಶ್ವಾಸಾರ್ಹ ಮತ್ತು ಪರ್ಯಾಯ ಎಂದು ಪರಿಗಣಿಸಿಲ್ಲ ಎಂದು ಹೇಳಿದೆ.
ಮಂಗಳವಾರ ಪಕ್ಷದ ಪಾಲಿಟ್‌ಬ್ಯೂರೋ ಸಭೆ ಸೇರಿದ್ದು, ದಿನಪೂರ್ತಿ ನಡೆದ ಸಭೆಯಲ್ಲಿ ಪಕ್ಷವು ಆತ್ಮ ವಿಮರ್ಷೆ ಮಾಡಿಕೊಂಡಿದೆ. ಕಾಂಗ್ರೆಸ್ ಪಕ್ಷವು ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ, ಅರಣ್ಯಹಕ್ಕು ಕಾಯ್ದೆ ಮತ್ತು ಇತರ ಸಾಮಾಜಿಕ ಕಲ್ಯಾಣ ಕಾರ್ಯಗಳಿಂದ ಲಾಭ ಪಡೆಯಿತು. ಆದರೆ ಈ ಕಾರ್ಯಕ್ರಮಗಳ ಕುರಿತು ಒತ್ತಡ ಹೇರಿರುವುದು ಎಡಪಕ್ಷಗಳು ಎಂದು ಅದು ಹೇಳಿದೆ.
ಇದಲ್ಲದೆ ಕಾಂಗ್ರೆಸ್ ಅಲ್ಪಸಂಖ್ಯಾತರು ಮತ್ತು ಜಾತ್ಯತೀತ ಮನಸ್ಸಿನ ಜನರಿಂದ ಬೆಂಬಲ ಪಡೆಯಿತು, ಈ ವರ್ಗದ ಜನತೆಗೆ ಬಿಜೆಪಿ ಅಧಿಕಾರಕ್ಕೆ ಬರುವುದು ಬೇಡವಿತ್ತು. ಅಲ್ಲದೆ, ಅಣುಒಪ್ಪಂದಕ್ಕೆ ತಮ್ಮ ಬಲವಾದ ವಿರೋಧವು ಮುಸ್ಲಿಮರ ಒಲವು ಗಳಿಸಬಹುದು ಎಂಬ ಲೆಕ್ಕಾಚಾರ ತಪ್ಪಾಗಿದೆ ಎಂದು ಪಕ್ಷವು ಅಭಿಪ್ರಾಯಿಸಿದೆ. |